ಸುಲಭವಾಗಿ ರೆಡಿಯಾಗುವ 'ಆಲೂ ಮಂಚೂರಿ'
ಬೆಂಗಳೂರು : ಆಲೂಗಡ್ಡೆ ಆರೋಗ್ಯಕ್ಕ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಅದನ್ನು ಉಪಯೋಗಿಸಿ ಹಲವಾರು ಬಗೆಯ ರೆಸಿಪಿಗಳನ್ನು ತಯಾರಿಸಬಹುದು. ಅದರಲ್ಲಿ ಒಂದು ಸುಲಭವಾದ ರೆಸಿಪಿ 'ಆಲೂ ಮಂಚೂರಿ'. ತಯಾರಿಸಲು ಬೇಕಾಗುವ ಸಾಮಗ್ರಿಗಳು: ಆಲೂ ಗೆಡ್ಡೆ - 2 , ಕಾರ್ನ್ ಫ್ಲೋರ್- 1 ಕಪ್ ,ಅಚ್ಚ ಖಾರದ ಪುಡಿ - 1 ಚಮಚ , ಉಪ್ಪು - ರುಚಿಗೆ ತಕ್ಕಷ್ಟು , ಎಣ್ಣೆ - ಕರಿಯುವುದಕ್ಕೆ , ಈರುಳ್ಳಿ - 1 ದೊಡ್ಡದು, ಸಣ್ಣಗೆ ಹೆಚ್ಚಿದ್ದು , ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಸ್ವಲ್ಪ, ಶುಂಠಿ ಬೆಳ್ಳುಳ್ಳಿ ಸಣ್ಣಗೆ ಹೆಚ್ಚಿದ್ದು- ಸ್ವಲ್ಪ , ದಪ್ಪ ಮೆಣಸಿನಕಾಯಿ- 1, ಸಣ್ಣಗೆ ಹೆಚ್ಚಿದ್ದು , ಚಿಲ್ಲಿ ಸಾಸ್ - 1 ಚಮಚ , ಟೊಮೇಟೋ ಸಾಸ್ - 3 ಚಮಚ , ಕೊತ್ತಂಬರಿ ಸೊಪ್ಪು - ಸಣ್ಣಗೆ ಹೆಚ್ಚಿದ್ದು ಸ್ವಲ್ಪ. ಮಾಡುವ ವಿಧಾನ: ಮೊದಲಿಗೆ, ಆಲೂಗೆಡ್ಡೆಯನ್ನು ಚೆನ್ನಾಗಿ ತೊಳೆದು, ಅದರ ಸಿಪ್ಪೆಯನ್ನು ತೆಗೆದು ಸಣ್ಣ ಸಣ್ಣ ಹೋಳುಗಳನ್ನಾಗಿ ಕತ್ತರಿಸಿಕೊಳ್ಳಿ. ಒಂದು ಬೌಲ್ನಲ್ಲಿ, ಕಾರ್ನ್ ಫ್ಲೋರ್, ಅಚ್ಚ ಖಾರದ ಪುಡಿ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ನೀರು ಹಾಕಿ ಕಲಿಸಿಟ್ಟುಕೊಳ್ಳಬೇಕು. ಸಣ್ಣ ಸಣ್ಣ ಹೋಳುಗಳನ್ನಾಗಿ ಕತ್ತರಿಸಿಕೊಂಡ ಆಲೂಗೆಡ್ಡೆಯನ್ನು ಅದರಲ್ಲಿ ಅದ್ದಿ ಕರದಿಟ್ಟುಕೊಳ್ಳಬೇಕು. ನಂತರ ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು, ಅದಕ್ಕೆ ಎರಡು ಟೇಬಲ್ ಚಮಚ ಎಣ್ಣೆ ಹಾಕಿ ಅದು ಕಾದ ನಂತರ, ಮೊದಲಿಗೇ ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ ತಾ...