Posts

ಸ್ವಾದಿಷ್ಠ ರಾಗಿ ಹುರಿಟ್ಟು

Image
ರಾಗಿ ಒಂದು ಪೌಷ್ಟಿಕ ಆಹಾರ. ರಾಗಿಯಿಂದ ದೋಸೆ, ರೊಟ್ಟಿ ಮಾಡಿಕೊಂಡು ತಿನ್ನಬಹುದು. ಹಾಗೆಯೇ ರಾಗಿ ಹುರಿಟ್ಟು ಮಾಡಬಹುದು. ಬೇಸಿಗೆಯಲ್ಲಂತೂ ರಾಗಿಗಿಂತ ಉತ್ತಮ ಖಾದ್ಯ ಮತ್ತೊಂದಿಲ್ಲ. ಬೇಕಾಗುವ ಪದಾರ್ಥ:  ರಾಗಿ ಹುರಿಟ್ಟು ಮಾಡಲು ಬೇಕಾಗುವ ಪದಾರ್ಥಗಳು ಒಂದು ಕೆಜಿ ರಾಗಿ, ನೀರು, ಬೆಲ್ಲ, ತೆಂಗಿನ ತುರಿ ಮತ್ತು ಏಲಕ್ಕಿ ಪುಡಿ. ಮಾಡುವ ವಿಧಾನ :  ರಾಗಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಒಂದು ಬಿಳಿಯ ಬಟ್ಟೆಯಲ್ಲಿ ನೀರನ್ನು ಬಸಿದು ನೆರಳಿನಲ್ಲಿ ಒಣಗಿಸಬೇಕು. ರಾಗಿ ಒಣಗಿದ ಬಳಿಕ ಹುರಿಯಬೇಕು, ಒಂದೊಂದು ಹಿಡಿಯಷ್ಟು ರಾಗಿಯನ್ನು ಬಾಣಲೆಗೆ ಹಾಕಿ ಹುರಿಯಬೇಕು. ಹುರಿದಾಗ ರಾಗಿ ಅರಳುತ್ತದೆ. ಈ ರಾಗಿ ಅರಳನ್ನು ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಬೇಕು. ಈಗ ರಾಗಿ ಹುರಿಟ್ಟು ಸಿದ್ಧ. ಈ ಹುರಿಟ್ಟಿಗೆ ಬೆಲ್ಲ, ಏಲಕ್ಕಿ ಪುಡಿ, ತೆಂಗಿನಕಾಯಿ ತುರಿ ಹಾಕಿ ನೀರಿನಲ್ಲಿ ಕಲೆಸಿ ಉಂಡೆ ಕಟ್ಟಿ ತಿಂದರೆ ರುಚಿಯೇ ರುಚಿ. ಇದನ್ನು ಬೆಲ್ಲದ ರಾಗಿ ಹುರಿಟ್ಟು ಅಂತಲೂ ಕರೆಯುತ್ತಾರೆ. ರಾಗಿ ಹುರಿಟ್ಟು ಸಿದ್ಧಮಾಡಿಟ್ಟುಕೊಂಡು ಬೇಕಿನಿಸಿದಾಗ ಸಕ್ಕರೆ, ಹಾಲು ಬೆರೆಸಿ ಕಲೆಸಿಯೂ ತಿನ್ನಬಹುದು. ಹುಣಸೇಹಣ್ಣನ್ನು ನೀರಿನಲ್ಲಿ ನೆನೆಸಿ, ಕಿವುಚಿ ಹುಣಸೆ ಹಣ್ಣಿನ ರಸದ ಜತೆಗೆ ಹುರಿಟ್ಟು ಹಾಕಿ ಬೆಲ್ಲದ ನೀರಿನಲ್ಲಿ ಕಲೆಸಿ ಕುಡಿಯಲು ಬಹುದು.

ಬಾಯಲ್ಲಿ ನೀರೂರಿಸುತ್ತೆ ಈ ಉಪ್ಪಿನಕಾಯಿ

Image
ಮಾವಿನ ಕಾಯಿ ಉಪ್ಪಿನಕಾಯಿ ಎಲ್ಲರೂ ಇಷ್ಟಪಡುತ್ತಾರೆ. ಹಾಗೇ ಚಿಕನ್ ನಿಂದ ಕೂಡ ಉಪ್ಪಿನ ಕಾಯಿ ತಯಾರಿಸಬಹುದು. ಇದು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಬೇಕಾಗುವ ಸಾಮಾಗ್ರಿಗಳು: ½ ಕೆಜಿ ಚಿಕನ್, ಎಣ್ಣೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಶಿನ 1 ಚಮಚ, ಕೆಂಪು ಮೆಣಸಿನ ಪುಡಿ 1 ಚಮಚ, ಉಪ್ಪು, ದನಿಯಾ ಪುಡಿ 1ಚಮಚ, ಕೊತ್ತಂಬರಿ ಸೊಪ್ಪು, ಕರಿಬೇವು, ಗರಂ ಮಸಾಲ ಪುಡಿ 1 ಚಮಚ, ಬೆಳ್ಳುಳ್ಳಿ ಎಸಳು 4, ಜೀರಿಗೆ 1 ಚಮಚ, ಸಾಸಿವೆ. ಮಾಡುವ ವಿಧಾನ : ಮೊದಲಿಗೆ ಎಣ್ಣೆ ಬಿಸಿ ಮಾಡಿಕೊಂಡು ಅದಕ್ಕೆ ತೊಳೆದಿಟ್ಟುಕೊಂಡ ಚಿಕನ್ ,ಉಪ್ಪು ಮತ್ತು ಅರಶಿನ ಹಾಕಿ ಕಂದು ಬಣ್ಣ ಬರುವವರೆಗೂ ಚೆನ್ನಾಗಿ ಕರಿದು ಬೇರೆ ಪಾತ್ರೆಗೆ ಹಾಕಿಟ್ಟುಕೊಳ್ಳಿ. ಬಳಿಕ ಮತ್ತೆ ಬಾಣಲೆಯಲ್ಲಿ ಎಣ್ಣೆ  ಬಿಸಿ ಮಾಡಿಕೊಂಡು ಅದಕ್ಕೆ  ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ದನಿಯಾ ಪುಡಿ, ಗರಂ ಮಸಾಲ ಪುಡಿ, ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಕರಿದು ಚಿಕನ್ ಜೊತೆ ಮಿಕ್ಸ್ ಮಾಡಿ. ಬಳಿಕ ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ, ಬೆಳ್ಳುಳ್ಳಿ ಎಸಳು, ಜೀರಿಗೆ, ಸಾಸಿವೆ, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು ಹಾಕಿ ಒಗ್ಗರಣೆ ಹಾಕಿ ಅದನ್ನು ಚಿಕನ್ ಜೊತೆ ಸೇರಿಸಿದರೆ ಚಿಕನ್ ಉಪ್ಪಿನಕಾಯಿ ರೆಡಿ. ಇದು ಚಪ್ಪಾತಿ, ಅನ್ನದ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ಮಶ್ರೂಮ್ ಆಮ್ಲೇಟ್ ರೆಸಿಪಿ

Image
ನಗರ ಪ್ರದೇಶದಲ್ಲಿ ವಾಸಿಸುವವರಿಗೆ ಬೆಳಗಿನ ಉಪಹಾರಕ್ಕೆ ಏನು ಮಾಡುವುದು ಎಂಬುದೇ ದೊಡ್ಡ ಚಿಂತೆಯಾಗಿರುತ್ತದೆ ಅದರಲ್ಲೂ ಬ್ಯಾಚುಲರ್ ಆಗಿದ್ದರಂತೂ ಮುಗಿದೇ ಹೋಯಿತು ಅವರ ಪಾಡು ಹೇಳತೀರದು ಅದರೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರೆ ಅದು ದೊಡ್ಡ ಸವಾಲೇ ಸರಿ. ಅವರಿಗಾಗಿಯೇ ಆರೋಗ್ಯಕ್ಕೂ ರುಚಿಗೂ ಉತ್ತಮವಾಗಿರುವ ಒಂದು ಉತ್ತಮ ರೆಸಿಪಿಯನ್ನು ವಿವರವನ್ನು ಇಲ್ಲಿ ಕೊಡ್ತೇವೆ ಒಮ್ಮೆ ನೀವು ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು : ಎಣ್ಣೆ 3 ಚಮಚ  ಹಸಿ ಮೆಣಸಿನಕಾಯಿ 1 ಬೇರಿದ್ದಲ್ಲಿ ಇನ್ನೊಂದು  ಶುಂಠಿ 1 ಚಮಚ ಅಣಬೆ 6-7   ಈರುಳ್ಳಿ 1- 2  ಮೊಟ್ಟೆ 6  ರುಚಿಗೆ ತಕ್ಕಷ್ಟು ಉಪ್ಪು  ಹಸಿ ಮೆಣಸು 2 -3  ತಯಾರಿಸುವ ವಿಧಾನ:  ಒಂದು ಬಟ್ಟಲಿಗೆ ಮೊಟ್ಟೆ, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ ಹಾಕಿ ರುಚಿಗೆ ತಕ್ಕ ಉಪ್ಪು ಸೇರಿಸಿ ಚೆನ್ನಾಗಿ ಕದಡಿ. ನಂತರ ಒಂದು ಪ್ಯಾನ್ ಅನ್ನು ತೆಗೆದುಕೊಳ್ಳಿ ಅದನ್ನು ಗ್ಯಾಸ್ ಮೇಲಿಟ್ಟು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ ಚಿಕ್ಕದಾಗಿ ಕತ್ತರಿಸಿದ ಅಣಬೆ ಹಾಕಿ, ಅಣಬೆ ಬೇಯುವವರೆಗೆ ಚೆನ್ನಾಗಿ ಫ್ರೈ ಮಾಡಿ, ಆ ಅಣಬೆಯನ್ನು ಕದಡಿದ ಮೊಟ್ಟೆಯಲ್ಲಿ ಹಾಕಿ ಮತ್ತೊಮ್ಮೆ ಚೆನ್ನಾಗಿ ಕದಡಿ. ನಂತರ ಪ್ಯಾನ್‌ಗೆ ಮತ್ತೊಮ್ಮೆ ಎಣ್ಣೆ ಹಾಕಿ ಈ ಮೊಟ್ಟೆಯ ಮಿಶ್ರಣವನ್ನು ಹಾಕಿ ಪ್ಯಾನ್ ಅನ್ನು ಪಾತ್ರೆಯಿಂದ ಮುಚ್ಚಿರಿ,...

ಸ್ವಾದಿಷ್ಠ ಅಪ್ಪೇಹುಳಿ

ಬೇಕಾಗುವ ಪದಾರ್ಥಗಳು: 1 ನಿಂಬೆ ಹಣ್ಣು ಅಥವಾ 1 ಬೇಯಿಸಿದ ಮಾವಿನಕಾಯಿ ಒಗ್ಗರಣೆ ಪದಾರ್ಥಗಳು:  ಉದ್ದಿನಬೇಳೆ 1 ಚಮಚ ಒಣ ಮೆಣಸು 1 ಸಾಸಿವೆ ಕಾಳು ಅರ್ಧ ಚಮಚ ಹಸಿ ಮೆಣಸು 1 ಜಜ್ಜಿದ ಬೆಳ್ಳುಳ್ಳಿ ಎಸಳು 2  ಸ್ವಲ್ಪ ಅರಿಶಿನ ನೀರು 2 ಲೋಟ ಉಪ್ಪು 1 ಚಮಚ ಬೆಲ್ಲ / ಸಕ್ಕರೆ - ಅರ್ಧ ಚಮಚ ಮಾಡುವ ವಿಧಾನ:  ಎರಡು ಲೋಟ ನೀರು ತೆಗೆದುಕೊಂಡು ಅದಕ್ಕೆ ಸ್ವಲ್ಪ ಉಪ್ಪು ಮತ್ತು 1 ಚಮಚ ಬೆಲ್ಲ ಹಾಗೂ ನಿಂಬೆ ಹಣ್ಣಿನ ರಸ (ಅಥವಾ ಬೇಯಿಸಿದ ಮಾವಿನಕಾಯಿ ರಸ) ಅನ್ನು ಹಾಕಿ ಇವೆಲ್ಲವನ್ನು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಿ. 3 ಚಮಚ ಅಡುಗೆ ಎಣ್ಣೆಯನ್ನು ಒಗ್ಗರಣೆ ಬಾಂಡ್ಲಿಯಲ್ಲಿ ಬಿಸಿ ಮಾಡಿ. ಅದಕ್ಕೆ ಉದ್ದಿನಬೇಳೆ 2 ಒಣ ಮೆಣಸು ಸಾಸಿವೆ ಮತ್ತು ಹಸಿ ಮೆಣಸು, ಜಜ್ಜಿದ ಬೆಳ್ಳುಳ್ಳಿ 1 ಚಿಟಿಕೆ ಅರಿಶಿನ ಇವನ್ನು ಹಾಕಿ. ಸಾಸಿವೆ ಕಾಳು ಚಿಟಿಪಿಟಿ ಸದ್ದು ಮಾಡಲು ಶುರು ಮಾಡಿದಾಗ ಗ್ಯಾಸ್ ಬಂದು ಮಾಡಿ. ಬಿಸಿಯಾದ ಒಗ್ಗರಣೆಯನ್ನು  ಮೇಲೆ ಹೇಳಿದ ಪಾತ್ರೆಗೆ ಹಾಕಿಬಿಡಿ. (ಆಗ ಹೊರಬರುವ ಅದ್ಭುತವಾದ ಪರಿಮಳವನ್ನು ಆಘ್ರಾಣಿಸಲು ಮರೆಯಬೇಡಿ). ಎಲ್ಲವನ್ನು ಚೆನ್ನಾಗಿ ಕಲುಕಿ, ಉಪ್ಪು ಬೇಕಾದರೆ ಹಾಕಿದರೆ ಅಪ್ಪೆಹುಳಿ ಸಿದ್ಧ.

ಬೆಂಗಾಲಿ ಶೈಲಿಯಲ್ಲಿ ವೆಜ್ ಚಾಪ್ ಮಾಡಿ ಸವಿಯಿರಿ...

Image
ವೆಜ್ ಚಾಪ್ ಕೊಲ್ಕತ್ತಾದ ವಿಶಿಷ್ಟ ಮತ್ತು ಸಾಂಪ್ರದಾಯಿಕ ತಿಂಡಿಯಾಗಿದೆ. ಇದನ್ನು ಹಲವು ತರಕಾರಿಗಳನ್ನು ಸೇರಿಸಿ, ಪ್ರತ್ಯೇಕವಾಗಿ ಬಿಟ್ರೂಟ್ ಸೇರಿಸಿ ಮಾಡಲಾಗುತ್ತದೆ. ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಆರೋಗ್ಯಕ್ಕೂ ಉತ್ತಮವಾದುದೇ ಆಗಿದೆ. ಇದನ್ನು ಮಾಡುವ ವಿಧಾನ ಹೆಚ್ಚಾಗಿ ವೆಜಿಟೇಬಲ್ ಕಟ್ಲೆಟ್ ಅನ್ನು ನೆನಪಿಗೆ ತರುತ್ತದೆಯಾದರೂ ಇದರಲ್ಲಿ ಬಳಸುವ ಸಾಮಗ್ರಿಗಳು ವಿಶಿಷ್ಟವಾಗಿವೆ. ಬೇಕಾಗುವ ಸಾಮಗ್ರಿಗಳು: ಬಟಾಟೆ - 1 ಬೀಟ್ರೂಟ್ - 1 ಕ್ಯಾರೆಟ್ - 1 ಜೀರಿಗೆ - 1 ಚಮಚ ದನಿಯಾ - 1 ಚಮಚ ಸೋಂಪು - 1 ಚಮಚ ಮೆಣಸಿನಕಾಳು - 4-5 ಲವಂಗದ ಎಲೆ - 1 ಚೂರು ಲವಂಗ - 2 ಏಲಕ್ಕಿ - 1 ಚೆಕ್ಕೆ - 1 ಚೂರು ಕೆಂಪು ಮೆಣಸು - 1 ಶುಂಠಿ ಪೇಸ್ಟ್ - 1 ಚಮಚ ಹಸಿಮೆಣಸು - 1 ಸಕ್ಕರೆ - 1 ಚಮಚ ಶೇಂಗಾ - 1/4 ಕಪ್ ಕೊತ್ತಂಬರಿ ಸೊಪ್ಪು - ಸ್ವಲ್ಪ ಮೈದಾ ಹಿಟ್ಟು - 3-4 ಚಮಚ ಜೋಳದ ಹಿಟ್ಟು - 3-4 ಚಮಚ ಬ್ರೆಡ್ ತರಿ - ಸ್ವಲ್ಪ ಉಪ್ಪು - ರುಚಿಗೆ ಎಣ್ಣೆ - ಕರಿಯಲು ಮಾಡುವ ವಿಧಾನ: ಬಟಾಟೆ, ಬೀಟ್ರೂಟ್ ಮತ್ತು ಕ್ಯಾರೆಟ್ ಸಿಪ್ಪೆಯನ್ನು ತೆಗೆದು ಕಟ್ ಮಾಡಿ ಸ್ವಲ್ಪ ಉಪ್ಪನ್ನು ಹಾಕಿ ಉಗಿಯಲ್ಲಿ ಬೇಯಿಸಿ. ನಂತರ ಅದನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿಟ್ಟುಕೊಳ್ಳಿ. ನಂತರ ಒಂದು ಪ್ಯಾನ್‌ನಲ್ಲಿ ಜೀರಿಗೆ, ದನಿಯಾ ಸೋಂಪು, ಮೆಣಸಿನಕಾಳು, ಲವಂಗದ ಎಲೆ, ಲವಂಗ, ಏಲಕ್ಕಿ, ಚೆಕ್ಕೆ ಮತ್ತು ಕೆಂಪು ಮೆಣಸನ್ನು ಹಾಕಿ ಹುರಿದ...

ಸ್ವಾದಿಷ್ಠ ಮೂಲಂಗಿ ಚಟ್ನಿ

Image
ತಯಾರಿಸಲು ಬೇಕಾಗುವ ಸಾಮಗ್ರಿಗಳು: * ಮೂಲಂಗಿ 1 * ಈರುಳ್ಳಿ 1 * 4 ಎಸಳು ಬೆಳ್ಳುಳ್ಳಿ * 2 ಟೀ ಚಮಚ ಕಡಲೆಬೇಳೆ * 1 ಟೀ ಚಮಚ ಉದ್ದಿನಬೇಳೆ * ಶುಂಠಿ * ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು * ಹಸಿಮೆಣಸಿನಕಾಯಿ 3 * ಹುಣಸೆಹಣ್ಣು ಮತ್ತು ಉಪ್ಪು * ಚಿಟಿಕೆ ಅರಿಶಿನ ಮತ್ತು ಇಂಗು * ಎಣ್ಣೆ ಮತ್ತು ಸಾಸಿವೆ  ತಯಾರಿಸುವ ವಿಧಾನ:  ಮೊದಲು ಒಂದು ಬಾಣಲೆಯಲ್ಲಿ ಕಡಲೆಬೇಳೆ ಮತ್ತು ಉದ್ದಿನಬೇಳೆಯನ್ನು ಹುರಿದಿಟ್ಟುಕೊಳ್ಳಬೇಕು. ನಂತರ ಸ್ವಲ್ಪ ಎಣ್ಣೆಯಲ್ಲಿ ಬೆಳ್ಳುಳ್ಳಿ, ಹಸಿಮೆಣಸನ್ನು ಬಾಡಿಸಿಕೊಳ್ಳಬೇಕು. ನಂತರ ಹೆಚ್ಚಿದ ಈರುಳ್ಳಿಯನ್ನು ಬಾಡಿಸಿಕೊಳ್ಳಬೇಕು. ನಂತರ ತುರಿದ ಮೂಲಂಗಿಯನ್ನು ಸೇರಿಸಿ ಅದರ ಹಸಿ ವಾಸನೆಯು ಹೋಗುವ ತನಕ ಬಾಡಿಸಿ ನಂತರ ಚಿಟ್ಕೆ ಅರಿಶಿನವನ್ನು ಬೆರೆಸಿ ಸ್ವಲ್ಪ ಬಾಡಿಸಬೇಕು. ಕೊನೆಯಲ್ಲಿ ಎರಡು ತುಣುಕು ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹುಣಸೆರಸವನ್ನು ಸೇರಿಸಿ ಮಿಶ್ರಣವು ತಣ್ಣಗಾಗಲು ಬಿಡಬೇಕು. ನಂತರ ಈಗಾಗಲೇ ಹುರಿದಿಟ್ಟ ಕಡಲೆಬೇಳೆ ಮತ್ತು ಉದ್ದಿನಬೇಳೆಯನ್ನು ಮಿಕ್ಸಿಯಲ್ಲಿ ಪುಡಿಮಾಡಿ ನಂತರ ತಣ್ಣಗಾದ ಮಿಶ್ರಣವನ್ನು ಅದಕ್ಕೆ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಅದನ್ನು ಮಿಕ್ಸಿಯಲ್ಲಿ ತರತರಿಯಾಗಿ ರುಬ್ಬಿಕೊಳ್ಳಬೇಕು. ನಂತರ ಸಿದ್ಧವಾದ ಚಟ್ನಿಗೆ ಇಂಗು, ಸಾಸಿವೆ, ಕರಿಬೇವಿನ ಒಗ್ಗರಣೆಯನ್ನು ಕೊಟ್ಟರೆ ರುಚಿಯಾದ ಮೂಲಂಗಿ ಚಟ್ನಿ ಸವಿಯಲು ಸಿದ್ಧ. (ಬೇಕಾದರೆ ಕೊಬ್...

ರುಚಿಕರವಾಗಿ ಗಿರಮಿಟ್ಟು ತಯಾರಿಸುವುದು ಹೇಗೆ?

Image
ಸಾಯಂಕಾಲವಾದರೆ ಬಾಯಾಡಿಸಲು ಏನಾದರೂ ತಿನ್ನಲು ಬೇಕು ಎಂದು ಅನ್ನಿಸುವುದು ಸಹಜ. ಹಾಗಾಗಿ ಚಹಾದೊಂದಿಗೆ ರುಚಿಕರವಾಗಿ ಗಿರಮಿಟ್ಟನ್ನು ತಯಾರಿಸಿಕೊಂಡು ಸವಿಯಬಹುದು.  ತಯಾರಿಸಲು ಬೇಕಾಗುವ ಸಾಮಗ್ರಿಗಳು: * ಮಂಡಕ್ಕಿ 1/4 ಕೆಜಿ * ಟೊಮೆಟೊ 2 * ಈರುಳ್ಳಿ 2 * ಹಸಿಮೆಣಸು 4  * ಬೆಳ್ಳುಳ್ಳಿ 2 ಎಸಳು * ಕೊತ್ತಂಬರಿ ಸೊಪ್ಪು 1 ಹಿಡಿ * ಹುರಿಗಡಲೆ ಪುಡಿ 4 ಚಮಚ * ಎಣ್ಣೆ 3 ಚಮಚ * ಕರಿಬೇವು 8 ರಿಂದ 10 ಎಲೆಗಳು * ಉಪ್ಪು ರುಚಿಗೆ ತಕ್ಕಷ್ಚು ತಯಾರಿಸುವ ವಿಧಾನ: ಮೊದಲು ಟೊಮೆಟೊ, ಈರುಳ್ಳಿ, ಹಸಿಮೆಣಸನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಅದು ಕಾದ ನಂತರ ಕರಿಬೇವು, ಬೆಚ್ಚಿದ ಟೊಮೆಟೊ, ಈರುಳ್ಳಿ, ಹಸಿಮೆಣಸು, ಜಜ್ಜಿಕೊಂಡ ಬೆಳ್ಳುಳ್ಳಿ ಉಪ್ಪನ್ನು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಬೇಕು. ನಂತರ ಮಸಾಲೆಯು ಆರಿದ ಮೇಲೆ ಈ ಮಸಾಲೆಯನ್ನು ಮಂಡಕ್ಕಿ ಜೊತೆಗೆ ಸೇರಿಸಿ ಚೆನ್ನಾಗಿ ತಿರುವಬೇಕು. ಇದನ್ನು ಪ್ಲೇಟ್‌ಗೆ ಹಾಕಿದೆ ಮೇಲೆ ಹುರಿಗಡಲೆ ಪುಡಿ, ಸಣ್ಣದಾಗಿ ಹೆಚ್ಚಿಕೊಂಡ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಉದರಿಸಿಕೊಂಡರೆ ರುಚಿಕರವಾದ ಗಿರಮಿಟ್ಟು ಸವಿಯಲು ಸಿದ್ದ.