ನವರಾತ್ರಿ ವಿಶೇಷ: ಸಿಹಿ ಸಿಹಿಯಾದ, ಹಯಗ್ರೀವ ರೆಸಿಪಿ
ದೇವರ ನೈವೇದ್ಯಕ್ಕೆ ಅಧಿಕೃತವಾಗಿ ತಯಾರಿಸುವ ಕರ್ನಾಟಕ ಶೈಲಿಯ ಒಂದು ಸಿಹಿ ತಿಂಡಿ ಹಯಗ್ರೀವ. ಬೆಲ್ಲ, ಕಡಲೇ ಬೇಳೆ, ತೆಂಗಿನ ತುರಿ, ತುಪ್ಪ ಹಾಗೂ ಒಣಗಿದ ಹಣ್ಣುಗಳ ಸಮ್ಮಿಶ್ರಣಗಳಿಂದ ತಯಾರಿಸಲಾಗುತ್ತದೆ. ಕಡಲೇ ಮಡ್ಡಿ, ಹೂರಣ ಎಂದು ಸಹ ಇದನ್ನು ಕರೆಯುತ್ತಾರೆ. ಹಬ್ಬ ಹಾಗೂ ಧಾರ್ಮಿಕ ಸಮಾರಂಭಗಳಲ್ಲಿ ದೇವರ ನೈವೇದ್ಯಕ್ಕೆಂದು ತಯಾರಿಸಿ, ಭಕ್ತರಿಗೆ ಹಂಚಲಾಗುವುದು.
ಬಾಯಿ ತುಂಬಿಸುವ ಈ ಸಿಹಿ ತಿಂಡಿಯನ್ನು ಸವಿಯಲು ಕುಳಿತರೆ ನಾಲಿಗೆ ಮತ್ತೆ ಮತ್ತೆ ಬೇಕೆಂಬ ಸಂವೇದನೆಯನ್ನುಂಟುಮಾಡುತ್ತದೆ. ಸರಳವಾಗಿ ತಯಾರಿಸಬಹುದಾದ ಈ ಸಿಹಿ ತಿಂಡಿಯನ್ನು ಬೇಕೆಂದಾಗ ಮನೆಯಲ್ಲಿ ತಯಾರಿಸಿಕೊಳ್ಳಬಹುದು. ನಿಮಗೂ ಈ ಸಿಹಿ ತಿಂಡಿಯನ್ನು ಮಾಡಬೇಕೆನ್ನುವ ಮನಸ್ಸಾದರೆ ಈ ಕೆಳಗೆ ನೀಡಿರುವ ವೀಡಿಯೋ ಹಾಗೂ ಚಿತ್ರವಿವರಣೆಯನ್ನು ವೀಕ್ಷಿಸಿ.
ಕಡಲೇ ಬೇಳೆ -1 ಕಪ್
ನೀರು -3 ಕಪ್
ಬೆಲ್ಲ -2 ಕಪ್
ಗಸಗಸೆ -1, 1/2 ಟೇಬಲ್ ಚಮಚ
ತುಪ್ಪ - 9 ಟೇಬಲ್ ಚಮಚ
ಒಣದ್ರಾಕ್ಷಿ -2 ಟೇಬಲ್ ಚಮಚ
ತುರಿದ ಒಣ ಕೊಬ್ಬರಿ -3/4 ಬೌಲ್
ಕತ್ತರಿಸಿಕೊಂಡ ಗೋಡಂಬಿ- 2 ಟೇಬಲ್ ಚಮಚ
ಲವಂಗ - 4-5
ಏಲಕ್ಕಿ ಪುಡಿ - 2,1/2ಟೀ ಚಮಚ
1. ಒಂದು ಬೌಲ್‍ನಲ್ಲಿ ಕಡಲೇ ಬೇಳೆಯನ್ನು ಹಾಕಿ.
2. ಅದಕ್ಕೆ 2 ಕಪ್ ನೀರನ್ನು ಸೇರಿಸಿ ಅರ್ಧ ಗಂಟೆ ನೆನೆಯಲು ಬಿಡಿ.
3. ನೆನೆಸಿಕೊಂಡ ಕಡಲೇ ಬೇಳೆಯನ್ನು ಕುಕ್ಕರ್‍ಗೆ ಹಾಕಿ.
4. ಅರ್ಧ ಕಪ್ ನೀರನ್ನು ಸೇರಿಸಿ.
5. 4-5 ಸೀಟಿ ಕೂಗಿಸಿ ಬೇಯಿಸಿ. ನಂತರ ಆರಲು ಬಿಡಿ.
6. ಮುಚ್ಚಳವನ್ನು ತೆರೆದು, ಲಘು ಪ್ರಮಾಣದಲ್ಲಿ ಬೇಳೆಯನ್ನು ಅರೆದು ಒಂದೆಡೆ ಇಡಿ.
7. ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಸೇರಿಸಿ ಬಿಸಿ ಮಾಡಿ.
8. ತಕ್ಷಣವೇ ಅರ್ಧ ಕಪ್ ನೀರನ್ನು ಬೆರೆಸಿ.
9. ಬೆಲ್ಲ ಸಂಪೂರ್ಣವಾಗಿ ಕರಗಲು, ಮಧ್ಯಮ ಉರಿಯಲ್ಲಿ 5-7 ನಿಮಿಷಗಳ ಕಾಲ ಕುದಿಸಿ.
10. ಬೆಲ್ಲದ ಪಾಕಕ್ಕೆ ಬೇಯಿಸಿಕೊಂಡ ಬೇಳೆಯನ್ನು ಸೇರಿಸಿ.
11. ಚೆನ್ನಾಗಿ ಬೆರೆಸಿ.
12. ಗಸಗಸೆಯನ್ನು ಬೆರೆಸಿ, ಚೆನ್ನಾಗಿ ಮಿಶ್ರಗೊಳಿಸಿ.
13. 3 ಟೇಬಲ್ ಚಮಚ ತುಪ್ಪವನ್ನು ಸೇರಿಸಿ.
14. ಇವೆಲ್ಲವನ್ನು 15 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ.
15. ಒಣದ್ರಾಕ್ಷಿ ಮತ್ತು ಒಣ ತೆಂಗಿನ ತುರಿಯನ್ನು ಸೇರಿಸಿ.
16. ಪುನಃ 5 ಟೇಬಲ್ ಚಮಚ ತುಪ್ಪವನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
17. ಇದನ್ನು 2 ನಿಮಿಷ ಬೇಯಿಸಲು ಬಿಡಿ.
18. ಈ ಮಧ್ಯೆ, ಒಂದು ಚಿಕ್ಕ ಪಾತ್ರೆಯಲ್ಲಿ ಒಂದು ಟೇಬಲ್ ಚಮಚ ತುಪ್ಪವನ್ನು ಸೇರಿಸಿ ಬಿಸಿ ಮಾಡಿ.
19. ಕತ್ತರಿಸಿಕೊಂಡ ಗೋಡಂಬಿಯನ್ನು ಹಾಕಿ 2 ನಿಮಿಷ ಹುರಿಯಿರಿ. ಅವು ಹುರಿದು ಹೊಂಬಣ್ಣಕ್ಕೆ ತಿರುಗಬೇಕು.
20. ನಂತರ ಲವಂಗವನ್ನು ಸೇರಿಸಿ.
21. ಬೇಯಿಸಿದ ಗೋಡಂಬಿ ಮಿಶ್ರಣವನ್ನು ಬೆಲ್ಲ ಮತ್ತು ಬೇಳೆಯ ಮಿಶ್ರಣಕ್ಕೆ ಸೇರಿಸಿ.
22. ಏಲಕ್ಕಿ ಪುಡಿಯನ್ನು ಸೇರಿಸಿ, ಚೆನ್ನಾಗಿ ಬೆರೆಸಿ.
23. ಬಿಸಿ ಇರುವಾಗಲೇ ಸವಿಯಲು ನೀಡಿ.

Ingredients
ಕಡಲೇ ಬೇಳೆ -1 ಕಪ್
ನೀರು -3 ಕಪ್
ಬೆಲ್ಲ -2 ಕಪ್
ಗಸಗಸೆ -1, 1/2 ಟೇಬಲ್ ಚಮಚ
ತುಪ್ಪ - 9 ಟೇಬಲ್ ಚಮಚ
ಒಣದ್ರಾಕ್ಷಿ -2 ಟೇಬಲ್ ಚಮಚ
ತುರಿದ ಒಣ ಕೊಬ್ಬರಿ -3/4 ಬೌಲ್
ಕತ್ತರಿಸಿಕೊಂಡ ಗೋಡಂಬಿ- 2 ಟೇಬಲ್ ಚಮಚ
ಲವಂಗ - 4-5
ಏಲಕ್ಕಿ ಪುಡಿ - 2,1/2ಟೀ ಚಮಚ
How to Prepare
1. ಒಂದು ಬೌಲ್‍ನಲ್ಲಿ ಕಡಲೇ ಬೇಳೆಯನ್ನು ಹಾಕಿ.
2. ಅದಕ್ಕೆ 2 ಕಪ್ ನೀರನ್ನು ಸೇರಿಸಿ ಅರ್ಧ ಗಂಟೆ ನೆನೆಯಲು ಬಿಡಿ.
3. ನೆನೆಸಿಕೊಂಡ ಕಡಲೇ ಬೇಳೆಯನ್ನು ಕುಕ್ಕರ್‍ಗೆ ಹಾಕಿ.
4. ಅರ್ಧ ಕಪ್ ನೀರನ್ನು ಸೇರಿಸಿ.
5. 4-5 ಸೀಟಿ ಕೂಗಿಸಿ ಬೇಯಿಸಿ. ನಂತರ ಆರಲು ಬಿಡಿ.
6. ಮುಚ್ಚಳವನ್ನು ತೆರೆದು, ಲಘು ಪ್ರಮಾಣದಲ್ಲಿ ಬೇಳೆಯನ್ನು ಅರೆದು ಒಂದೆಡೆ ಇಡಿ.
7. ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಸೇರಿಸಿ ಬಿಸಿ ಮಾಡಿ.
8. ತಕ್ಷಣವೇ ಅರ್ಧ ಕಪ್ ನೀರನ್ನು ಬೆರೆಸಿ.
9. ಬೆಲ್ಲ ಸಂಪೂರ್ಣವಾಗಿ ಕರಗಲು, ಮಧ್ಯಮ ಉರಿಯಲ್ಲಿ 5-7 ನಿಮಿಷಗಳ ಕಾಲ ಕುದಿಸಿ.
10. ಬೆಲ್ಲದ ಪಾಕಕ್ಕೆ ಬೇಯಿಸಿಕೊಂಡ ಬೇಳೆಯನ್ನು ಸೇರಿಸಿ.
11. ಚೆನ್ನಾಗಿ ಬೆರೆಸಿ.
12. ಗಸಗಸೆಯನ್ನು ಬೆರೆಸಿ, ಚೆನ್ನಾಗಿ ಮಿಶ್ರಗೊಳಿಸಿ.
13. 3 ಟೇಬಲ್ ಚಮಚ ತುಪ್ಪವನ್ನು ಸೇರಿಸಿ.
14. ಇವೆಲ್ಲವನ್ನು 15 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ.
15. ಒಣದ್ರಾಕ್ಷಿ ಮತ್ತು ಒಣ ತೆಂಗಿನ ತುರಿಯನ್ನು ಸೇರಿಸಿ.
16. ಪುನಃ 5 ಟೇಬಲ್ ಚಮಚ ತುಪ್ಪವನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
17. ಇದನ್ನು 2 ನಿಮಿಷ ಬೇಯಿಸಲು ಬಿಡಿ.
18. ಈ ಮಧ್ಯೆ, ಒಂದು ಚಿಕ್ಕ ಪಾತ್ರೆಯಲ್ಲಿ ಒಂದು ಟೇಬಲ್ ಚಮಚ ತುಪ್ಪವನ್ನು ಸೇರಿಸಿ ಬಿಸಿ ಮಾಡಿ.
19. ಕತ್ತರಿಸಿಕೊಂಡ ಗೋಡಂಬಿಯನ್ನು ಹಾಕಿ 2 ನಿಮಿಷ ಹುರಿಯಿರಿ. ಅವು ಹುರಿದು ಹೊಂಬಣ್ಣಕ್ಕೆ ತಿರುಗಬೇಕು.
20. ನಂತರ ಲವಂಗವನ್ನು ಸೇರಿಸಿ.
21. ಬೇಯಿಸಿದ ಗೋಡಂಬಿ ಮಿಶ್ರಣವನ್ನು ಬೆಲ್ಲ ಮತ್ತು ಬೇಳೆಯ ಮಿಶ್ರಣಕ್ಕೆ ಸೇರಿಸಿ.
22. ಏಲಕ್ಕಿ ಪುಡಿಯನ್ನು ಸೇರಿಸಿ, ಚೆನ್ನಾಗಿ ಬೆರೆಸಿ.
23. ಬಿಸಿ ಇರುವಾಗಲೇ ಸವಿಯಲು ನೀಡಿ.
Comments
Post a Comment