ಗಣೇಶ ಚತುರ್ಥಿ ವಿಶೇಷ: ಸಬ್ಬಕ್ಕಿ ಕಿಚಡಿ ರೆಸಿಪಿ
ಸಬ್ಬಕ್ಕಿ/ಸಾಬುದಾನ ಕಿಚಡಿ ಮಹಾರಾಷ್ಟ್ರದ ಜನಪ್ರಿಯ ಖಾದ್ಯ. ಊಟಕ್ಕಾಗಿ ತಯಾರಿಸುವ ಈ ಪಾಕವಿಧಾನವನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ತಯಾರಿಸುತ್ತಾರೆ. ಆಲೂಗಡ್ಡೆ, ಕಡಲೆಕಾಯಿ ಮತ್ತು ಇತರ ಮಸಾಲೆಗಳೊಂದಿಗೆ ಸಬ್ಬಕ್ಕಿ/ಸಾಬುದಾನ ಬೆರೆಸಿ ತಯಾರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ವ್ರತ ಹಾಗೂ ಊಟದ ವಿಶೇಷ ಅಡುಗೆಯಾಗಿ ಮಾಡುತ್ತಾರೆ.
ಮಸಾಲೆಯಿಂದ ಕೂಡಿರುವ ಆಲೂಗಡ್ಡೆ, ನಿಂಬೆ ಹುಳಿ, ಸಕ್ಕರೆ ಹಾಗೂ ಸಬ್ಬಕ್ಕಿ/ಸಾಬುದಾನ ಮಿಶ್ರಣದ ಕಿಚಡಿ ಬಾಯಲ್ಲಿ ನೀರನ್ನು ತರಿಸುತ್ತದೆ. ಸವಿಯುವಾಗ ಮಧ್ಯದಲ್ಲಿ ಸಿಗುವ ಹುರಿದ ಕಡಲೆಕಾಯಿ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಉಪವಾಸದಂದು ಇದನ್ನು ಸೇವಿಸಿದರೆ ದಿನವಿಡೀ ದೈಹಿಕವಾಗಿ ಶಕ್ತಿಯುತವಾಗಿರಬಹುದು.
ನೆನೆಸಿಕೊಂಡ ಸಾಬೂದಾನ/ಸಬ್ಬಕ್ಕಿ ನೆನೆದು ಒಡೆದಂತಾಗಿದ್ದರೆ ಪಾಕವಿಧಾನಕ್ಕೆ ಹೆಚ್ಚು ಸೂಕ್ತವಾಗಿದೆ ಎಂದು ತಿಳಿಯಬಹುದು. ನೀವೂ ಮನೆಯಲ್ಲಿ ಆರೋಗ್ಯ ಪೂರ್ಣವಾದ ಈ ಪಾಕವಿಧಾನವನ್ನು ಮಾಡಲು ಬಯಸುತ್ತಿದ್ದರೆ ಇಲ್ಲಿರುವುವ ವಿಡಿಯೋ ಪಾಕವಿಧಾನ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಪರಿಶೀಲಿಸಬಹುದು.
ನೀರು - 1 ಕಪ್+ ತೊಳೆಯಲು
ಎಣ್ಣೆ - 1 ಟೇಬಲ್ ಚಮಚ
ಜೀರಿಗೆ - 1 ಟೀಚಮಚ ಹೆಚ್ಚಿಕೊಂಡ
ಮೆಣಸಿನಕಾಯಿ -2 ಟೀಚಮಚ
ಕರಿಬೇವಿನ ಎಲೆ - 6-10
ಬೇಯಿಸಿದ ಆಲೂಗಡ್ಡೆ (ಸಿಪ್ಪೆ ತೆಗೆದು ಹೋಳು ಹೋಳಾಗಿ ಹೆಚ್ಚಿಕೊಂಡಿರುವುದು) - 2
ಸಕ್ಕರೆ ಹಿಟ್ಟು - 3 ಟೀಚಮಚ
ನಿಂಬೆ ರಸ - 1 ನಿಂಬೆ
ರುಚಿಗೆ ತಕ್ಕಷ್ಟು ಉಪ್ಪು
ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು - ಅಲಂಕಾರಕ್ಕೆ
ಹುರಿದ ಕಡಲೆಕಾಯಿ - ಅಲಂಕಾರಕ್ಕೆ
2. ನಂತರ ಒಂದು ಬೌಲ್‍ಗೆ ವರ್ಗಾಯಿಸಿ. ಒಂದು ಕಪ್ ನೀರನ್ನು ಬೆರೆಸಿ, ನೆನೆಯಲು ಬಿಡಿ.
3. ಇದು ಸುಮಾರು 6-8 ಗಂಟೆಗಳ ಕಾಲ ನೆನೆಯಬೇಕು. ಹೆಚ್ಚುವರಿ ನೀರನ್ನು ತೆಗೆಯಿರಿ.
4. ಒಂದು ಸಬ್ಬಕ್ಕಿ/ಸಾಬುದಾನವನ್ನು ಬೆರಳಿನಲ್ಲಿ ಹಿಚುಕಿ ನೋಡಿ. ಅದು ಒಡೆದರೆ ನೆನೆದಿದೆ ಎಂದರ್ಥ.
5. ನಂತರ ಹುರಿದುಕೊಂದ ಕಡಲೆಕಾಯಿ ಮತ್ತು ಸಕ್ಕರೆ ಹಿಟ್ಟನ್ನು ಸೇರಿಸಿ.
6. ಇದರ ಮೇಲೆ ನಿಂಬೆ ರಸವನ್ನು ಹಿಂಡಿ ಚೆನ್ನಾಗಿ ಮಿಶ್ರ ಗೊಳಿಸಿ.
7. ಒಂದು ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
8. ಜೀರಿಗೆ ಮತ್ತು ಬೇಯಿಸಿ ಹೆಚ್ಚಿಕೊಂಡ ಆಲೂಗಡ್ಡೆಯನ್ನು ಹಾಕಿ, 2 ನಿಮಿಷಗಳಕಾಲ ಹುರಿಯಿರಿ.
9. ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ ಮತ್ತು ಕರಿ ಬೇವಿನ ಎಲೆಯನ್ನು ಹಾಕಿ 2 ನಿಮಿಷ ಹುರಿಯಿರಿ.
10. ನಂತರ ಸಾಬೂದಾನ/ಸಬ್ಬಕ್ಕಿ ಮಿಶ್ರಣವನ್ನು ಆಲೂಗಡ್ಡೆಯೊಂದಿಗೆ ಬೆರೆಸಿ ಚೆನ್ನಾಗಿ ಕಲುಕಿ.
11. ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
12. ಇದನ್ನು ಮುಚ್ಚಿಟ್ಟು 7-8 ನಿಮಿಷಗಳ ಕಾಲ ಬೇಯಲು ಬಿಡಿ.
13. ಹೆಚ್ಚಿಕೊಂಡ ಕೊತ್ತಂಬರಿ ಹಾಗೂ ಹುರಿದುಕೊಂಡ ಕಡಲೆಕಾಯಿಯಿಂದ ಅಲಂಕಾರ ಮಾಡಿ ಸವಿಯಲು ನೀಡಿ.
ಮಸಾಲೆಯಿಂದ ಕೂಡಿರುವ ಆಲೂಗಡ್ಡೆ, ನಿಂಬೆ ಹುಳಿ, ಸಕ್ಕರೆ ಹಾಗೂ ಸಬ್ಬಕ್ಕಿ/ಸಾಬುದಾನ ಮಿಶ್ರಣದ ಕಿಚಡಿ ಬಾಯಲ್ಲಿ ನೀರನ್ನು ತರಿಸುತ್ತದೆ. ಸವಿಯುವಾಗ ಮಧ್ಯದಲ್ಲಿ ಸಿಗುವ ಹುರಿದ ಕಡಲೆಕಾಯಿ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಉಪವಾಸದಂದು ಇದನ್ನು ಸೇವಿಸಿದರೆ ದಿನವಿಡೀ ದೈಹಿಕವಾಗಿ ಶಕ್ತಿಯುತವಾಗಿರಬಹುದು.
ನೆನೆಸಿಕೊಂಡ ಸಾಬೂದಾನ/ಸಬ್ಬಕ್ಕಿ ನೆನೆದು ಒಡೆದಂತಾಗಿದ್ದರೆ ಪಾಕವಿಧಾನಕ್ಕೆ ಹೆಚ್ಚು ಸೂಕ್ತವಾಗಿದೆ ಎಂದು ತಿಳಿಯಬಹುದು. ನೀವೂ ಮನೆಯಲ್ಲಿ ಆರೋಗ್ಯ ಪೂರ್ಣವಾದ ಈ ಪಾಕವಿಧಾನವನ್ನು ಮಾಡಲು ಬಯಸುತ್ತಿದ್ದರೆ ಇಲ್ಲಿರುವುವ ವಿಡಿಯೋ ಪಾಕವಿಧಾನ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಪರಿಶೀಲಿಸಬಹುದು.
Ingredients
ಸಾಬೂದಾನ/ಸಬ್ಬಕ್ಕಿ - 1 ಕಪ್ನೀರು - 1 ಕಪ್+ ತೊಳೆಯಲು
ಎಣ್ಣೆ - 1 ಟೇಬಲ್ ಚಮಚ
ಜೀರಿಗೆ - 1 ಟೀಚಮಚ ಹೆಚ್ಚಿಕೊಂಡ
ಮೆಣಸಿನಕಾಯಿ -2 ಟೀಚಮಚ
ಕರಿಬೇವಿನ ಎಲೆ - 6-10
ಬೇಯಿಸಿದ ಆಲೂಗಡ್ಡೆ (ಸಿಪ್ಪೆ ತೆಗೆದು ಹೋಳು ಹೋಳಾಗಿ ಹೆಚ್ಚಿಕೊಂಡಿರುವುದು) - 2
ಸಕ್ಕರೆ ಹಿಟ್ಟು - 3 ಟೀಚಮಚ
ನಿಂಬೆ ರಸ - 1 ನಿಂಬೆ
ರುಚಿಗೆ ತಕ್ಕಷ್ಟು ಉಪ್ಪು
ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು - ಅಲಂಕಾರಕ್ಕೆ
ಹುರಿದ ಕಡಲೆಕಾಯಿ - ಅಲಂಕಾರಕ್ಕೆ
How to Prepare
1. ಸಬ್ಬಕ್ಕಿ ಜರಡಿ ಹಿಡಿದು, ನಂತರ ಗಂಜಿ ಹೋಗುವವರೆಗೆ ಚೆನ್ನಾಗಿ ತೊಳೆಯಿರಿ.2. ನಂತರ ಒಂದು ಬೌಲ್‍ಗೆ ವರ್ಗಾಯಿಸಿ. ಒಂದು ಕಪ್ ನೀರನ್ನು ಬೆರೆಸಿ, ನೆನೆಯಲು ಬಿಡಿ.
3. ಇದು ಸುಮಾರು 6-8 ಗಂಟೆಗಳ ಕಾಲ ನೆನೆಯಬೇಕು. ಹೆಚ್ಚುವರಿ ನೀರನ್ನು ತೆಗೆಯಿರಿ.
4. ಒಂದು ಸಬ್ಬಕ್ಕಿ/ಸಾಬುದಾನವನ್ನು ಬೆರಳಿನಲ್ಲಿ ಹಿಚುಕಿ ನೋಡಿ. ಅದು ಒಡೆದರೆ ನೆನೆದಿದೆ ಎಂದರ್ಥ.
5. ನಂತರ ಹುರಿದುಕೊಂದ ಕಡಲೆಕಾಯಿ ಮತ್ತು ಸಕ್ಕರೆ ಹಿಟ್ಟನ್ನು ಸೇರಿಸಿ.
6. ಇದರ ಮೇಲೆ ನಿಂಬೆ ರಸವನ್ನು ಹಿಂಡಿ ಚೆನ್ನಾಗಿ ಮಿಶ್ರ ಗೊಳಿಸಿ.
7. ಒಂದು ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
8. ಜೀರಿಗೆ ಮತ್ತು ಬೇಯಿಸಿ ಹೆಚ್ಚಿಕೊಂಡ ಆಲೂಗಡ್ಡೆಯನ್ನು ಹಾಕಿ, 2 ನಿಮಿಷಗಳಕಾಲ ಹುರಿಯಿರಿ.
9. ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ ಮತ್ತು ಕರಿ ಬೇವಿನ ಎಲೆಯನ್ನು ಹಾಕಿ 2 ನಿಮಿಷ ಹುರಿಯಿರಿ.
10. ನಂತರ ಸಾಬೂದಾನ/ಸಬ್ಬಕ್ಕಿ ಮಿಶ್ರಣವನ್ನು ಆಲೂಗಡ್ಡೆಯೊಂದಿಗೆ ಬೆರೆಸಿ ಚೆನ್ನಾಗಿ ಕಲುಕಿ.
11. ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
12. ಇದನ್ನು ಮುಚ್ಚಿಟ್ಟು 7-8 ನಿಮಿಷಗಳ ಕಾಲ ಬೇಯಲು ಬಿಡಿ.
13. ಹೆಚ್ಚಿಕೊಂಡ ಕೊತ್ತಂಬರಿ ಹಾಗೂ ಹುರಿದುಕೊಂಡ ಕಡಲೆಕಾಯಿಯಿಂದ ಅಲಂಕಾರ ಮಾಡಿ ಸವಿಯಲು ನೀಡಿ.
Comments
Post a Comment