ಮಟನ್ ಸ್ಪೆಷಲ್ ಗ್ರೇವಿ
ಬೇಕಾಗುವ ಸಾಮಗ್ರಿಗಳು
ಮಟನ್ – 1 ಕೆಜಿ
ಈರುಳ್ಳಿ – 1 ದೊಡ್ಡದು
ಕೊತ್ತಂಬರಿ + ಪುದೀನಾ – 1 ಕಪ್
ಹಸಿಮೆಣಸಿಕಾಯಿ – ರುಚಿಗೆ ತಕ್ಕಷ್ಟು
ಚಕ್ಕೆ – ಚಿಕ್ಕದು
ಪಲಾವ್ ಎಲೆ – 1 ದೊಡ್ಡದು
ಏಲಕ್ಕಿ – 1-2
ಶುಂಠಿ, ಬೆಳ್ಳುಳ್ಳಿ – ಪೇಸ್ಟ್ ಒಂದೂವರೆ ಚಮಚ
ಮೊಸರು – 1 ಕಪ್
ಕಸುರಿ ಮೇತಿ – ಚಿಟಿಕೆ
ಗರಂ ಮಸಾಲ – 1 ಚಮಚ
ಕೆಂಪು ಮೆಣಸಿನಕಾಯಿ ಪುಡಿ (ಚಿಲ್ಲಿ ಪೌಡರ್) – 1 ಚಮಚ (ರುಚಿಗೆ ತಕ್ಕಷ್ಟು)
ಜೀರಿಗೆ ಪುಡಿ – 1 ಚಮಚ
ದನಿಯಾಪುಡಿ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ತುಪ್ಪ – 5-6 ಚಮಚ
ಮಾಡುವ ವಿಧಾನ:
ಮೊದಲಿಗೆ ತೊಳೆದ ಕೊತ್ತಂಬರಿ, ಪುದೀನಾ ಮತ್ತು ಹಸಿಮೆಣಸಿಕಾಯಿಯನ್ನು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ಪೇಸ್ಟ್ ಮಾಡಿಟ್ಟಿಕೊಳ್ಳಿ. ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು 5 ರಿಂದ 6 ಚಮಚ ತುಪ್ಪವನ್ನು ಹಾಕಿ ಅದು ಬಿಸಿಯಾದ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ ಅದನ್ನು ಕೆಂಪಗಾಗುವವರೆಗೆ ಹುರಿಯಿರಿ. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಚಕ್ಕೆ, ಏಲಕ್ಕಿ, ಪಲಾವ್ ಎಲೆಯನ್ನು ಹಾಕಿ ಹಸಿ ವಾಸನೆ ಹೋಗೋ ತನಕ ಫ್ರೈ ಮಾಡಿ. ಈ ಮಿಶ್ರಣಕ್ಕೆ ಚೆನ್ನಾಗಿ ತೊಳೆದ ಮಟನ್ ಅನ್ನು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮುಚ್ಚಲ ಮುಚ್ಚಿ ಬೇಯಿಸಿ.
ಅದಕ್ಕೆ ನೀರನ್ನು ಹಾಕಬೇಡಿ ಹಾಗೆಯೇ ಬೇಯಿಸಿ ನಂತರ ಅದಕ್ಕೆ ಗಟ್ಟಿ ಮೊಸರು, ಕಸೂರಿ ಮೇತಿ, ರುಬ್ಬಿದ ಕೊತ್ತಂಬರಿ, ಪುದೀನಾ, ಮೆಣಸಿನಕಾಯಿ ಮಿಶ್ರಣ ಸೇರಿಸಿ, ನೀರು ಸೇರಿಸಿ 2 ನಿಮಿಷ ಬೇಯಿಸಿ ನಂತರ ಅದಕ್ಕೆ ಗರಂ ಮಸಾಲ, ಚಿಲ್ಲಿ ಪೌಡರ್, ದನಿಯಾಪುಡಿ, ಜೀರಾ ಪುಡಿ ಅನ್ನು ಹಾಕಿ ಬೇಕಿದ್ದರೆ ನೀರನ್ನು ಸೇರಿಸಿ ಚೆನ್ನಾಗಿ ಬೇಯಿಸಿ ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಒಮ್ಮೆ ತಿರುಗಿಸಿ. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಮೇಲೆ ಉದುರಿಸಿದರೆ ಮಟನ್ ಸ್ಪೆಷಲ್ ಗ್ರೇವಿ ಸವಿಯಲು ಸಿದ್ಧ.

Comments
Post a Comment