ಅವರೆಕಾಯಿ ಬಟಾಣಿ ಪಲಾವ್
ಬೇಕಾಗುವ ಸಾಮಾಗ್ರಿಗಳು:
1/2 ಕಪ್ ಅವರೆ
1/2 ಕಪ್ ಬಟಾಣಿ
1/2 ಚಮಚ ಜೀರಿಗೆ
ಸ್ವಲ್ಪ ಇಂಗು
1 ಚಮಚ ಶುಂಠಿ-ಹಸಿರು ಮೆಣಸಿನ ಪೇಸ್ಟ್
1/2 ಚಮಚ ಬೆಳ್ಳುಳ್ಳಿ ಪೇಸ್ಟ್
2 ಈರುಳ್ಳಿ
2 ಟೊಮೇಟೊ
1/4 ಚಮಚ ಅರಶಿನ
1/2 ಚಮಚ ಮೆಣಸಿನ ಪುಡಿ
ಕೊತ್ತಂಬರಿ ಪೌಡರ್
1/4 ಕಪ್ ಮೊಸರು
2 ಚಮಚ ಕಡಲೆಹಿಟ್ಟು
2 ಚಮಚ ಹಾಲು
1/2 ಚಮಚ ಸಕ್ಕರೆ
2 ಚಮಚ ಎಣ್ಣೆ
ವಿಧಾನ:
ಅವರೆಯನ್ನು ಬಿಸಿಯಾದ ಉಪ್ಪು ನೀರಿನಲ್ಲಿ 20 ನಿಮಿಷಗಳ ಕಾಲ ಬೇಯಿಸಿ ಬದಿಗಿಟ್ಟುಕೊಳ್ಳಿ. ಎಣ್ಣೆಯನ್ನು ಕಾಯಿಸಿ ಜೀರಿಗೆಯನ್ನು ಸೇರಿಸಿ. ಅವು ಶಬ್ಧ ಮಾಡಿದಾಗ, ಇಂಗು, ಶುಂಠಿ-ಹಸಿರು ಮೆಣಸಿನ
ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿಯನ್ನು ಸೇರಿಸಿ. ಈರುಳ್ಳಿ ಬೆಂದ ನಂತರ ಟೊಮೇಟೊ, ಅರಶಿನ, ಮೆಣಸಿನ ಪುಡಿ, ಕೊತ್ತಂಬರಿ ಪೌಡರ್ ಸೇರಿಸಿ ಮತ್ತು 5-10 ನಿಮಿಷ ಕಡಿಮೆ ಬೆಂಕಿಯಲ್ಲಿ
ಬೇಯಿಸಿ. ಮೊಸರು, ಕಡಲೆಹಿಟ್ಟು, ಹಾಲು, 3/4 ಕಪ್ ನೀರಿನ ಮಿಶ್ರಣ ಮಾಡಿ ಈರುಳ್ಳಿ-ಟೊಮೇಟೊದ ಗ್ರೇವಿಗೆ ಸೇರಿಸಿ. ಅವರೆ, ಬಟಾಣಿ, ಸಕ್ಕರೆ, ಉಪ್ಪು ಸೇರಿಸಿ 2 ನಿಮಿಷ ಕಲಸಿ. ಪಲ್ಯ ರೆಡಿ
Comments
Post a Comment