Posts

Showing posts from March, 2019

ವಡಾ ಕರಿ ಮಾಡಿ ಸವಿಯಿರಿ..

Image
ಬೇಕಾಗುವ ಸಾಮಗ್ರಿಗಳು: ಕಡಲೆ ಬೇಳೆ - 1 ಕಪ್ ಸೋಂಪು - 1 ಚಮಚ ಹಸಿ ಮೆಣಸು - 2-3 ಜೀರಿಗೆ - 1/2 ಚಮಚ ಕೊತ್ತಂಬರಿ ಸೊಪ್ಪು - ಸ್ವಲ್ಪ ಕರಿಬೇವು - ಸ್ವಲ್ಪ ಉಪ್ಪು - ರುಚಿಗೆ ಎಣ್ಣೆ - ಕರಿಯಲು ಲವಂಗದ ಎಲೆ - ಒಂದು ಚೂರು ಚೆಕ್ಕೆ - ಒಂದು ಚಿಕ್ಕ ಚೂರು ಏಲಕ್ಕಿ - 2 ಲವಂಗ - 2-3 ಇಂಗು - ಸ್ವಲ್ಪ ಅರಿಶಿಣ - 1/2 ಚಮಚ ಅಚ್ಚಖಾರದ ಪುಡಿ - 1/2 ಚಮಚ ದನಿಯಾ ಪುಡಿ - 1/2 ಚಮಚ ಟೊಮ್ಯಾಟೋ - 1 ಈರುಳ್ಳಿ - 1-2 ಕಾಯಿ ಹಾಲು - 1/2 ಕಪ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ ಮಾಡುವ ವಿಧಾನ: ಒಂದು ಕಪ್ ಕಡಲೆ ಬೇಳೆಯನ್ನು 2 ಗಂಟೆ ನೀರಿನಲ್ಲಿ ನೆನೆಸಿ ಅದನ್ನು ಸೋಸಿ ಮಿಕ್ಸಿ ಜಾರ್‌ಗೆ ಹಾಕಿ. ಈಗ ಅದಕ್ಕೆ ಒಂದು ಹಸಿಮೆಣಸು, ಅರ್ಧ ಚಮಚ ಸೋಂಪು, ಅರ್ಧ ಚಮಚ ಜೀರಿಗೆ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ನಂತರ ಅದಕ್ಕೆ ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಸ್ವಲ್ಪ ತಟ್ಟಿ ಕಾದ ಎಣ್ಣೆಯಲ್ಲಿ ಕರಿದು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿಡಿ. ಒಂದು ಪ್ಯಾನ್ ಅನ್ನು ಸ್ಟೌಮೇಲಿಟ್ಟು 2-3 ಚಮಚ ಎಣ್ಣೆಯನ್ನು ಹಾಕಿ ಕಾದ ನಂತರ ಸಣ್ಣ ಉರಿಯಲ್ಲಿ ಅದಕ್ಕೆ ಲವಂಗದ ಎಲೆ, ಚೆಕ್ಕೆ, ಲವಂಗ, ಏಲಕ್ಕಿ, 1/2 ಚಮಚ ಸೋಂಪು, ಸ್ವಲ್ಪ ಇಂಗನ್ನು ಹಾಕಿ ಸ್ವಲ್ಪ ಹುರಿಯಿರಿ. ಹುರಿದ ಪರಿಮಳ ಬರಲು ಆರಂಭಿಸಿದಾಗ ಅದಕ್ಕೆ ಚಿ...