Posts

Showing posts from September, 2018

ರುಚಿಕರವಾದ ಮಶ್ರೂಮ್ ಆಮ್ಲೇಟ್

Image
 ಆಮ್ಲೇಟ್ ಅನ್ನು ಅನೇಕ ರೀತಿಯಲ್ಲಿ ತಯಾರಿಸಬಹುದು. ಅದರಲ್ಲಿ ಮಶ್ರೂಮ್ ಆಮ್ಲೇಟ್ ಕೂಡ ಒಂದು. ರೆಸ್ಟೋರೆಂಟ್ ಗಳಲ್ಲಿ ದೊರೆಯುವ ಈ ಆಮ್ಲೇಟ್ ಅನ್ನು ಹೆಚ್ಚಿನ ಪರಿಶ್ರಮವಿಲ್ಲದೆ ನಾವೇ ತಯಾರಿಸಬಹುದು. ರುಚಿರುಚಿಯಾದ ಈ ಮಶ್ರೂಮ್ ಆಮ್ಲೇಟ್ ಹೇಗೆ ಮಾಡುವುದು ಎಂದು ನೋಡೋಣ  ಬೇಕಾಗುವ ಸಾಮಾಗ್ರಿಗಳು : ಮೊಟ್ಟೆ 4 , ಅಣಬೆ 1 ಪ್ಯಾಕೆಟ್ , ಚಿಟಿಕೆಯಷ್ಟು ಗರಂ ಮಸಾಲ , ರುಚಿಗೆ ತಕ್ಕ ಉಪ್ಪು , ಈರುಳ್ಳಿ 1 , ಕಾಳು ಮೆಣಸಿನ ಪುಡಿ 1 ಚಮಚ , ಚೀಸ್ 1 ತುಂಡು , ಬೆಣ್ಣೆ 2 ಚಮಚ  ತಯಾರಿಸುವ ವಿಧಾನ : ಒಂದು ಪಾತ್ರೆಗೆ 1 ಚಮಚ ಬೆಣ್ಣೆ ಹಾಕಿ ಉರಿಯಲ್ಲಿಡಿ. ಬೆಣ್ಣೆ ಬಿಸಿಯಾದಾಗ ಅದಕ್ಕೆ ತೊಳೆದಿಟ್ಟುಕೊಂಡ ಅಣಬೆಯನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಗರಂ ಮಸಾಲ ಹಾಕಿ ಚೆನ್ನಾಗಿ ಬೇಯಿಸಬೇಕು. ನಂತರ ಮೊಟ್ಟೆಗೆ ಸ್ವಲ್ಪ ಉಪ್ಪು ಮತ್ತು ಕರಿ ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಕದಡಬೇಕು. ನಂತರ ತವಾವನ್ನು ಗ್ಯಾಸ್ ಮೇಲೆಟ್ಟು ಸ್ವಲ್ಪ 2 ಚಮಚ ಎಣ್ಣೆ ಹಾಕಿ ಕದಡಿದ ಮೊಟ್ಟೆ ಹಾಕಿ , ಮೊಟ್ಟೆ ಸ್ವಲ್ಪ ಬೇಯುವಾಗ ಫ್ರೈ ಮಾಡಿದ ಅಣಬೆಯನ್ನು ಹಾಕಿ, ಅದರ ಮೇಲೆ ಚೀಸ್ ಹಾಕಿ ನಂತರ ತೆಗೆದರೆ ರುಚಿ-ರುಚಿಯಾದ ಮಶ್ರೂಮ್ ಆಮ್ಲೇಟ್ ರೆಡಿ.