ಕ್ಯಾರೆಟ್ ಉಪ್ಪಿನಕಾಯಿ, ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!
ಭರ್ಜರಿ ಔತಣದಲ್ಲಿ ಎಲ್ಲಾ ಪ್ರಮುಖ ಖಾದ್ಯಗಳಿಗೂ ಅದರದ್ದೇ ಆದ ಬೇಡಿಕೆ ಮತ್ತು ವಿಶೇಷತೆ ಇದೆ. ಇಂತಹ ಔತಣಗಳಲ್ಲಿ ಯಾವುದಾದರೂ ಒಂದು ಖಾದ್ಯ ಇಲ್ಲವೇ ವ್ಯಂಜನ ಮಿಸ್ ಆದರೂ ಊಟ ಮಾಡಿದ ಸಂತೃಪ್ತಿ ದೊರೆಯುವುದಿಲ್ಲ. ಹಾಗಿದ್ದರೆ ನಾವು ಸುಳಿವು ಕೊಡುವ ಮೊದಲೇ ನಿಮಗಿಲ್ಲಿ ಹೇಳ ಹೊರಟಿರುವ ವಿಷಯದ ಅರಿವು ಆಗಿರಬೇಕು ಅಲ್ಲವೇ? ಊಟಕ್ಕೆ ಉಪ್ಪಿನಕಾಯಿ ಪ್ರಧಾನವಾಗಿದ್ದು ಉಪ್ಪಿನಕಾಯಿ ಇಲ್ಲದೆ ಔತಣ ಕೂಟ ಊಟದ ಸಾರ್ಥಕತೆಯನ್ನು ನೀಡುವುದಿಲ್ಲ.
ಅಗತ್ಯ ಸಂದರ್ಭದಲ್ಲಿ ನಮಗೆ ಬೇಕಾದ್ದು ಸಿಗದೇ ಹೋದಲ್ಲಿ ನಾವು ಹೇಳುವ ಮಾತೇ ಅದು ಊಟಕ್ಕೆ ಇಲ್ಲದ ಉಪ್ಪಿನಕಾಯಿ ಎಂದಾಗಿದೆ. ಹಾಗಿದ್ದರೆ ಇದರಿಂದಲೇ ಊಟದಲ್ಲಿ ಉಪ್ಪಿನಕಾಯಿಯ ಮಹತ್ವವನ್ನು ನಿಮಗೆ ತಿಳಿದುಕೊಳ್ಳಬಹುದು. ದಕ್ಷಿಣದ ಕಡೆ ಉಪ್ಪಿನಕಾಯಿಯಲ್ಲಿ ವೈವಿಧ್ಯತೆಯನ್ನು ನಿಮಗೆ ಕಾಣಬಹುದು. ಮಾವಿನಕಾಯಿ, ಸೌತೆಕಾಯಿ, ನೆಲ್ಲಿಕಾಯಿ, ಹಣ್ಣುಗಳ ಉಪ್ಪಿನಕಾಯಿ ಹೀಗೆ ಒಂದೊಂದು ಉಪ್ಪಿನಕಾಯಿ ಕೂಡ ತನ್ನ ಅನೂಹ್ಯ ಸ್ವಾದದಿಂದ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಉಪ್ಪಿನಕಾಯಿ ತಯಾರಿಗೆ ಹೆಚ್ಚಿನ ಸಿದ್ಧತೆಗಳು ಮತ್ತು ಜಾಗರೂಕತೆ ಅತ್ಯವಶ್ಯಕವಾಗಿರುವುದರಿಂದ ಇದರ ತಯಾರಿಯನ್ನು ಹೆಚ್ಚು ಕಾಳಜಿಯಿಂದ ಮಾಡುತ್ತಾರೆ.
ಅದಕ್ಕಾಗಿಯೇ ಅದು ಕೆಡದೇ ತನ್ನ ಸ್ವಾದವನ್ನು ಕಳೆದುಕೊಳ್ಳದೇ ಬಾಯಲ್ಲಿ ನೀರೂರಿಸುವ ರುಚಿಯನ್ನು ಪಡೆದುಕೊಂಡಿರುವುದು. ಇಂದಿನ ಲೇಖನದಲ್ಲಿ ವೈವಿಧ್ಯಮಯವಾದ ಉಪ್ಪಿನಕಾಯಿಯಲ್ಲೊಂದಾದ ಕ್ಯಾರೆಟ್ ಉಪ್ಪಿನಕಾಯಿ ತಯಾರಿ ವಿಧಾನವನ್ನು ಹೇಳಿ ಕೊಡಲಿದ್ದೇವೆ. ಕ್ಯಾರೆಟ್ ಉಪ್ಪಿನಕಾಯಿ ಸಾರು ಸಾಂಬಾರಿನೊಂದಿಗೆ ಮಾತ್ರ ಸಾಥ್ ನೀಡದೇ ಚಪಾತಿ ಹಾಗೂ ದೋಸೆಯೊಂದಿಗೆ ನೆಚ್ಚಿಕೊಳ್ಳಲು ಹೇಳಿ ಮಾಡಿಸಿರುವಂಥದ್ದಾಗಿದೆ. ಮೊಸರು ಮತ್ತು ತುಪ್ಪದೊಂದಿಗೆ ಬಿಸಿ ಬಿಸಿ ಅನ್ನವನ್ನು ಉಪ್ಪಿನಕಾಯಿ ಜೊತೆ ನೆಚ್ಚಿಕೊಂಡು ಪಟ್ಟಾಗಿ ಊಟ ಮಾಡಿದರೆ ಅದಕ್ಕೆ ಸಮನಾದ ಭಕ್ಷ್ಯ ಬೇರೊಂದಿಲ್ಲ ಎಂದೇ ಹೇಳಬಹುದು.
ಕ್ಯಾರೆಟ್ ಉಪ್ಪಿನಕಾಯಿ ಮಾರುಕಟ್ಟೆಯಲ್ಲಿ ದೊರೆತರೂ ನೀವೇ ತಯಾರಿಸಿ ಮಾಡಿದ ಸೊಗಸನ್ನು ಅದು ನೀಡಲು ಖಂಡಿತ ಸಾಧ್ಯವಿಲ್ಲ. ಇದನ್ನು ಸಿದ್ಧಪಡಿಸಿ ಗಾಳಿಯಾಡದ ಡಬ್ಬದಲ್ಲಿ ತೆಗೆದಿಟ್ಟರೆ ಸಾಕು ನಿಮಗೆ ಬೇಕಾದಾಗಲೆಲ್ಲಾ ಅದನ್ನು ಬಳಸಿಕೊಳ್ಳಬಹುದು ಮತ್ತು ಮನೆಮಂದಿಯಿಂದ ಶಹಬ್ಬಾಷ್ ಎಂದೆನ್ನಿಸಿಕೊಳ್ಳಬಹುದು. ಹಾಗಿದ್ದರೆ ಇಲ್ಲಿ ನಾವು ನೀಡಿರುವ ಕ್ಯಾರೆಟ್ ಉಪ್ಪಿನಕಾಯಿ ತಯಾರಿ ವಿಧಾನದ ಕಡೆಗೆ ಗಮನಹರಿಸಿ.
ಪ್ರಮಾಣ - 4 ಜನರಿಗೆ ಸಾಕಾಗುವಷ್ಟು
*ಬೇಕಾಗುವ ಸಮಯ - 10 ನಿಮಿಷಗಳು
*ಸಿದ್ಧತಾ ಸಮಯ - 10 ನಿಮಿಷಗಳು ಸಾಮಾಗ್ರಿಗಳು
*ಕ್ಯಾರೆಟ್ - 5-6
*ಕೆಂಪು ಮೆಣಸು - 6 (ಖಾರಕ್ಕೆ)
*ಒಣ ಕೆಂಪು ಮೆಣಸು - 2 (ಬಣ್ಣ ಬರಲು)
*ಲಿಂಬೆ ರಸ - 2 ಚಮಚ
*ಮೆಣಸಿನ ಹುಡಿ - 2 ಚಮಚಗಳು
*ಸಾಸಿವೆ ಬೀಜ - 1/4 ಚಮಚ
*ಎಣ್ಣೆ
1. ಕ್ಯಾರೆಟ್ ಅನ್ನು ಉದ್ದುದ್ದಕ್ಕೆ ಕತ್ತರಿಸಿಕೊಳ್ಳಿ ಅದಕ್ಕೆ ಎರಡು ಚಮಚದಷ್ಟು ಲಿಂಬೆ ರಸವನ್ನು ಸೇರಿಸಿಕೊಳ್ಳಿ.
2. ಇನ್ನು ಸಣ್ಣ ಪ್ಯಾತ್ರೆಯಲ್ಲಿ ಎಣ್ಣೆ ಹಾಕಿ ಅದು ಬಿಸಿಯಾಗುತ್ತಿದ್ದಂತೆ ಸಾಸಿವೆ ಬೀಜಗಳು ಮತ್ತು ಮೆಣಸಿನ ಹುಡಿಯನ್ನು ಸೇರಿಸಿ.
3. ಕ್ಯಾರೆಟ್ ಇರುವ ಪಾತ್ರೆಗೆ ಇದನ್ನು ವರ್ಗಾಯಿಸಿ
4. ಇದೀಗ, ಮಿಕ್ಸಿ ಜಾರನ್ನು ತೆಗೆದುಕೊಂಡು 5 ರಿಂದ 6 ಸಾಮಾನ್ಯ ಕೆಂಪು ಮತ್ತು ಒಣಮೆಣಸನ್ನು ಹಾಕಿ
5. ಈ ಸಮಯದಲ್ಲಿ ನೀರನ್ನು ಕುದಿಸಿಕೊಳ್ಳಿ
6. ಜಾರ್ಗೆ ಸ್ವಲ್ಪ ನೀರನ್ನು ಸೇರಿಸಿಕೊಂಡು ಸ್ವಲ್ಪ ಉಪ್ಪು ಹಾಕಿ ತಿರುಗಿಸಿಕೊಳ್ಳಿ. ಕೆಂಪು ಮೆಣಸು ಚೆನ್ನಾಗಿ ಪೇಸ್ಟ್ ಆಗುವವರೆಗೆ ಗ್ರೈಂಡ್ ಮಾಡಿಕೊಳ್ಳಿ.
7. ಕ್ಯಾರೆಟ್ ಇರುವ ಪಾತ್ರೆಗೆ ಈ ಮಿಶ್ರಣವನ್ನು ಹಾಕಿ. ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
8. ಬಿಸಿ ಬಿಸಿ ದೋಸೆ, ಚಪಾತಿ ಇಲ್ಲವೇ ರೋಟಿಯೊಂದಿಗೆ ಕ್ಯಾರೆಟ್ ಉಪ್ಪಿನಕಾಯಿ ಸವಿಯಲು ನೀಡಿ.

ಮಾಡುವ ವಿಧಾನ

Comments
Post a Comment