ಬಟಾಟೆ ಮೊಸರು ಕರಿ

 ಬೇಕಾಗುವ ಸಾಮಾಗ್ರಿಗಳು:

ಬಟಾಟೆ - 4
ಟೊಮ್ಯಾಟೋ - 2
ತುರಿದ ತೆಂಗಿನಕಾಯಿ - 5-6 ಚಮಚ
ಹಸಿಮೆಣಸಿನಕಾಯಿ - 5
ಹುರಿಗಡಲೆ - ಒಂದು ಸಣ್ಣ ಕಪ್
ಲವಂಗ - 2
ಎಣ್ಣೆ - ಸ್ವಲ್ಪ
ಮೊಸರು - ಒಂದು ಸಣ್ಣ ಕಪ್
ಕರಿಬೇವು
ಉಪ್ಪು - ರುಚಿಗೆ ತಕ್ಕಷ್ಟು
 

ಪಾಕ ವಿಧಾನ :

ಬಟಾಟೆಯನ್ನು ಬೇಯಿಸಿ ಅದು ತಣ್ಣಾಗದ ಮೇಲೆ ಅದನ್ನು ಬಜ್ಜಿಮಾಡಿ. ಹುರಿಗಡಲೆ, ತೆಂಗಿನತುರಿ ಮತ್ತು ಹಸಿಮೆಣಸಿನಕಾಯಿಗಳನ್ನು ಚೆನ್ನಾಗಿ ರುಬ್ಬಿ.

ಒಂದು ಪಾತ್ರೆಯಲ್ಲಿ ಸಣ್ಣಗೆ ಹೆಚ್ಚಿದ ಟೊಮ್ಯಾಟೋವನ್ನು 2 ನಿಮಿಷ ಬೇಯಿಸಿ ಅದಕ್ಕೆ ಬಜ್ಜಿ ಮಾಡಿದ ಬಟಾಟೆ, ಮೊಸರು ಮತ್ತು ರುಬ್ಬಿದ ಮಿಶ್ರಣವನ್ನು ಸೇರಿಸಿ ಸಣ್ಣ ಉರಿಯಲ್ಲಿ 10 ನಿಮಿಷ ಬೇಯಿಸಿ.

ಕೊನೆಯಲ್ಲಿ ಇದಕ್ಕೆ ತುಪ್ಪ ಮತ್ತು ಲವಂಗದ ಒಗ್ಗರಣೆ ಕೊಡಿ. ಬಿಸಿ ಇರುವಾಗಲೇ ಬಡಿಸಿ.

Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್