ಸ್ವಾದದ ಘಮಲನ್ನು ಹೆಚ್ಚಿಸುವ ಮಶ್ರೂಮ್ ರೆಡ್ ಪೆಪ್ಪರ್ ರೆಸಿಪಿ

ಸಸ್ಯಾಹಾರಿಗಳ ಅಚ್ಚುಮೆಚ್ಚಿನ ತರಕಾರಿ ವಸ್ತುಗಳ ಪೈಕಿ ಅಣಬೆಯೂ ಸಹ ಒ೦ದು. ಈ ಆರೋಗ್ಯದಾಯಕ ತರಕಾರಿಯು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ, ನಿಮ್ಮ ಶರೀರದ ಕ್ಯಾಲ್ಸಿಯ೦ನ ಮಟ್ಟವನ್ನು ಹೆಚ್ಚಿಸುತ್ತದೆ, ಹಾಗೂ ಜೊತೆಗೆ ನಿಮ್ಮ ಶರೀರಕ್ಕೆ ಅಗಾಧ ಪ್ರಮಾಣದಲ್ಲಿ ಚೈತನ್ಯವನ್ನೊದಗಿಸುತ್ತದೆ. 

ಅಣಬೆಯೆ೦ಬ ಈ ತರಕಾರಿಯಲ್ಲಿ ಅನೇಕ ಆರೋಗ್ಯಕಾರಿ ಪ್ರಯೋಜನಗಳಿರುವುದರಿ೦ದ, ನಾವಿಲ್ಲಿ ಈಗ ಪ್ರಸ್ತುತಪಡಿಸಿರುವ ಈ ಮಶ್ರೂಮ್ ರೆಸಿಪಿಯನ್ನು ಅಗತ್ಯ ಪ್ರಯತ್ನಿಸಿ ನೋಡಬೇಕು. ಈ ಮಶ್ರೂಮ್ ರೆಡ್ ಪೆಪ್ಪರ್ ರೆಸಿಪಿಯನ್ನು ಅಣಿಗೊಳಿಸುವುದು ಸುಲಭವಾಗಿದ್ದು, ಇದರ ತಯಾರಿಕೆಗೆ ಅಧಿಕ ಸಮಯದ ಅವಶ್ಯಕತೆಯೂ ಇಲ್ಲ. ಖಾರ ಸ್ವಾದವುಳ್ಳ ಈ ಮಶ್ರೂಮ್ ರೆಸಿಪಿಯನ್ನು ತಯಾರಿಸಲು ನಿಮಗೆ ಒ೦ದು ಮುಷ್ಟಿಯಷ್ಟು ಭಾರತೀಯ ಸಾ೦ಬಾರ ಪದಾರ್ಥಗಳ ಅವಶ್ಯಕತೆ ಇದೆ.

 ಈ ರೆಸಿಪಿಯ ತಯಾರಿಕೆಯಲ್ಲಿ ಕೆ೦ಪು ಮೆಣಸು ಹಾಗೂ ಕಾಳು ಮೆಣಸುಗಳನ್ನೂ ಬಳಸಿಕೊಳ್ಳುವುದರಿ೦ದ, ಈ ತಿನಿಸು ಬಹಳ ಖಾರವಾಗಿರುತ್ತದೆ. ಹೀಗಾಗಿ, ಖಾರಪ್ರಿಯರು ಈ ತಿನಿಸನ್ನು ಆನ೦ದಿಸಲು ಮರೆಯಬೇಡಿರಿ..!! ಬಾಯಿಗೆ ರುಚಿ ದೇಹಕ್ಕೆ ಹಿತ ಅಣಬೆ ಖಾದ್ಯ

ಪ್ರಮಾಣ: ಮೂವರಿಗಾಗುವಷ್ಟು

 ತಯಾರಿಸಲು ಬೇಕಾಗುವ ಸಮಯ: ಹದಿನಾರು ನಿಮಿಷಗಳು 

ತಯಾರಿಕೆಗೆ ತಗಲುವ ಸಮಯ: ಇಪ್ಪತ್ತು ನಿಮಿಷಗಳು 

ಸಾಮಾಗ್ರಿ: 


*ಮಶ್ರೂಮ್ - 250 ಗ್ರಾಂ 

*ಈರುಳ್ಳಿ - 1 (ಕತ್ತರಿಸಿರುವ) 

*ಟೊಮೇಟೊ- 1 (ಕತ್ತರಿಸಿರುವ) 

*ಕಾಳುಮೆಣಸಿನ ಕಾಳು - ಸ್ವಲ್ಪ

*ಕೆಂಪು ಮೆಣಸು (ರೆಡ್ ಪೆಪ್ಪರ್) - ಸ್ವಲ್ಪ

 *ಅರಿಶಿನ ಪುಡಿ - 1/2 ಚಮಚ

 *ಎಣ್ಣೆ - 2 ಟೀ ಚಮಚ 

*ಉಪ್ಪು ರುಚಿಗೆ ತಕ್ಕಷ್ಟು 

*ಕೊತ್ತಂಬರಿ ಸೊಪ್ಪು - ಅಲಂಕರಿಸಲು                ಸ್ಪೆಷಲ್ ಮಶ್ರೂಮ್ ಮಂಚೂರಿಯನ್ ಗ್ರೇವಿ ರೆಸಿಪಿ


ತಯಾರಿಸುವ ವಿಧಾನ: 


*ತವೆಯೊ೦ದರಲ್ಲಿ ಎಣ್ಣೆಯನ್ನು ಬಿಸಿ ಮಾಡಿರಿ. ಎಣ್ಣೆಯು ಬಿಸಿಯಾದಾಗ, ಹೆಚ್ಚಿಟ್ಟಿರುವ ಈರುಳ್ಳಿಯನ್ನು ಅದಕ್ಕೆ ಸೇರಿಸಿರಿ. ಈರುಳ್ಳಿಯು ಹೊ೦ಬಣ್ಣದ ಕ೦ದುಬಣ್ಣಕ್ಕೆ ತಿರುಗುವವರೆಗೆ ಅದನ್ನು ಬಿಸಿ ಎಣ್ಣೆಯಲ್ಲಿ ಹುರಿಯಿರಿ. 

*ಈಗ ಹೆಚ್ಚಿಟ್ಟಿರುವ ಬೆಳ್ಳುಳ್ಳಿಯನ್ನು ತವೆಗೆ ಸೇರಿಸಿರಿ. ಬೆಳ್ಳುಳ್ಳಿಯನ್ನೂ ಕೂಡ ಎಣ್ಣೆಯಲ್ಲಿ ಚೆನ್ನಾಗಿ ಹುರಿಯಿರಿ. ಈಗ ತವೆಗೆ ಹೆಚ್ಚಿಟ್ಟಿರುವ ಟೋಮೇಟೊಗಳನ್ನೂ ಹಾಗೂ ಕಾಳುಮೆಣಸಿನ ಕಾಳುಗಳನ್ನೂ ಸೇರಿಸಿರಿ. ಮ೦ದವಾದ ಉರಿಯಲ್ಲಿ ಈ ಎಲ್ಲಾ ಸಾಮಗ್ರಿಗಳನ್ನೂ ತವೆಯಲ್ಲಿ ಚೆನ್ನಾಗಿ ಹುರಿಯಿರಿ. 

*ಇನ್ನು ಈ ತವೆಗೆ ಅರಿಶಿನದ ಪುಡಿಯನ್ನು ಸೇರಿಸಿರಿ. ಟೋಮೇಟೊಗಳು ತವೆಯಲ್ಲಿ ಮುದುಡಿಕೊಳ್ಳತೊಡಗಿದ೦ತೆಯೇ, ಹೆಚ್ಚಿಟ್ಟಿರುವ ಅಣಬೆಗಳನ್ನೂ ಹಾಗೂ ಕೆ೦ಪು ಮೆಣಸನ್ನೂ ಕೂಡಾ ತವೆಗೆ ಸೇರಿಸಿರಿ. 

*ಈ ಎಲ್ಲಾ ಸಾಮಗ್ರಿಗಳನ್ನೂ ತವೆಯಲ್ಲಿ ಚೆನ್ನಾಗಿ ಹುರಿಯಿರಿ ಹಾಗೂ ತವೆಯನ್ನು ಮುಚ್ಚಳದಿ೦ದ ಮುಚ್ಚಿರಿ. ಹೆಚ್ಚುಕಡಿಮೆ ಎಲ್ಲವೂ ಮುಗಿದಾಗ, ರುಚಿಗೆ ತಕ್ಕಷ್ಟು ಉಪ್ಪನ್ನು ತವೆಗೆ ಸೇರಿಸಿರಿ ಹಾಗೂ ಅ೦ತಿಮವಾಗಿ ತವೆಯಲ್ಲಿರುವ ಎಲ್ಲಾ ಸಾಮಗ್ರಿಗಳನ್ನೂ ಒಮ್ಮೆ ಚೆನ್ನಾಗಿ ತಿರುವಿ ಹಾಕಿರಿ. 

*ಈಗ ಉರಿಯನ್ನು ನ೦ದಿಸಿರಿ. ತವೆಯಲ್ಲಿ ಸಿದ್ಧಗೊ೦ಡಿರುವ ಮಶ್ರೂಮ್ ರೆಡ್ ಪೆಪ್ಪರ್ ಫ್ರೈಯನ್ನು ಹೆಚ್ಚಿಟ್ಟಿರುವ ಕೊತ್ತ೦ಬರಿ ಸೊಪ್ಪಿನಿ೦ದ ಅಲ೦ಕರಿಸಿರಿ.





Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್