ಖಾರ ಮತ್ತು ರುಚಿಕರವಾದ ಚಿಕನ್ ರೆಸಿಪಿ

ಯುಗಾದಿಯ ಮರು ದಿನವನ್ನು ವರ್ಷದ ತೊಡಕು ಅಂತ ಆಚರಿಸಲಾಗುವುದು. ಈ ದಿನ ಮಾಂಸಾಹಾರ ತಯಾರಿಸುವುದು ವಿಶೇಷ. ಆದರೆ ಶನಿವಾರ ವೃತ ಮಾಡುವವರು ಈ ದಿನ ಮಾಂಸಾಹಾರ ತಯಾರಿಸುವುದಿಲ್ಲ. ಅದರ ಬದಲು ಭಾನುವಾರ ತಯಾರಿಸುತ್ತಾರೆ.

ಈ ಭಾರಿಯ ವರ್ಷದ ತೊಡಕು ಆಚರಿಸುವವರಿಗಾಗಿ ಈ ಚಿಕನ್ ರೆಸಿಪಿ ನೀಡಲಾಗಿದೆ. ಈ ಅಡುಗೆ ಖಾರವಾಗಿದ್ದು ಪಕ್ಕಾ ಭಾರತೀಯ ಶೈಲಿಯ ಅಡುಗೆಯಾಗಿದೆ.

ಬೇಕಾಗುವ ಸಾಮಾಗ್ರಿಗಳು:

 * ಚಿಕನ್ 1/2 ಕೆಜಿ (ಚಿಕ್ಕ ತುಂಡುಗಳಾಗಿ ಕತ್ತರಿಸಿದ್ದು)
 * ಶುಂಠಿ ಪೇಸ್ಟ್ 2 ಚಮಚ 
* ಈರುಳ್ಳಿ (ಕತ್ತರಿಸಿದ್ದು) 
* ಟೊಮೆಟೊ ರಸ 2 ಚಮಚ 
* ಮೆಂತೆ 1/4 ಚಮಚ
 * ಸಾಸಿವೆ 1 ಚಮಚ 
* ಜೀರಿಗೆ 1 ಚಮಚ
 * ಬಡೇ ಸೋಂಪು 1 ಚಮಚ 
* ಬೆಳ್ಳುಳ್ಳಿ3-4 ಎಸಳು 
* ಕೆಂಪು ಒಣ ಮೆಣಸಿನಕಾಯಿ 4-6
* ಕೆಂಪು ಮೆಣಸಿನ ಪುಡಿ 2 ಚಮಚ
 * ಅರಿಶಿಣ ಪುಡಿ ಚಿಕ್ಕ ಚಮಚದಲ್ಲಿ ಅರ್ಧದಷ್ಟು 
* ಮೊಸರು 1 ಕಪ್
 * ಎಣ್ಣೆ 2 ಚಮಚ
* ನಿಂಬೆ ರಸ 2 ಚಮಚ
* ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

1. ಚಿಕ್ಕ ತುಂಡುಗಳಾಗಿ ಕತ್ತರಿಸಿದ ಚಿಕನ್ ಚೆನ್ನಾಗಿ ತೊಳೆದು ನಿಂಬೆರಸ ಹಾಕಿ, ಪುಡಿ ಮಾಡಿದ ಜೀರಿಗೆ ಮತ್ತು ಬಡೇ ಸೋಂಪು, ಜಜ್ಜಿದ ಬೆಳ್ಳುಳ್ಳಿ ಮಿಶ್ರ ಮಾಡಿ ಇಡಬೇಕು. 
2. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿಮಾಡಬೇಕು. ನಂತರ ಸಾಸಿವೆಯನ್ನು ಹಾಕಬೇಕು. ಸಾಸಿವೆ ಚಟಾಪಟಾ ಶಬ್ದ ಮಾಡುವಾಗ, ಮೆಂತೆ, ಒಣ ಮೆಣಸಿನಕಾಯಿಯನ್ನು ಮುರಿದು ಹಾಕಿ, ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
 3. ಈಗ ಶುಂಠಿ ಪೇಸ್ಟ್ ಸೇರಿಸಿ 1-2 ನಿಮಿಷ ಬಿಸಿಮಾಡಬೇಕು. ಈಗ ಚಿಕನ್ ತುಂಡುಗಳನ್ನು ಹಾಕಿ, ಉರಿ ಸ್ವಲ್ಪ ಕಡಿಮೆ ಮಾಡಿ 2-3 ನಿಮಿಷ ಬೇಯಿಸಬೇಕು. 
4. ಈಗ ಟೊಮೆಟೊ ರಸ ಸೇರಿಸಿ, ರುಚಿಗೆ ತಕ್ಕ ಉಪ್ಪು, ಕೆಂಪು ಮೆಣಸಿನ ಪುಡಿ, ಅರಿಶಿಣ ಹಾಕಿ 1 ಕಪ್ ನೀರು ಹಾಕಿ, ಬಾಣಲೆಯ ಬಾಯಿಯನ್ನು ಬೇರೆ ಪಾತ್ರೆಯಿಂದ ಮುಚ್ಚಿ 7-10 ನಿಮಿಷ ಬೇಯಿಸಬೇಕು. 
5. ಈಗ ಚೆನ್ನಾಗಿ ಕದಡಿದ ಮೊಸರನ್ನು ನಿಧಾನಕ್ಕೆ ಸೇರಿಸಿ 2-3 ನಿಮಿಷ ಕುದಿಸಿ, ಉಪ್ಪು ಸರಿಯಾಗಿದೆಯೆ ನೋಡಿ ನಂತರ ಉರಿಯಿಂದ ತೆಗೆದು ಸ್ವಲ್ಪ ಹೊತ್ತು ಆರಲು ಇಡಬೇಕು. ಈಗ ಖಾರದ ಚಿಕನ್ ಅಡುಗೆ ರೆಡಿ.






Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್