Posts

Showing posts from May, 2019

ವೆಜಿಟೇಬಲ್ ಸ್ಪೆಶಲ್ ಬೋಂಡಾ

Image
ಬೇಕಾಗುವ ಸಾಮಗ್ರಿ: ಆಲೂಗಡ್ಡೆ 3 ಸಣ್ಣದಾಗಿ ಹೆಚ್ಚಿದ ಬೀನ್ಸ್ - 2 ಕಪ್  ಬೀಟ್‌ರೋಟ್ - 1/2 ಕಪ್  ಕ್ಯಾರೇಟ್ - 2 ಕಪ್  ಬಟಾಣಿ - 2 ಕಪ್‌ಗಳು  ಮೆಣಸಿನ ಪುಡಿ - 1 ಚಮಚ  ಅರಶಿನ ಪುಡಿ - ಚಿಟಿಕೆ ಇಂಗಿನ ಪುಡಿ - ಚಿಟಿಕೆ ಜೀರಿಗೆ ಪುಡಿ - 1/2 ಚಮಚ ಗರಮ್ ಮಸಾಲಾ - 1/2 ಚಮಚ  ತಾಜಾ ಲಿಂಬೆ ರಸ - ಇತರ ಸಾಮಾಗ್ರಿಗಳು ಕಡಲೆ ಪುಡಿ - 3 ಕಪ್‌ಗಳು  ಅಕ್ಕಿ ಪುಡಿ - 1/4 ಕಪ್  ಇಂಗಿನ ಪುಡಿ - 1/4 ಚಮಚ  ಹಸಿಮೆಣಸು - 2 ರಿಂದ 3 ಮಧ್ಯಮ ಗಾತ್ರದ ಈರುಳ್ಳಿ - 1 ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ  ಮೆಣಸಿನ ಪುಡಿ - 2 ಚಮಚ  ಬೇಕಿಂಗ್ ಸೋಡಾ - ಸ್ವಲ್ಪ  ಎಣ್ಣೆ - ಕರಿಯಲು  ವಿಧಾನ: ಮೊದಲಿಗೆ ಬಟಾಣಿಯನ್ನು 7-8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ 2-3 ಬಾರಿ ಅವುಗಳನ್ನು ಚೆನ್ನಾಗಿ ತೊಳೆದು ಪಕ್ಕದಲ್ಲಿಡಿ. ಕ್ಯಾರೇಟ್ ಬೀನ್ಸ್, ಬೀಟ್‌ರೂಟ್‌ಗಳನ್ನು ಸಣ್ಣಗೆ ಹೆಚ್ಚಿಕೊಳ್ಳಿ ನಂತರ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಎಸಳು, ಹಸಿಮೆಣಸನ್ನು ಕೂಡ ಸಣ್ಣಗೆ ಹೆಚ್ಚಿಕೊಳ್ಳಿ. ಆಲೂಗಡ್ಡೆ, ನೆನೆಸಿದ ಬಟಾಣಿ, ಕತ್ತರಿಸಿಟ್ಟುಕೊಂಡ ತರಕಾರಿಗಳನ್ನು ಕುಕ್ಕರ್‌ನಲ್ಲಿಟ್ಟು ಸಾಕಷ್ಟು ನೀರು ಮತ್ತು ಸ್ವಲ್ಪ ಉಪ್ಪು ಹಾಕಿ ಬೇಯಲು ಇಡಿ. ಕುಕ್ಕರ್ ತಣ್ಣಗಾದ ಮೇಲೆ ಆಲೂಗಡ್ಡೆ ಮತ್ತು ಇತರ ತರಕಾರಿಗಳನ್ನು ...

ಸ್ವಾದಿಷ್ಠ ತ್ರಿವರ್ಣ ಬರ್ಫಿ

Image
ಬೇಕಾಗುವ ಸಾಮಗ್ರಿಗಳು:  1. ಹಾಲು – 1/4 ಲೀಟರ್ 2. ಹಾಲಿನ ಪೌಡರ್ – 1/4 ಕೆಜಿ 3. ತುಪ್ಪ – 3-4 ಚಮಚ 4. ಸಕ್ಕರೆ – 1/4 ಕಪ್ 5. ಪಿಸ್ತಾ 6. ಕೊಬ್ಬರಿ ತುರಿ 7. ಕೇಸರಿ – ಚಿಟಿಕೆ ಮಾಡುವ ವಿಧಾನ:  ಒಂದು ನಾನ್‍ಸ್ಟಿಕ್ ಪ್ಯಾನ್‍ಗೆ ಹಾಲು ಹಾಕಿ ಕುದಿಸಿ, ಅದಕ್ಕೆ 3 ಚಮಚ ತುಪ್ಪ ಸೇರಿಸಿರಿ. ಬಳಿಕ ಅದಕ್ಕೆ ಹಾಲಿನ ಪೌಡರ್ ಹಾಕಿ ಗಂಟು ಕಟ್ಟದಂತೆ ತಿರುಗಿಸಿ. ಹಾಲು – ತುಪ್ಪದೊಂದಿಗೆ ಪೌಡರ್ ಮಿಕ್ಸ್ ಆಗುವ ತನಕ ಕೈ ಬಿಡದೆ ತಿರುಗಿಸಿ. ನಂತರ ಸಕ್ಕರೆ ಸೇರಿಸಿ ತಳ ಬಿಡುವ ತನಕ ಕುದಿಸಿರಿ. (ಸೌಟಿನಿಂದ ತಿರುಗಿಸಿ). ಎಲ್ಲಾ ಮಿಶ್ರಣ ಗಟ್ಟಿಯಾದ ಬಳಿಕ ಕೆಳಗಿಳಿಸಿರಿ. ಬಳಿಕ ಗಟ್ಟಿಯಾದ ಮಿಶ್ರಣವನ್ನು ಮೂರು ಭಾಗ ಮಾಡಿ ಒಂದು ಸಣ್ಣ ಬೌಲ್‍ಗೆ ಹಾಕಿರಿ. ಒಂದು ಭಾಗಕ್ಕೆ ಹಾಲಿನೊಂದಿಗೆ ಸೇರಿಸಿದ ಕೇಸರಿ ಸೇರಿಸಿ ಮಿಕ್ಸ್ ಮಾಡಿ – ಕೇಸರಿ ಬಣ್ಣವಾಗುತ್ತದೆ. ಇನ್ನೊಂದು ಭಾಗಕ್ಕೆ ಸಿಪ್ಪೆ ತೆಗೆದು ಬೇಯಿಸಿ ರುಬ್ಬಿದ ಪಿಸ್ತಾವನ್ನು ಮಿಕ್ಸ್ ಮಾಡಿ – ಹಸಿರು ಬಣ್ಣವಾಗುತ್ತದೆ. ಇನ್ನೊಂದು ಭಾಗಕ್ಕೆ ಬಿಳಿ ಕೊಬ್ಬರಿ ತುರಿಯ ಪೇಸ್ಟ್ ಅನ್ನು ಮಿಕ್ಸ್ ಮಾಡಿ – ಬಿಳಿ ಬಣ್ಣವಾಗುತ್ತದೆ.  ಈಗ ಒಂದು ತಟ್ಟೆಗೆ ತುಪ್ಪ ಸವರಿ. ಕೇಸರಿ, ಬಿಳಿ, ಹಸಿರು ಬಣ್ಣದ ಮಿಶ್ರಣವನ್ನು ಒಂದರ ಮೇಲೊಂದರಂತೆ ಹಾಕಿ. ಬೇಕಾದ ಆಕೃತಿಗೆ ಕಟ್ ಮಾಡಿ. ತಣ್ಣಗಾದ ಮೇಲೆ ತಟ್ಟೆಯಿಂದ ತೆಗೆದು ಸೇವಿಸಿರಿ.