ರುಚಿ ರುಚಿಯಾದ ಸ್ಪೈಸಿ ಚಿಕನ್ ಫ್ರೈ ರೆಸಿಪಿ!

ಭಾರತೀಯರು ಖಾದ್ಯ ಪ್ರಿಯರು. ಅವರಿಗೆ ಋತುಮಾನ ದೊಡ್ಡ ಸಮಸ್ಯೆಯಲ್ಲ. ಯಾವ ಕಾಲದಲ್ಲೂ ಎಲ್ಲಾ ಆಹಾರವನ್ನು ಸೇವಿಸುವ ಮನಸ್ಸು ಅವರಿಗಿದೆ. ಅದರಲ್ಲೂ ಖಾರದ ಆಹಾರ ಎಲ್ಲಾ ಕಾಲದಲ್ಲೂ ಅವರು ಸೇವಿಸುತ್ತಾರೆ. 

ಇಂದಿನ ಈ ಲೇಖನದಲ್ಲಿ ನಾವು ನೀಡಿರುವ ಈ ಸ್ಪೈಸಿ ಚಿಕನ್ ಫ್ರೈ ಎಲ್ಲಾ ಸೀಸನ್‌ಗೂ ಒಗ್ಗುವಂಥದ್ದು. ಇಂದಿನ ಲೇಖನ ನಿಮಗೆ ಚಿಕನ್ ಫ್ರೈ ಮಾಡುವ ವಿಧಾನವನ್ನು ವೀಡಿಯೋದಲ್ಲಿ ಪ್ರದರ್ಶಿಸುತ್ತದೆ ಇದರಿಂದ ವೀಡಿಯೋ ನೋಡಿಕೊಂಡು ಈ ಸರಳವಾದ ಚಿಕನ್ ಖಾದ್ಯವನ್ನು ನಿಮಗೆ ತಯಾರಿಸಬಹುದು. 

ಹಂತ ಹಂತವಾಗಿ ನಾವು ವೀಡಿಯೋದ ಮೂಲಕ ನೀಡಿರುವ ರೆಸಿಪಿ ವಿಧಾನಗಳನ್ನು ಮನನ ಮಾಡಿಕೊಳ್ಳಿ ಮತ್ತು ಸರಳ ಚಿಕನ್ ಫ್ರೈ ರೆಸಿಪಿ ತಯಾರಿಸಿ ಮನೆಯವರ ಮನಗೆಲ್ಲಿ.

ಪ್ರಮಾಣ: 2

 ಸಿದ್ಧತಾ ಸಮಯ: 2 ಗಂಟೆಗಳು 

ಅಡುಗೆಗೆ ಬೇಕಾದ ಸಮಯ: 10 ನಿಮಿಷಗಳು 

ಸಾಮಾಗ್ರಿಗಳು: 


.ಚಿಕನ್ - 250 ಗ್ರಾಮ್ಸ್

 .ಮೊಸರು - 1ಕಪ್

 .ಕೋರ್ನ್ ಫ್ಲೋರ್ - 1 ಸ್ಫೂನ್

 .ಮೆಣಸಿನ ಹುಡಿ - 1 ಸ್ಪೂನ್

 .ಅರಶಿನ - 3/4 ಸ್ಪೂನ್ 

.ಕಾಳುಮೆಣಸಿನ ಹುಡಿ - 3/4 ಸ್ಪೂನ್

 .ಮೊಟ್ಟೆ - 1

 .ಲಿಂಬೆ ರಸ - 2 ಸ್ಪೂನ್ 

.ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಸ್ಪೂನ್

 .ಉಪ್ಪು - ರುಚಿಗೆ ತಕ್ಕಷ್ಟು

 .ಎಣ್ಣೆ - 2 ಸ್ಪೂನ್


ಮಾಡುವ ವಿಧಾನ:


 1.ಮೊಸರಿಗೆ ಚಿಕನ್ ಅನ್ನು ಹಾಕಿ ಅದನ್ನು ನೆನೆಸಿ. 

2.ನಂತರ ಕೋರ್ನ್ ಫ್ಲೋರ್, ಮೆಣಸಿನ ಹುಡಿ, ಅರಶಿನ, ಕಾಳುಮೆಣಸಿನ ಹುಡಿ, ಲಿಂಬೆ ರಸ ಸೇರಿಸಿ. 

3.ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಒಡೆದ ಮೊಟ್ಡೆ ಮಿಶ್ರಣಕ್ಕೆ ಹಾಕಿ.

 4.ಎಲ್ಲಾ ಮಿಶ್ರಣಗಳನ್ನು ಚೆನ್ನಾಗಿ ಕಲೆಸಿಕೊಳ್ಳಿ. ಮಿಶ್ರಣ ನೀರಾಗಿದ್ದಲ್ಲಿ ಸ್ವಲ್ಪ ಕೋರ್ನ್ ಫ್ಲೋರ್ ಸೇರಿಸಿ ಮಿಶ್ರಣವನ್ನು ದಪ್ಪಗೊಳಿಸಿ. 

5.ಚಿಕನ್ ಅನ್ನು 1 ಗಂಟೆಗಳ ಕಾಲ ಮುಳುಗಿಸಿಡಿ. 

6.ಪ್ಯಾನ್ ನಲ್ಲಿ ಎಣ್ಣೆ ಬಿಸಿ ಮಾಡಿ. ಬಿಸಿಯಾದೊಡನೆ ಮುಳುಗಿಸಿಟ್ಟ ಚಿಕನ್ ಅನ್ನು ಅದಕ್ಕೆ ಹಾಕಿ. 

7.ಚಿಕನ್ ಅನ್ನು 8-10 ನಿಮಿಷಗಳ ಸಣ್ಣ ಉರಿಯಲ್ಲಿ ಫ್ರೈ ಮಾಡಿ ಮತ್ತು ಅದು ಬ್ರೌನ್ ಬಣ್ಣಕ್ಕೆ ತಿರುಗಬೇಕು ಹಾಗೂ ಕ್ರಿಸ್ಪಿಯಾಗಿರಲಿ. 

8.ಈರುಳ್ಳಿ ರಿಂಗ್ಸ್ ಮತ್ತು ತುಂಡರಿಸಿದ ಲೆಮನ್ ಹೋಳುಗಳೊಂದಿಗೆ ಅಲಂಕರಿಸಿ ಖಾರವಾದ ಫ್ರೈ ಚಿಕನ್ ಅನ್ನು ಬಿಸಿಯಾಗಿ ಬಡಿಸಿ.







Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್