ಎಲೆಕೋಸು ಪಲ್ಯ ಪಾಕವಿಧಾನ

ಎಲೆಕೋಸು ಪಲ್ಯ ಎನ್ನುವುದು ದಕ್ಷಿಣ ಭಾರತದ ಪ್ರಸಿದ್ಧ ಪಾಕವಿಧಾನದಲ್ಲಿ ಒಂದು. ಇದನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ತಯಾರಿಸುತ್ತಾರೆ. ತೆಂಗಿನ ತುರಿಯ ಜೊತೆಗೆ ಬೆರೆತುಕೊಳ್ಳುವ ಎಲೆಕೂಸಿನ ಪಲ್ಯ ಅನನ್ಯವಾದ ಸುವಾಸನೆಯನ್ನು ನೀಡುತ್ತದೆ. ಇದನ್ನು ತಮಿಳುನಾಡಿನಲ್ಲಿ ಕೂಸು ಪೊರಿಯಲ್ ಎಂದು ಕರೆದರೆ, ಕೇರಳದಲ್ಲಿ ಕೇಸೇಜ್ ಥೋರನ್ ಎಂದು ಕರೆಯುತ್ತಾರೆ.
 ಎಲೆಕೋಸು ಪಲ್ಯವನ್ನು ಸಾಂಬರ್ ರೈಸ್, ರಸಮ್ ರೈಸ್ ಜೊತೆಗೆ ಸೈಡ್ ಡಿಶ್ ರೀತಿಯಲ್ಲಿ ಸವಿಯಬಹುದು. ಅಲ್ಲದೆ ದೋಸೆ, ರೊಟ್ಟಿಗೆ ಕರ್ರೀಯ ರೀತಿಯಲ್ಲಿ ತಿನ್ನಬಹುದು. ಉತ್ತಮ ಮಸಾಲದೊಂದಿಗೆ ತಯಾರಿಸಲಾಗುವ ಈ ಪಾಕವಿಧಾನ ಆರೋಗ್ಯಕ್ಕೂ ಪೂರಕವಾಗಿದೆ. ಈ ಪಲ್ಯವನ್ನು ಸುಲಭವಾಗಿ ಹಾಗೂ ಅಗತ್ಯವಿದ್ದಾಗ ಬಹು ಬೇಗ ತಯಾರಿಸಬಹುದು. ಈ ರುಚಿಕರ ಪಲ್ಯವನ್ನು ತಯಾರಿಸುವ ಬಗೆಯ ಕುರಿತು ವಿಡಿಯೋ ಮತ್ತು ಹಂತ ಹಂತವಾದ ಚಿತ್ರ ವಿವರಣೆಯನ್ನು ನಾವಿಲ್ಲಿ ನೀಡಿದ್ದೇವೆ...

Ingredients

ಹೆಚ್ಚಿಕೊಂಡ ತೆಂಗಿನಕಾಯಿ - 1/4 ಬೌಲ್
 ಸಾಸಿವೆ ಕಾಳು - 2 ಟಿಚಮಚ
 ಬ್ಯಾಡಗಿ ಮೆಣಸು - 1 1/2 
ಹುಣಸೆ ಹಣ್ಣು - 1/2 ನಿಂಬೆ ಹಣ್ಣಿನ ಗಾತ್ರದಷ್ಟು
 ಎಣ್ಣೆ - 1 ಟೇಬಲ್ ಚಮಚ 
ಜೀರಿಗೆ - 1 ಟೀ ಚಮಚ 
ಇಂಗು - ಒಂದು ಚಿಟಕಿ 
ಕರಿ ಬೇವಿನ ಎಲೆ - 7-10 
ಹೆಚ್ಚಿಕೊಂಡ ಎಲೆಕೋಸು - 1/2 ಎಲೆಕೋಸು
 ರುಚಿಗೆ ತಕ್ಕಷ್ಟು ಉಪ್ಪು

How to Prepare 

1. ತೆಂಗಿನಕಾಯಿ ಮತ್ತು 1 ಟೀ ಚಮಚ ಸಾಸಿವೆಯನ್ನು ಮಿಕ್ಸರ್ ಪಾತ್ರೆಯಲ್ಲಿ ಹಾಕಿ. 
2. ಅದೇ ರೀತಿ ಬ್ಯಾಡಗಿ ಮೆಣಸು, ಮತ್ತು ಹುಣಸೆ ಹಣ್ಣನ್ನು ಸೇರಿಸಿ. 
3. ಹಾಗೇ ಎಲ್ಲವನ್ನು ಒಟ್ಟಿಗೆ ರುಬ್ಬಿಕೊಳ್ಳಿ. ಅಗತ್ಯಬಿದ್ದರೆ ಒಂದು ಟೇಬಲ್ ಚಮಚ ನೀರನ್ನು ಸೇರಿಸಿ ರುಬ್ಬಿ.
 4. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
 5. ಸಾಸಿವೆ ಕಾಳು, ಜೀರಿಗೆ, ಇಂಗು ಮತ್ತು ಕರಿಬೇವಿನ ಎಲೆಯನ್ನು ಸೇರಿಸಿ. 
6. ನಂತರ ಎಲೆಕೋಸನ್ನು ಬೆರೆಸಿ ಚೆನ್ನಾಗಿ ಕಲುಕಿರಿ. 
7. ಈ ಮಿಶ್ರಣವು ಬೇಯಲು 4-5 ನಿಮಿಷಗಳ ಕಾಲ ಬಿಡಿ.
8. ಮುಚ್ಚಳನ್ನು ಮುಚ್ಚಿ ಬೇಯಿಸಿದರೆ ಅದು ನೀರನ್ನು ಬಿಟ್ಟುಕೊಂಡು ಅರ್ಧ ಬೇಯುತ್ತದೆ. 
9. ಇದಕ್ಕೆ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ. 
10. ರುಬ್ಬಿಕೊಂಡ ಮಸಾಲೆಯನ್ನು ಸೇರಿಸಿ. 
11. ಪುನಃ ಮುಚ್ಚಳವನ್ನು ಮುಚ್ಚಿ 2 ನಿಮಿಷಗಳ ಕಾಲ ಬೇಯಲು ಬಿಡಿ. 
12. ಚೆನ್ನಾಗಿ ಮಿಶ್ರಗೊಳಿಸಿ ನಂತರ ಸವಿಯಲು ನೀಡಿ.





Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್