ಮಲೈ ಕೊಫ್ತಾ
ಬೇಕಾಗುವ ಪದಾರ್ಥಗಳು
ಈರುಳ್ಳಿ - 2
ಗಸಗಸೆ - 1 ಚಮಚ
ದ್ರಾಕ್ಷಿ, ಗೋಡಂಬಿ - 10-12
ಬೆಣ್ಣೆ - 3 ಚಮಚ
ಖಾರದ ಪುಡಿ - ಒಂದೂವರೆ ಚಮಚ
ಬೆಳ್ಳುಳ್ಳಿ - 7-8 ಎಸಳು
ಹಸಿಮೆಣಸಿನ ಕಾಯಿ - 2-3
ಗರಂ ಮಸಾಲಾ - ಒಂದೂವರೆ ಚಮಚ
ಕೊತ್ತಂಬರಿ ಸೊಪ್ಪು- ಸ್ವಲ್ಪ
ಪನ್ನೀರ್ - 50 ಗ್ರಾಂ
ಬ್ರೆಡ್ - 2-3
ಕ್ರೀಂ - 5-6 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - ಕರಿಯಲು
ಮಾಡುವ ವಿಧಾನ...
ಮೊದಲು ತಟ್ಟೆಯೊಂದನ್ನು ತೆಗೆದುಕೊಂಡು ಪನ್ನೀರ್ ನ್ನು ತುರಿದುಕೊಳ್ಳಬೇಕು. ಬ್ರೆಡ್ ಗಳನ್ನು ತೆಗೆದುಕೊಂಡು ನೀರಿನಲ್ಲಿ ನೆನೆಸಿಕೊಂಡು ತೆಗೆದು, ಪನ್ನೀರ್ ಜೊತೆ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಕೊತ್ತಂಬರಿ ಸೊಪ್ಪು, ಸಣ್ಣಗೆ ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ ಸ್ಲಲ್ಪ, ಉಪ್ಪು ಹಾಕಿ ಮಿಶ್ರಣ ಮಾಡಬೇಕು.
ಚಿತ್ತ ಬಟ್ಟಲು ತೆಗೆದುಕೊಂಡು ಅದಕ್ಕೆ ದ್ರಾಕ್ಷಿ, ಗೋಡಂಬಿ, 1 ಚಮಚ ಕ್ರೀಂ, ಹಸಿಮೆಣಸಿನ ಕಾಯಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.
ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಬೇಕು. ನಂತರ ಮಿಶ್ರಣ ಮಾಡಿಕೊಂಡ ಪನ್ನೀರ್ ನ್ನು ವಡೆ ಆಖಾರದಲ್ಲಿ ತಟ್ಟಿ ಮಧ್ಯೆ ದ್ರಾಕ್ಷಿ, ಗೋಡಂಬಿ ಮಿಶ್ರಣ ಇಟ್ಟು ಉಂಡೆ ಮಾಡಿಕೊಂಡು ಎಣ್ಣೆಯಲ್ಲಿ ಹಾಕಿ ಕೆಂಪಗೆ ಕರಿದುಕೊಳ್ಳಬೇಕು.
ಮತ್ತೊಂದೆಡೆ ಪಾತ್ರೆಗೆ 1 ಲೋಟ ನೀರು ಹಾಕಿ ಹೆಚ್ಚಿಕೊಂಡ ಈರುಳ್ಳಿ ಹಾಕಿ 3-4 ನಿಮಿಷ ಬೇಯಿಸಿಕೊಂಡು, ಅದು ತಣ್ಣಗಾದ ಬಳಿಕ ಪೇಸ್ಟ್ ಮಾಡಿಕೊಳ್ಳಬೇಕು.
ಜಾರ್ ತೆಗೆದುಕೊಂಡು ನೀರಿನಲ್ಲಿ ನೆನೆಸಿಕೊಂಡ ಗಸಗಸೆ, ನೀರಿನಲ್ಲಿ ನೆನೆಸಿದ ಗೋಡಂಬಿ, ಬೆಳ್ಳುಳ್ಳಿ ಎಸಳು ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು.
ಬಾಣಲೆಗೆ ಬೆಣ್ಣೆ ಹಾಕಿ ನಂತರ ಈರುಳ್ಳಿ ಪೇಸ್ಟ್ ಹಾಕಿ ಕೆಂಪಗೆ ಮಾಡಿಕೊಳ್ಳಬೇಕು. ನಂತರ ಗೋಡಂಬಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಉಪ್ಪು, ಖಾರದ ಪುಡಿ ಹಾಕಿ ಮಿಶ್ರಣ ಮಾಡಬೇಕು. ನಂತರ ಅರ್ಧ ಬಟ್ಟಲು ನೀರು, ಉಳಿದ ಕ್ರಾಂ, ಗರಂ ಮಸಾಲಾ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕುದಿಯಲು ಬಿಡಬೇಕು. ನಂತರ ಈ ಹಿಂದೆಯೇ ಮಾಡಿಕೊಂಡ ಕೊಫ್ತಾಗಳನ್ನು ಹಾಕಿ 5 ನಿಮಿಷ ಕುದಿಸಿದರೆ ರುಚಿಕರವಾದ ಮಲೈ ಕೋಫ್ತಾ ಸವಿಯಲು ಸಿದ್ಧ.
Comments
Post a Comment