ಅನಾನಸ್ ಗೊಜ್ಜು ರೆಸಿಪಿ

ಅನಾನಸ್ ಗೊಜ್ಜು ದಕ್ಷಿಣ ಕರ್ನಾಟಕದ ಸಾಂಪ್ರದಾಯಿಕ ಅಡುಗೆಯಲ್ಲಿ ಒಂದು. ಬ್ರಾಹ್ಮಣ ಸಮುದಾಯದವರು ಈ ಪದಾರ್ಥವನ್ನು ವಿಶೇಷವಾಗಿ ಹಬ್ಬ ಹರಿದಿನಗಳಲ್ಲಿ ಹಾಗೂ ಮನೆಯ ವಿಶೇಷ ಕಾರ್ಯಗಳಲ್ಲಿ ಕಡ್ಡಾಯವಾಗಿ ಮಾಡುವ ಪಾಕವಿಧಾನ. ತೆಂಗಿನಕಾಯಿ ಮತ್ತು ಮಸಾಲೆಯ ಮಿಶ್ರಣದಿಂದ ತಯಾರಿಸಲ್ಪಡುವ ಈ ಪಾಕವಿಧಾನಕ್ಕೆ/ರೆಸಿಪಿಗೆ ಅನಾನಸ್ ಮೆಣಸ್ಕೈ ಎಂತಲೂ ಕರೆಯುತ್ತಾರೆ. 

ಕಡಿಮೆ ಸಮಯದಲ್ಲಿ ಬಹಳ ಸರಳವಾಗಿ ತಯಾರಿಸಬಹುದಾದ ಈ ಪದಾರ್ಥ ಹುಳಿ, ಸಿಹಿ ಮತ್ತು ಖಾರಗಳ ಮಿಶ್ರಣ ಎನ್ನಬಹುದು. ಹುಣಸೆ ಹಣ್ಣು ಮತ್ತು ಮಸಾಲೆಯ ಮಿಶ್ರಣದ ಪರಿಮಳ ನಾಲಿಗೆ ಚಪ್ಪರಿಸುವಂತೆ ಮಾಡುತ್ತದೆ. ಹುಳಿ ಮತ್ತು ಸಿಹಿ ಮಿಶ್ರಣದ ಅಡುಗೆಯನ್ನು ಇಷ್ಟಪಡುವವರು ನೀವಾಗಿದ್ದರೆ ನಿಮಗೆ ಈ ಪಾಕವಿಧಾನ ಹೆಚ್ಚು ರುಚಿ ಹಾಗೂ ಖುಷಿಯನ್ನು ನೀಡುವುದು. 

ಬೆರಳನ್ನು ಪದೇ-ಪದೇ ನೆಕ್ಕುವಂತೆ ಮಾಡಬಲ್ಲ ಈ ಗೊಜ್ಜನ್ನು ಕೇವಲ ಅನ್ನಕ್ಕಷ್ಟೇ ಅಲ್ಲ ದೋಸೆ, ಇಡ್ಲಿ ಮತ್ತು ಚಪಾತಿಗೂ ಚಟ್ನಿಯ ರೂಪದಲ್ಲಿ ಉಪಯೋಗಿಸಬಹುದು.

 ಈ ಸರಳ ಭಕ್ಷ್ಯವನ್ನು ತಯಾರಿಸಬೇಕೆನ್ನುವ ಹವಣಿಕೆಯಲ್ಲಿದ್ದರೆ ತಡ ಮಾಡಬೇಡಿ. ನಿಮಗೆ ಸಹಾಯವಾಗಲೆಂದು ಅನಾನಸ್ ಗೊಜ್ಜಿನ ವಿಡಿಯೋಮತ್ತು ಹಂತ ಹಂತವಾದ ಚಿತ್ರ ಬರಹವನ್ನು ನೀಡುತ್ತಿದ್ದೇವೆ.

Ingredients 

ಎಣ್ಣೆ - 3 ಚಮಚ

 ಇಂಗು - ಒಂದು ಚಿಟಕಿ 

ಸಾಸಿವೆ - 1 ಟೀ ಚಮಚ

 ಉದ್ದಿನ ಬೇಳೆ - 1 ಟೀ ಚಮಚ 

ಕಡ್ಲೆ ಬೇಳೆ - 1/2 ಟೀ ಚಮಚ 

ಕರಿಬೇವು - 7-10 ಎಲೆಗಳು 

ಹೆಚ್ಚಿಕೊಂಡ ಅನಾನಸ್ (ಹೋಳುಗಳಂತೆ ಮಾಡಬೇಕು) - 1 ಮತ್ತು 1/4 ಮಧ್ಯಮ 

ಅಳತೆಯ ಬೌಲ್ ನೀರು 1/4 ಕಪ್

 ತೆಂಗಿನ ತುರಿ - 1 ಕಪ್ 

ಹುರಿ ಗಡಲೆ - 1 ಟೇಬಲ್ ಚಮಚ

 ರಸಂ ಪೌಡರ್ - 2 ಟೇಬಲ್ ಚಮಚ 

ಬೆಲ್ಲ - 1/2 ಟೇಬಲ್ ಚಮಚ

 ಹುಣಸೆ ರಸ/ಪೇಸ್ಟ್ - 1 ಟೇಬಲ್ ಚಮಚ 

ರುಚಿಗೆ ತಕ್ಕಷ್ಟು ಉಪ್ಪು

How to Prepare

 1. ಒಂದು ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ. 

2. ಒಂದು ಚಿಟಕಿ ಇಂಗು ಮತ್ತು ಸಾಸಿವೆ ಕಾಳನ್ನು ಹಾಕಿ, ಚಟಪಟ ಎನ್ನುವವರೆಗೆ ಹುರಿಯಿರಿ. 

3. ನಂತರ ಉದ್ದಿನ ಬೇಳೆ, ಕಡ್ಲೆ ಬೇಳೆ ಮತ್ತು ಕರಿಬೇವಿನ ಎಲೆಯನ್ನು ಸೇರಿಸಿ.

4. ಬಳಿಕ ಹೆಚ್ಚಿಕೊಂಡ 1 ಕಪ್ ಅನಾನಸ್‍ಅನ್ನು ಹಾಕಿ, ಚೆನ್ನಾಗಿ ಹುರಿಯಿರಿ.

 5. ಇದಕ್ಕೆ ಅರ್ಧ ಕಪ್ ನೀರನ್ನು ಸೇರಿಸಿ ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಲು ಬಿಡಿ. 

6. ಈ ಸಮಯದಲ್ಲೇ ತೆಂಗಿನ ತುರಿ, ಹುರಿಗಡಲೆ, ರಸಂ ಪೌಡರ್ ಮತ್ತು ಕಾಲು ಕಪ್ ಅನಾನಸ್ ಹೋಳುಗಳನ್ನು ಮಿಕ್ಸರ್‌ನಲ್ಲಿ ಹಾಕಿ ರುಬ್ಬಿ.

 7. ಬಳಿಕ ಈ ಮಿಕ್ಸರ್ ಜಾರಿಗೆ ಬೆಲ್ಲ, ಹುಣಸೆ ರಸ, ಉಪ್ಪು ಸೇರಿಸಿ.

 8. ಇದಕ್ಕೆ 2 ಚಮಚ ನೀರನ್ನು ಸೇರಿಸಿ ಮತ್ತೆ ಚೆನ್ನಾಗಿ ರುಬ್ಬಿಕೊಳ್ಳಿ. 

9. ಅನಾನಸ್ ಹೋಳು ಬೆಂದ ತಕ್ಷಣ ರುಬ್ಬಿಕೊಂಡ ಮಸಾಲೆಯನ್ನು ಸೇರಿಸಿ. 

10. ಪುನಃ ಈ ಎಲ್ಲಾ ಮಿಶ್ರಣವನ್ನು ಚೆನ್ನಾಗಿ ಕಲುಕಿ 5 ನಿಮಿಷ ಬೇಯಲು ಬಿಡಿ. ಸವಿಯಲು ನೀಡುವ ಮುನ್ನ ಸ್ವಲ್ಪ ಬಿಸಿಮಾಡಿ.




Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್