ಮಾವಿನ ಕಾಯಿ ಪಚಡಿ, ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

ಮಾವಿನ ಕಾಯಿಯ ಹೆಸರು ಕೇಳಿದಾಗ ಯಾರಿಗೆ ತಾನೇ ಬಾಯಲ್ಲಿ ನೀರೂರುವುದಿಲ್ಲ ಹೇಳಿ? ಹಣ್ಣುಗಳ ರಾಜನೆಂದೇ ಪ್ರಸಿದ್ಧನಾಗಿರುವ ಮಾವು ಹಣ್ಣು ಇಲ್ಲವೇ ಕಾಯಿಯ ರೂಪದಲ್ಲಿದ್ದರೂ ಕೊಡುವ ಸ್ವಾದ ಮಾತ್ರ ಅನೂಹ್ಯವಾದುದು. ಬೇಸಿಗೆಯ ಸೀಸನ್ ಹಣ್ಣು ಎಂದೇ ಪ್ರಸಿದ್ಧನಾಗಿರುವ ಮಾವಿನ ಗುಣಗಳು ಸೀಮಾತೀತ. ಇದರಲ್ಲಿ ಮಾಡುವ ಬಗೆ ಬಗೆ ವ್ಯಂಜನಗಳು ಎಲ್ಲರ ಬಾಯಲ್ಲೂ ನೀರೂರಿಸುವಂತಹದ್ದು. ಕೊಂಕಣಿ ಶೈಲಿಯಲ್ಲಿ ಮಾವಿನ ಹಣ್ಣಿನ ಸಾರು

ಮಾವಿನ ಕಾಯಿಯ ಉಪ್ಪಿನಕಾಯಿ ಹಿಡಿದು ಇದನ್ನು ಬಳಸಿ ಬೇರೆ ಬೇರೆ ಖಾದ್ಯಗಳನ್ನು ತಯಾರಿಸಿಕೊಳ್ಳಬಹುದಾಗಿದೆ. ಮಾವಿನ ಕಾಯಿ ಎಂದಾಗಲೇ ಬಾಯಲ್ಲಿ ನೀರೂರುತ್ತದೆ ಇನ್ನು ಇದಕ್ಕೆ ಉಪ್ಪು ಮತ್ತು ಮೆಣಸಿನ ಹುಡಿ ಬೆರೆಸಿ ಸೇವಿಸುವುದು ಎಂದರೆ ವಾಹ್ ಆ ರುಚಿಯೇ ಬೇರೆ! ಇನ್ನು ಇಂತಹುದೇ ವಿಶೇಷ ರುಚಿಯೊಂದಿಗೆ ನಾವು ಇಂದಿನ ಲೇಖನದಲ್ಲಿ ನಿಮ್ಮ ಮುಂದೆ ಇದ್ದು ಈ ರೆಸಿಪಿ ತಯಾರಿಕೆಗೆ ಬಹಳಷ್ಟು ಹೊತ್ತೇನೂ ಬೇಕಾಗಿಲ್ಲ ಅಂತೆಯೇ ಯಾವುದೇ ತಿಂಡಿ ಅನ್ನದ ಖಾದ್ಯಗಳೊಂದಿಗೆ ಇದು ಸೂಪರ್ ಸೈಡಿಶ್ ಎಂದೆನಿಸಿದೆ ಕೂಡ. ಅದುವೇ ಮಾವಿನ ಕಾಯಿ ಪಚ್ಚಡಿ. ಹುಳಿ ಸಿಹಿ ಬೆರೆತ ಈ ಬಾಯಲ್ಲಿ ನೀರೂರಿಸುವ ಪಚ್ಚಡಿ ತಯಾರಿ ಹೇಗೆ ಎಂಬುದನ್ನು ನೋಡೋಣ.

ಸಾಮಾಗ್ರಿಗಳು:

 *ಹಸಿ ಮಾವು - 1 ಕಪ್(ಕತ್ತರಿಸಿದ್ದು)
 *ಬೆಲ್ಲ - 1/2 ಕಪ್ 
*ಕೆಂಪು ಮೆಣಸು - 5 ರಿಂದ 6 
*ಮೆಂತೆ ಬೀಜಗಳು 
*ಕರಿಬೇವು - 8 ರಿಂದ 10
 *ತುರಿದ ಕೊಬ್ಬರಿ - 1/2 ಕಪ್
 *ಕೊತ್ತಂಬರಿ ಸೊಪ್ಪು - 4 ರಿಂದ 5 ಎಸಳು

 ಮಾಡುವ ವಿಧಾನ 

1.ಒಂದು ಪಾತ್ರೆಯಲ್ಲಿ ಸಾಕಷ್ಟು ನೀರು ತೆಗೆದುಕೊಳ್ಳಿ. ಇದಕ್ಕೆ ಕತ್ತರಿಸಿದ ಮಾವಿನ ಹೋಳುಗಳನ್ನು ಹಾಕಿ. 2.ಮೆತ್ತಗಾಗುವವರೆಗೆ ಮಾವಿನ ಕಾಯಿಯನ್ನು ಬೇಯಿಸಿಕೊಳ್ಳಿ 
3.ಇದೇ ಸಮಯದಲ್ಲಿ ಇನ್ನೊಂದು ಪಾತ್ರೆ ತೆಗೆದುಕೊಂಡು, ಇದಕ್ಕೆ ನೀರು ಮತ್ತು ಬೆಲ್ಲವನ್ನು ಹಾಕಿ ಬೆಲ್ಲವನ್ನು ನೀರಿನಲ್ಲಿ ಪುಡಿ ಮಾಡಿಟ್ಟುಕೊಳ್ಳಿ. 
4.ಬೆಲ್ಲದ ನೀರನ್ನು ಬಸಿದು ಪಕ್ಕಕ್ಕಿಟ್ಟುಕೊಳ್ಳಿ. 
5.ಮಾವಿನ ಕಾಯಿ ಮೆತ್ತಗಾಗುತ್ತಿದ್ದಂತೆ, ಹೆಚ್ಚಿನ ನೀರನ್ನು ಬಸಿದುಕೊಳ್ಳಿ ಮತ್ತು ಬೆಲ್ಲದ ಹುಡಿಗೆ ಮಾವಿನ ತುಂಡುಗಳನ್ನು ಸೇರಿಸಿ. 
6. ಇದಕ್ಕೆ ಹುರಿದ ಕೆಂಪು ಮೆಣಸು ಮತ್ತು ತುರಿದ ಕೊಬ್ಬರಿಯನ್ನು ಹಾಕಿ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ 
7. ಈ ಪ್ಯಾನ್ ತೆಗೆದುಕೊಂಡು ಸ್ವಲ್ಪ ಎಣ್ಣೆ ಹಾಕಿ. ಇದು ಬಿಸಿಯಾಗುತ್ತಿದ್ದಂತೆ, ಸಾಸಿವೆ ಮತ್ತು ಕರಿಬೇವಿನೆಲೆಯನ್ನು ಹಾಕಿ. 
8. ಈಗ ಬೆಲ್ಲದ ನೀರು ಹಾಕಿ ಚೆನ್ನಾಗಿ ಕುದಿಯಲು ಬಿಡಿ. 
9. ತದನಂತರ, ರುಬ್ಬಿದ ಮಾವಿನ ಕಾಯಿ ಪೇಸ್ಟ್ ಅನ್ನು ಬಾಣಲೆಗೆ ಹಾಕಿಕೊಂಡು ಚೆನ್ನಾಗಿ ತಿರುವಿಕೊಳ್ಳಿ. 
10. ಇದಕ್ಕೆ ಒಂದು ಕಪ್ ನೀರನ್ನು ಹಾಕಿ. ಉಪ್ಪು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. 
11. ಕೊತ್ತಂಬರಿ ಸೊಪ್ಪಿನಿಂದ ಪಚ್ಚಡಿಯನ್ನು ಅಲಂಕರಿಸಿ. ನಂತರ ಇದನ್ನು ಒಂದು ಪಾತ್ರೆಗೆ ಹಾಕಿಕೊಂಡು ಬಿಸಿ ರೊಟ್ಟಿ ಅಥವಾ ಅನ್ನದೊಂದಿಗೆ ಸೇವಿಸಿ.



Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್