ಚಿಕನ್‌ ಬಿರಿಯಾನಿ


ಬೇಕಾಗುವ ಸಾಮಗ್ರಿಗಳು:


500 ಗ್ರಾಂ ಚಿಕನ್‌, 800 ಗ್ರಾಂ ಬಾಸುಮತಿ ಅಕ್ಕಿ, 1/2 ಕಪ್‌ ಮೊಸರು, 1 ಚಮಚ ಜೀರಿಗೆ, 1 ಕಟ್ಟು ಕೊತ್ತಂಬರಿ ಮತ್ತು ಪುದೀನಾ, 5 ಹಸಿರು ಮೆಣಸಿನಕಾಯಿ, 1 ಚಮಚ ಕೆಂಪು ಮೆಣಸಿನ ಪುಡಿ, 1 ಚಮಚ ಅರಿಶಿಣ
1/2 ಕಪ್‌ ಶುಂಠಿ ಬೆಳ್ಳುಳ್ಳಿ ಪೇಸ್ಟ್‌, 1 ಚಮಚ ಗರಂ ಮಸಾಲಾ ಪುಡಿ, 2 ದೊಡ್ಡ ಈರುಳ್ಳಿ, 1/4 ಕಪ್‌ ಹಾಲು, ಎಣ್ಣೆ, ಉಪ್ಪು

ಮಾಡುವ ವಿಧಾನ:


ಚಿಕನ್‌ ಅನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಬೇಕು. ಅರ್ಧ ಘಂಟೆ ಅಕ್ಕಿಯನ್ನು ನೆನೆಸಿರಬೇಕು. ಚಿಕನ್‌ ಗೆ ಉಪ್ಪು, ಕೆಂಪು ಮೆಣಸಿನಕಾಯಿ ಪುಡಿ, ಗರಂ ಮಸಾಲಾ ಪುಡಿ, ಬೆಳ್ಳುಳ್ಳಿ ಶುಂಠಿ ಪೇಸ್ಟ್‌, ಅರಿಶಿಣ ಮತ್ತು ಮೊಸರನ್ನು ಚೆನ್ನಾಗಿ ಕಲೆಸಬೇಕು. ಕೊತ್ತಂಬರಿ, ಪುದೀನಾ ಮತ್ತು ಹಸಿರು ಮೆಣಸಿನಕಾಯಿಯನ್ನು ಪೇಸ್ಟ್‌ ಮಾಡಿಕೊಂಡು ಮಸಾಲೆ ಮಿಶ್ರಣಕ್ಕೆ ಬೆರೆಸಬೇಕು. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಈರುಳ್ಳಿಯನ್ನು ಕೆಂಪಗಾಗುವವರೆಗೆ ಹುರಿದುಕೊಂಡು ಚಿಕನ್‌ ಗೆ ಬೆರೆಸಿ ಒಂದು ಗಂಟೆ ಕಾಲ ಹಾಗೆಯೇ ಬಿಡಬೇಕು. ಮೇಲೆ ಹೇಳಿದ ಮಸಾಲೆ ಮಿಶ್ರಣವನ್ನು ಬೆರೆಸಬೇಕು. ನಂತರ ಪಾತ್ರೆಯಲ್ಲಿ ನೆನೆಸಿದ ಅಕ್ಕಿಗೆ ಸ್ವಲ್ಪ ಅರಿಶಿಣ, ಸ್ವಲ್ಪ ಗರಂ ಮಸಾಲೆ ಮತ್ತು ಬೇಯುವುದಕ್ಕೆ ಅಗತ್ಯದಷ್ಟು ನೀರು ಹಾಕಿ ಬೇಯಲು ಬಿಡಬೇಕು. ಅದೇ ಪಾತ್ರೆಯಲ್ಲಿ ಸಣ್ಣ ಉರಿಯಲ್ಲಿ ಸ್ವಲ್ಪ ಚಿಕನ… ಮಿಶ್ರಣ ಮತ್ತು ಸ್ವಲ್ಪ ಅನ್ನ, ಹೀಗೆ ಒಂದಾದರೊಂದಂತೆ ತುಂಬುತ್ತಾ ಬರಬೇಕು. ಬೇಕಾದರೆ ಕೇಸರಿಯನ್ನು 1 ನಿಮಿಷ ನೆನೆಸಿ ಅನ್ನದ ಮೇಲೆ ಹಾಕಬೇಕು. ಈಗ ಪಾತ್ರೆಗೆ ಮುಚ್ಚುಳ ಮುಚ್ಚಿ 20 ನಿಮಿಷ ಹಬೆ ಬರುವ ತನಕ ಬೇಯಿಸಿದರೆ ದಮ… ಬಿರಿಯಾನಿ ತಿನ್ನಲು ಸಿದ್ಧವಾಗಿರುತ್ತದೆ.


Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್