ಮಟನ್ ರೋಸ್ಟ್ ಮಸಾಲಾ
ಬೇಕಾಗುವ ಪದಾರ್ಥಗಳು
ಮೊಸರು - 1 ಬಟ್ಟಲು
ಒಣಗಿದ ಮೆಣಸಿನ ಕಾಯಿ - 6-8
ಜೀರಿಗೆ - ಸ್ವಲ್ಪ
ಸೋಂಪು - ಸ್ವಲ್ಪ
ಉಪ್ಪು- ರುಚಿಗೆ ತಕ್ಕಷ್ಟು
ಶುಂಠಿ, ಬೆಳ್ಳುಳ್ಳಿ - ಸ್ವಲ್ಪ
ನಿಂಬೆ ರಸ - 2 ಚಮಚ
ಕೊತ್ತಂಬರಿ ಸೊಪ್ಪು- ಸ್ವಲ್ಪ
ಮಟನ್ - ಅರ್ಧ ಕೆಜಿ
ಶುಂಠಿ, ಬೆಳ್ಳುಳ್ಳಿ ಪೇಸ್ಟ್ - ಸ್ವಲ್ಪ
ಕಾಳು ಮೆಣಸು - ಅರ್ಧ ಚಮಚ
ತುಪ್ಪ - ಸ್ವಲ್ಪ
ಅರಿಶಿಣ - ಚಿಟಿಕೆ
ಮಾಡುವ ವಿಧಾನ...
ಮೊದಲು ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಬೇಕು. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿಣ, ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. ನಂತರ ತೊಳೆದ ಮಟನ್, ಸ್ವಲ್ಪ ನೀರು ಹಾಗಿ 35-40 ನಿಮಿಷ ಚೆನ್ನಾಗಿ ಬೇಯಿಸಿಕೊಳ್ಳಬೇಕು.
ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಮೊಸರು, ಒಣಗಿದ ಮೆಣಸಿನ ಕಾಯಿ, ಜೀರಿಗೆ, ಸೋಂಪು, ಉಪ್ಪು, ಶುಂಠಿ, ಬೆಳ್ಳುಳ್ಳಿ, ನಿಂಬೆ ರಸ, ಕಾಳು ಮೆಣಸು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಅಗತ್ಯವೆನಿಸಿದರೆ, ಚಕ್ಕೆ, ಲವಂಗವನ್ನು ಹಾಕಬಹುದು.
ಬೆಂದ ಮಟನ್ ಗೆ ಈ ಮಸಾಲೆಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಮಸಾಲೆ ಗಟ್ಟಿಯಾದ ಬಳಿಕ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿದರೆ ರುಚಿಕರವಾದ ಮಟನ್ ಘೀ ರೋಸ್ಟ್ ಮಸಾಲಾ ಸವಿಯಲು ಸಿದ್ಧ.
Comments
Post a Comment