ಅಂಬಟೆ ಗೊಜ್ಜು ಮಾಡುವುದು ಹೇಗೆ?
ಬೆಂಗಳೂರು: ಅಂಬಟೆ ಕಾಯಿ ಎಂದರೆ ಸಾಕು ಬಾಯಲ್ಲಿ ನೀರೂರುತ್ತದೆ. ಹುಳಿ ಮಿಶ್ರಿತ ಕಾಯಿ ಉಪ್ಪಿನಕಾಯಿ, ಸಾರು, ಗೊಜ್ಜು ಏನೇ ಮಾಡಿದರೂ ರುಚಿ. ಸ್ವಲ್ಪ ಉಷ್ಣ ಪ್ರಕೃತಿಯ ಕಾಯಿ ಇದು. ಹಾಗಾಗಿ ಹದವಾಗಿ ತಿನ್ನುವುದು ಆರೋಗ್ಯಕ್ಕೂ ಒಳ್ಳೆಯದು. ಇದರ ಗೊಜ್ಜು ಮಾಡುವುದು ಹೇಗೆ ತಿಳಿದುಕೊಳ್ಳೋಣ.
ಒಣ ಮೆಣಸು
ಬೆಲ್ಲ
ಖಾರದ ಪುಡಿ
ಹಸಿ ಮೆಣಸು
ಉಪ್ಪು
ಒಗ್ಗರಣೆ ಸಾಮಾನು
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಬೇಕಾಗುವ ಸಾಮಗ್ರಿಗಳು
ಅಂಬಟೆ ಕಾಯಿಒಣ ಮೆಣಸು
ಬೆಲ್ಲ
ಖಾರದ ಪುಡಿ
ಹಸಿ ಮೆಣಸು
ಉಪ್ಪು
ಒಗ್ಗರಣೆ ಸಾಮಾನು
ಮಾಡುವ ವಿಧಾನ
ಅಂಬಟೆ ಕಾಯಿಯನ್ನು ಉಪ್ಪು, ಹಸಿಮೆಣಸು, ಮೆಣಸಿನ ಹುಡಿ ಹಾಕಿ ಬೇಯಿಸಿಕೊಳ್ಳಿ. ಚೆನ್ನಾಗಿ ಬೆಂದ ಅಂಬಟೆ ಕಾಯಿಯನ್ನು ಹಿಚುಕಿಟ್ಟುಕೊಳ್ಳಿ. ಇದಕ್ಕೆ ಬೆಲ್ಲ ಹಾಕಿ ಒಂದು ಕುದಿ ಕುದಿಸಿ. ನಂತರ ಇಂಗು, ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಕೊಟ್ಟರೆ ಅಂಬಟೆ ಗೊಜ್ಜು ಸವಿಯಲು ಸಿದ್ಧ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
Comments
Post a Comment