Posts

Showing posts from June, 2019

ಮಟನ್ ಸ್ಪೆಷಲ್ ಗ್ರೇವಿ

Image
ಬೇಕಾಗುವ ಸಾಮಗ್ರಿಗಳು  ಮಟನ್ – 1 ಕೆಜಿ ಈರುಳ್ಳಿ – 1 ದೊಡ್ಡದು ಕೊತ್ತಂಬರಿ + ಪುದೀನಾ – 1 ಕಪ್ ಹಸಿಮೆಣಸಿಕಾಯಿ – ರುಚಿಗೆ ತಕ್ಕಷ್ಟು ಚಕ್ಕೆ – ಚಿಕ್ಕದು ಪಲಾವ್ ಎಲೆ – 1 ದೊಡ್ಡದು ಏಲಕ್ಕಿ – 1-2 ಶುಂಠಿ, ಬೆಳ್ಳುಳ್ಳಿ – ಪೇಸ್ಟ್ ಒಂದೂವರೆ ಚಮಚ ಮೊಸರು – 1 ಕಪ್ ಕಸುರಿ ಮೇತಿ – ಚಿಟಿಕೆ ಗರಂ ಮಸಾಲ – 1 ಚಮಚ ಕೆಂಪು ಮೆಣಸಿನಕಾಯಿ ಪುಡಿ (ಚಿಲ್ಲಿ ಪೌಡರ್) – 1 ಚಮಚ (ರುಚಿಗೆ ತಕ್ಕಷ್ಟು) ಜೀರಿಗೆ ಪುಡಿ – 1 ಚಮಚ ದನಿಯಾಪುಡಿ – 1 ಚಮಚ ಉಪ್ಪು – ರುಚಿಗೆ ತಕ್ಕಷ್ಟು ತುಪ್ಪ – 5-6 ಚಮಚ ಮಾಡುವ ವಿಧಾನ: ಮೊದಲಿಗೆ ತೊಳೆದ ಕೊತ್ತಂಬರಿ, ಪುದೀನಾ ಮತ್ತು ಹಸಿಮೆಣಸಿಕಾಯಿಯನ್ನು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ಪೇಸ್ಟ್ ಮಾಡಿಟ್ಟಿಕೊಳ್ಳಿ. ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು 5 ರಿಂದ 6 ಚಮಚ ತುಪ್ಪವನ್ನು ಹಾಕಿ ಅದು ಬಿಸಿಯಾದ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ ಅದನ್ನು ಕೆಂಪಗಾಗುವವರೆಗೆ ಹುರಿಯಿರಿ. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಚಕ್ಕೆ, ಏಲಕ್ಕಿ, ಪಲಾವ್ ಎಲೆಯನ್ನು ಹಾಕಿ ಹಸಿ ವಾಸನೆ ಹೋಗೋ ತನಕ ಫ್ರೈ ಮಾಡಿ. ಈ ಮಿಶ್ರಣಕ್ಕೆ ಚೆನ್ನಾಗಿ ತೊಳೆದ ಮಟನ್ ಅನ್ನು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮುಚ್ಚಲ ಮುಚ್ಚಿ ಬೇಯಿಸಿ. ಅದಕ್ಕೆ ನೀರನ್ನು ಹಾಕಬೇಡಿ ಹಾಗೆಯೇ ಬೇಯಿಸಿ ನಂತರ ಅದಕ್ಕೆ ಗಟ್ಟಿ ಮೊಸರು, ಕಸೂರಿ ಮೇತಿ, ರುಬ್ಬಿದ ಕೊತ್ತಂಬರಿ, ಪುದೀನಾ, ಮೆಣಸಿ...