ಎಗ್ ಪ್ರೈಡ್ ಮಸಾಲಾ
ಬೇಕಾಗುವ ಸಾಮಾನುಗಳು
1/2 ಕೆಜಿ ಮಾಂಸದ ಚೂರುಗಳು 2ಟೇಬಲ್ ಚಮಚೆ ಅಳವಿನಷ್ಟು ಎಣ್ಣೆ 4 ಈರುಳ್ಳಿ ಪೇಸ್ಟ್ ಮಾಡಿದ್ದು 2 ಚಮಚ ಬೆಳ್ಳುಳ್ಳಿ-ಶುಂಠಿ ಪೇಸ್ಟ್1 ಚಮಚ ಜೀರಿಗೆ ಪುಡಿ4 ಚಮಚ ಅರಸಿನ ಪುಡಿ4 ಚಮಚ ಮೆಣಸಿನ ಪುಡಿ4 ಚಮಚ ತೆಂಗಿನತುರಿ ಪೇಸ್ಟ್ 4ಚಮಚ ಗೋಡಂಬಿ ಪೇಸ್ಟ್ 4 ಚಮಚ ಗಸೆಗಸೆ ಪೇಸ್ಟ್2 ಟೋಮೇಟೋ ಪೇಸ್ಟ್ 1 ಬಟ್ಟಲು ನೀರು4ಚಮಚ ಉಪ್ಪು 3 ಗಟ್ಟಿ ಬೇಯಿಸಿದ ಮೊಟ್ಟೆಗಳನ್ನು ಕತ್ತರಿಸಿದ್ದುಒಂದು ಚಮಚ ಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ
ಚೆನ್ನಾಗಿ ಒಣಗಿದ ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಕಾಯಿಸಿ ಅರೆದ ಈರುಳ್ಳಿ ಪೇಸ್ಟ್ ಸೇರಿಸಿ ತೆಳು ಕಂದು ಬರುವವರೆಗೂ ಕದಡಬೇಕು.ಹಾಗೆಯೇ ಬೆಳ್ಳುಳ್ಳಿ ಶುಂಠಿ ಪೇಸ್ಟ್‌ನ್ನೂ ಸೇರಿಸಿ ಅದೇ ರೀತಿ ಕದಡಬೇಕು. ನಂತರ ಜೀರಿಗೆ ಪುಡಿ, ಅರಸಿನ ಪುಡಿ ಮತ್ತು ಮೆಣಸಿನ ಪುಡಿ, ಕೊತ್ತಂಬರಿ ಬೀಜದ ಪುಡಿ ಸೇರಿಸಿ ಒಂದು ನಿಮಿಷಗಳ ಕಾಲ ಹುರಿಯಬೇಕು.ಇದಕ್ಕೆ ಗೋಡಂಬಿ, ಗಸೆಗಸೆ,ತೆಂಗಿನ ತುರಿ ಸೇರಿಸಿ 5 ನಿಮಿಷಗಳ ಕಾಲ ಹುರಿದು ಟೋಮೇಟೋ ಪೇಸ್ಟ್ ಸೇರಿಸಿಡಬೇಕು. ಆನಂತರ ಹಸಿ ಮಾಂಸದ ಚೂರುಗಳನ್ನು ಸೇರಿಸಿ ಚೆನ್ನಾಗಿ ಕಲಕಿ ನೀರು ಮತ್ತು ಉಪ್ಪನ್ನು ಸೇರಿಸಬೇಕು.ಇವುಗಳನ್ನು 10 ನಿಮಿಷಗಳ ಕಾಲ ಬೇಯಿಸಿ ಪ್ರತೀ ಬೇಯಿಸಿದ ಮೊಟ್ಟೆಯ ಕಾಲು ಭಾಗ ಕತ್ತರಿಸಿ ಮಾಂಸದ ಮೇಲಿಟ್ಟರೆ ಸೊಗಸಾದ ಪಲ್ಯ ರೆಡಿ.ಇದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದಲ್ಲಿ ನೋಡುವುದಕ್ಕೂ ಸೊಗಸಾಗಿರುತ್ತದೆ.
Comments
Post a Comment