ಬಾಂಬೆ ಬಿರಿಯಾನಿ

ಬೇಕಾಗುವ ಪದಾರ್ಥಗಳು...


    ಎಣ್ಣೆ - 2-3 ಚಮಚ


    ಉಪ್ಪು - ರುಚಿಗೆ ತಕ್ಕಷ್ಟು


    ಜಾಯಿ ಪತ್ರೆ - 2


    ಮರಾಠಿ ಮೊಗ್ಗು - 2 


    ಪಲಾವ್ ಎಲೆ - 2-3


    ಕಾಳು ಮೆಣಸು - 1 ಚಮಚ


    ಚಕ್ಕೆ, ಲವಂಗ - ಸ್ವಲ್ಪ


    ಕಪ್ಪು ಏಲಕ್ಕಿ - ಸ್ವಲ್ಪ


    ಅಕ್ಕಿ - 2 ಬಟ್ಟಲು


    ಶುಂಠಿ, ಬೆಳ್ಳುಳ್ಳಿ ಪೇಸ್ಟ್ - 1 ಚಮಚ


    ಜೀರಿಗೆ - 1 ಚಮಚ


    ಚಿಕನ್ - ಅರ್ಧ ಕೆಜಿ


    ಅರಿಶಿನ - ಸ್ವಲ್ಪ


    ಅಚ್ಚ ಖಾರದ ಪುಡಿ - 1 ಚಮಚ


    ದನಿಯಾ ಪುಡಿ - 1 ಚಮಚ


    ಜೀರಿಗೆ  ಪುಡಿ - ಸ್ವಲ್ಪ


    ಗರಂ ಮಸಾಲಾ - ಕಾಲು ಚಮಚ


    ಕಾಳು ಮೆಣಸಿನ ಪುಡಿ - ಸ್ವಲ್ಪ


    ಟೊಮೆಟೋ - 1 ಬಟ್ಟಲು


    ಮೊಸಲು - 1 ಬಟ್ಟಲು


    ಪುದೀನಾ -ಕತ್ತರಿಸಿದ್ದು ಸ್ವಲ್ಪ


    ಕೊತ್ತಂಬರಿ ಸೊಪ್ಪು -ಕತ್ತರಿಸಿದ್ದು ಸ್ವಲ್ಪ


    ಕೇಸರಿ- ಸ್ವಲ್ಪ



    ಹಾಲು - 2 ಚಮಚ


ಮಾಡುವ ವಿಧಾನ...


    ಮೊದಲು ಪ್ಯಾನ್ ಗೆ 2 ಬಟ್ಟಲು ಅಕ್ಕಿಗೆ 4 ಬಟ್ಟಲು ನೀರು ಹಾಕಬೇಕು.


    ಈ ನೀರಿಗೆ 2 ಚಮಚ ಅಡುಗೆ ಎಣ್ಣೆ, ಅನ್ನಕ್ಕೆ ಬೇಕಾದಷ್ಟು ಉಪ್ಪು ಹಾಕಬೇಕು. ಜಾಯಿ ಪತ್ರೆ, ಮರಾಠಿ ಮೊಗ್ಗು, ಪಲಾವ್ ಎಲೆ, ಕಾಳು ಮೆಣಸು, ಚಕ್ಕೆ, ಲವಂಗ, ಕಪ್ಪು ಏಲಕ್ಕಿಯನ್ನು ಹಾಕಿ 5 ನಿಮಿಷ ಕುದಿಸಿ ಚಿಕ್ಕ ಪಾತ್ರೆಯೊಂದಕ್ಕೆ ತೆಗೆದಿಟ್ಟುಕೊಳ್ಳಬೇಕು. 


    ಇದೇ ನೀರಿಗೆ ಅಕ್ಕಿಯನ್ನು ಹಾಕಿ ಅನ್ನವನ್ನು ಮಾಡಿಕೊಳ್ಳಬೇಕು. ಹಾಲಿನಲ್ಲಿ ಕೇಸರಿ ದಳಗಳನ್ನು ಹಾಕಿ 5-10 ನಿಮಿಷ ನೆನೆಯಲು ಬಿಡಬೇಕು.


    ಮತ್ತೊಂದು ಕಡೆ ಬಾಣಲೆಯನ್ನು ಇಟ್ಟು, ಎಣ್ಣೆಯನ್ನು ಹಾಕಬೇಕು. ಎಣ್ಣೆ ಕಾದ ನಂತರ ಶುಂಠಿ, ಬೆಳ್ಳುಳ್ಳು ಪೇಸ್ಟ್, ಜೀರಿಗೆ ಹಾಕಿ ಹುರಿದುಕೊಳ್ಳಬೇಕು. ಚಿಕನ್, ಉಪ್ಪು, ಖಾರದ ಪುಡಿ, ಅರಿಶಿಣ ಪುಡಿ, ದನಿಯಾ ಪುಡಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. 


    ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಗರಂ ಮಸಾಲ, ಮೊದಲೇ ಬೇಯಿಸಿಕೊಂಡ ಜಾಯಿಕಾಯಿ, ಮರಾಠಿಮೊಗ್ಗು ಎಲ್ಲವನ್ನೂ ಇದಕ್ಕೆ ಸೇರಿಸಬೇಕು. ಟೊಮೆಟೊ, ಸ್ವಲ್ಪ ಬಿಸಿ ನೀರು, ಮೊಸರು ಸೇರಿಸಿ 15-20 ನಿಮಿಷ ಬೇಯಲು ಬಿಡಬೇಕು. ನಂತರ ಮತ್ತೆ ಸ್ವಲ್ಪ ಟೊಮೆಟೋ, ಪುದೀನಾ, ಕೊತ್ತಂಬರಿ ಸೊಪ್ಪು, ಸಣ್ಣಗೆ ಹೆಚ್ಚಿದ ಶುಂಠಿಯನ್ನು ಹಾಕಿ 5 ನಿಮಿಷ ಬೇಯಲು ಬಿಡಬೇಕು. 


    ನಂತರ ಪಾತ್ರೆಯೊಂದಕ್ಕೆ ಸ್ವಲ್ಪ ಬೆಂದ ಚಿಕನ್ ಮಸಾಲೆಯನ್ನು ಹಾಕಿ ಅದರ ಮೇಲೆ ಸ್ವಲ್ಪ ಅನ್ನ ಹಾಕಬೇಕು. ಮತ್ತೆ ಮಸಾಲೆಯನ್ನು ಹಾಕಿ ಅದರ ಮೇಲೆ ಅನ್ನ ಹಾಕಿ 4-5 ಚಮಚ ಬಿಸಿ ನೀರು ಹಾಗೂ ಹಾಲಿನಲ್ಲಿ ನೆನೆಸಿದ ಕೇಸರಿಯನ್ನು ಹಾಕಿ ಕಡಿಮೆ ಉರಿಯಲ್ಲಿ 5-10 ನಿಮಿಷ ಬೇಯಲು ಬಿಡಬೇಕು. ನಂತರ ಮಸಾಲೆಯೊಂದಿಗೆ ಅನ್ನವನ್ನು ಮಿಶ್ರಣ ಮಾಡಿದರೆ, ರುಚಿಕರವಾಗ ಬಾಂಬೆ ಬಿರಿಯಾನಿ ಸವಿಯಲು ಸಿದ್ಧ.  



Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್