ಅಪ್ಪಟ ಗ್ರಾಮೀಣ ಶೈಲಿಯ ಮೊಟ್ಟೆ ಮಸಾಲ ರೆಸಿಪಿ

ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ ಎನ್ನುತ್ತಾರೆ ಆಹಾರ ತಜ್ಞರು. ಹೌದು ಸುಲಭವಾಗಿ ಸಿಗುವ, ಎಲ್ಲಾ ಕಡೆ ಲಭ್ಯವಿರುವ, ಅಗ್ಗದ ಮತ್ತು ಪೌಷ್ಠಿಕ ಆಹಾರ ಕೋಳಿ ಮೊಟ್ಟೆಗೆ ಸಮನಾದುದು ಇನ್ನೊಂದಿಲ್ಲ. ವಿಶೇಷವಾಗಿ ಬ್ರಹ್ಮಚಾರಿಗಳು, ಒಬ್ಬಂಟಿಗರು, ಹಾಸ್ಟೆಲ್ ಮತ್ತು ಕೊಠಡಿಗಳಲ್ಲಿ ವಾಸ ಮಾಡಿಕೊಂಡು ತಮ್ಮ ಆಹಾರ ತಾವೇ ಸಿದ್ಧಪಡಿಸಿಕೊಳ್ಳುವವರಿಗೆ ಕೋಳಿಮೊಟ್ಟೆ ಅಂತೂ ಆಪತ್ಬಾಂಧವ.
 ಹೌದು ಬ್ಯಾಚ್ಯುಲರ್‌ಗಳ ತಿಂಗಳ ಇಪ್ಪತ್ತು ದಿನಗಳ ಆಹಾರವಾಗಿರುವ ಈ ಮೊಟ್ಟೆಗೆ ಕೊಂಚ ಈರುಳ್ಳಿ, ಟೊಮೇಟೊ, ಹಸಿ ಮೆಣಸು ಸೇರಿಸಿ ನಾನ್ ಸ್ಟಿಕಿ ತವದ ಮೇಲೆ ಹಾಕಿದರೆ ಆಮ್ಲೆಟ್ ಸಿದ್ಧ, ಅಂತೆಯೆ ಇನ್ನೂ ಕೊಂಚ ತರಕಾರಿಗಳನ್ನು ಕೊಚ್ಚಿ ಸೇರಿಸಿದರೆ ಎಗ್ ಬುರ್ಜಿ ರೆಡಿ. ಹೀಗೆ ಮೊಟ್ಟೆಯಲ್ಲಂತೂ ಹತ್ತಕ್ಕೂ ಹೆಚ್ಚು ಬಗೆಯ ವ್ಯಂಜನಗಳನ್ನು ಸಿದ್ಧಪಡಿಸಬಹುದು.
  ಅದರಲ್ಲೂ ಕೋಳಿ ರೊಟ್ಟಿಯನ್ನು (ಕರಾವಳಿಯ ತಿನಿಸು) ಮುಳುಗಿಸಲು ಚಿಕನ್ ಕರಿ ಅಥವಾ ಬೇಯಿಸಿದ ಮೊಟ್ಟೆಯ ಕರಿಯೇ ಅತ್ಯುತ್ತಮವಾಗಿದೆ. ಆದರೆ ಮೊಟ್ಟೆಯೊಂದಿಗೆ ಕಾಯಿತುರಿ ಸೇರಿಸಿ ಯಾವುದಾದರೂ ವ್ಯಂಜನವನ್ನು ಇದುವರೆಗೆ ರುಚಿ ನೋಡಿದ್ದೀರಾ? ಇಲ್ಲವೇ? ಹಾಗಾದರೆ ಒಂದು ಅಪ್ಪಟ ಗ್ರಾಮೀಣ ಶೈಲಿಯ ರುಚಿಕರ ಖಾದ್ಯದಿಂದ ನೀವು ಇದುವರೆಗೆ ವಂಚಿತರಾಗಿದ್ದೀರಿ. ಪರವಾಗಿಲ್ಲ, ಕೆಳಗೆ ನೀಡಿರುವ ವಿಧಾನದ ಮೂಲಕ ಈ ಕೊರತೆಯನ್ನು ತುಂಬಿಕೊಳ್ಳಬಹುದು.
 ಎಲ್ಲರ ಮನಗೆಲ್ಲುವ ಈ ಮಸಾಲಾವನ್ನು ಅಕ್ಕಿರೊಟ್ಟಿ, ಚಪಾತಿ, ಕುಲ್ಛಾ, ಅನ್ನ ಮೊದಲಾದವುಗಳ ಜೊತೆಗೆ ಸೇವಿಸಬಹುದು. ಡಾಬಾ ಶೈಲಿಯಲ್ಲಿ ಖಾರವಾದ ಮೊಟ್ಟೆ ಕರಿ ರೆಸಿಪ




ಪ್ರಮಾಣ: ಇಬ್ಬರಿಗೆ ಒಂದು ಹೊತ್ತಿಗಾಗುವಷ್ಟು

 *ಸಿದ್ಧತಾ ಸಮಯ: ಹತ್ತು ನಿಮಿಷಗಳು
 *ತಯಾರಿಕಾ ಸಮಯ: ಇಪ್ಪತ್ತೈದು ನಿಮಿಷಗಳು
 ಅಗತ್ಯವಿರುವ ಸಾಮಾಗ್ರಿಗಳು: 
*ಮೊಟ್ಟೆಗಳು: ನಾಲ್ಕು (ಸುಮಾರು ಐದು ನಿಮಿಷ ಬೇಯಿಸಿ, ತಣಿಸಿ, ಸಿಪ್ಪೆ ಸುಲಿದದ್ದು)
 *ಕಾಯಿತುರಿ ಕಡೆದದ್ದು - ಅರ್ಧ ಕಪ್ (ಪರ್ಯಾಯವಾಗಿ ಕಾಯಿ ಪೌಡರ್ ಕಡಿಮೆ ನೀರಿನಲ್ಲಿ ಸೇರಿಸಿ ಸಹಾ ಉಪಯೋಗಿಸಬಹುದು)
*ಈರುಳ್ಳಿ: ಒಂದು (ಮಧ್ಯಮಗಾತ್ರ)-ಚಿಕ್ಕದಾಗಿ ಹೆಚ್ಚಿ ಮಿಕ್ಸಿಯಲ್ಲಿ ನುಣ್ಣಗೆ ಕಡೆದಿದ್ದು 
*ಟೊಮೇಟೊ :ಒಂದು (ಮಧ್ಯಮಗಾತ್ರ)-ಚಿಕ್ಕದಾಗಿ ಹೆಚ್ಚಿ ಮಿಕ್ಸಿಯಲ್ಲಿ ನುಣ್ಣಗೆ ಕಡೆದಿದ್ದು
 *ಬೆಳ್ಳುಳ್ಳಿ: ನಾಲ್ಕೈದು ಎಸಳು (ಸುಲಿದು ಜಜ್ಜಿದ್ದು) 
*ಹಸಿಮೆಣಸು: ಮೂರು (ಉ
*ಜೀರಿಗೆ- ½ ಚಿಕ್ಕ ಚಮಚ
 *ಚೆಕ್ಕೆ- 1 ಇಂಚು 
*ಲವಂಗ - 1
 *ದಾಲ್ಚಿನ್ನಿ ಎಲೆ- 1 
*ಉಪ್ಪು-ರುಚಿಗನುಸಾರ
 *ಎಣ್ಣೆ - 2-3 ದೊಡ್ಡ ಚಮಚ ಸುಲಭವಾಗಿ  ತಯಾರಿಸಿ ಆಂಧ್ರ ಶೈಲಿಯ ಮೊಟ್ಟೆ ಕರಿ ರೆಸಿಪಿ 

ವಿಧಾನ: 

1) ದಪ್ಪತಳದ ಬಾಳಲೆಯನ್ನು ಬಿಸಿಮಾಡಿ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ ದಾಲ್ಚಿನ್ನಿ ಎಲೆ, ಲವಂಗ, ಸಾಸಿವೆ, ಜೀರಿಗೆ ಹಾಕಿ. ಸಾಸಿವೆ ಸಿಡಿದ ಬಳಿಕ ನೀರುಳ್ಳಿ ಪೇಸ್ಟ್ ಹಾಕಿ ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
 2) ಈಗ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಅರಿಶಿನ ಪುಡಿ ಉಪ್ಪು ಹಾಕಿ ಒಂದು ನಿಮಿಷದವೆರೆಗೆ ತಿರುವಿ.
 3) ಬಳಿಕ ಟೊಮೇಟೊ ಹಾಕಿ ಸುಮಾರು ಮೂರು ನಿಮಿಷಗಳವರೆಗೆ ತಿರುವುತ್ತಿರಿ. ಬಳಿಕ ಕೊತ್ತಂಬರಿ ಪುಡಿ, ಮೆಣಸಿನ ಪುಡಿ ಮತ್ತು ಕಾಯಿತುರಿ ಪೇಸ್ಟ್ ಹಾಕಿ ತಿರುವಿ. 
4) ನಡು ನಡುವೆ ತಿರುವುತ್ತಾ ಸುಮಾರು ಐದರಿಂದ ಆರು ನಿಮಿಷಗಳವರೆಗೆ ಚೆನ್ನಾಗಿ ಬೇಯುವಂತೆ ಮಾಡಿ. 
5) ಈ ನಡುವೆ ಬೆಂದ ಮೊಟ್ಟೆಗಳನ್ನು ಉದ್ದಕ್ಕೆ ಕತ್ತರಿಸಿ ಎರಡು ಭಾಗ ಮಾಡಿ. ಮಸಾಲೆ ಬೆಂದಿದೆ ಅಂದ ಬಳಿಕ ಸೇರಿಸಿ ಉರಿ ನಂದಿಸಿ ಮಿಶ್ರಣ ಮಾಡಿ. 
6) ಹೆಚ್ಚು ಒತ್ತಡ ನೀಡಲೇ ಮೊಟ್ಟೆ ಮಸಾಲೆಯಲ್ಲಿ ಮಿಶ್ರವಾಗುವಂತೆ ತಿರುವಿ. 7) ಬಳಿಕ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿಬಿಸಿಯಿರುವಂತೆಯೇ ಬಡಿಸಿ.







Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್