ಮೊಟ್ಟೆ ಪಕೋಡ ಕರಿ ಸ್ಪೆಷಲ್ ರುಚಿ

ಮನೆಯಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಮೊಟ್ಟೆ ಇಷ್ಟವಾಗುತ್ತದೆ. ಅದನ್ನು ಬೇಯಿಸಿ ಇಲ್ಲವೆ ಆಮ್ಲೆಟ್ ಮಾಡಿಕೊಡಿ ಇಷ್ಟಪಟ್ಟು ತಿನ್ನುತ್ತಾರೆ. ಆದರೆ ನಾವು ಈವತ್ತು ಮೊಟ್ಟೆಯಿಂದ ಹೊಸ ರುಚಿಯನ್ನು ಮಾಡಲು ಟ್ರೈ ಮಾಡೋಣ. ಮೊಟ್ಟೆಯನ್ನು ಆಲೂಗಡ್ಡೆ ಮತ್ತು ಕಡಲೆಹಿಟ್ಟಿನೊಂದಿಗೆ ಬೆರೆಸಿ ಇದನ್ನು ಮಾಡಲಾಗುತ್ತೆ. 

ಇದು ಮೃದುವಾಗಿದ್ದು ತಿನ್ನಲು ರುಚಿಯಾಗಿರುತ್ತೆ. ಪಕೋಡಗಳನ್ನು ಮಾಡಿದ ಮೇಲೆ ಇದನ್ನು ಮಸಾಲೆಭರಿತ ಕರಿಯೊಳಗೆ ಹಾಕಲಾಗುವುದು. ಇದರಿಂದ ಇದರ ರುಚಿ ಮತ್ತಷ್ಟು ಹೆಚ್ಚುತ್ತದೆ.

ಬೇಕಾಗುವ ಸಾಮಗ್ರಿಗಳು: (ಪಕೋಡ ಮಾಡಲು)


 1. ಮೊಟ್ಟೆ- 2 

2. ಆಲೂಗಡ್ಡೆ- 2 (ಬೇಯಿಸಿ ಹಿಸುಕಿಟ್ಟುಕೊಳ್ಳಿ) 

3. ಕಡಲೆಹಿಟ್ಟು- 2 ಟೀಚಮಚ

 4. ಈರುಳ್ಳಿ- 1 (ಕತ್ತರಿಸಿಕೊಳ್ಳಿ)

 5. ಉಪ್ಪು- ರುಚಿಗೆ ತಕ್ಕಷ್ಟು

 6. ಎಣ್ಣೆ ಕರಿಗೆ 

ಬೇಕಾಗುವ ಸಾಮಗ್ರಿಗಳು:


 1. ಈರುಳ್ಳಿ ಪೇಸ್ಟ- 2 ಟೀಚಮಚ

 2. ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಟೀಚಮಚ

 3. ಟೊಮೊಟೊ ರಸ- 2 ಟೀಚಮಚ

 4. ಜೀರಿಗೆ- 1 ಟೀಚಮಚ

 5. ಅರಿಶಿಣ ಪುಡಿ- 1 ಟೀಚಮಚ

 6. ಅಚ್ಚ ಖಾರದ ಪುಡಿ- 1 ಟೀಚಮಚ

 7. ಜೀರಿಗೆ ಪುಡಿ- 1 ಟೀಚಮಚ

 8. ಧನಿಯ ಪುಡಿ- 1 ಟೀಚಮಚ 

9. ಗರಂ ಮಸಾಲ ಪುಡಿ- 1/2 ಟೀಚಮಚ 

10. ಉಪ್ಪು ರುಚಿಗೆ ತಕ್ಕಷ್ಟು 

11. ಕರಿಬೇವು- ಸ್ವಲ್ಪ 

12. ಎಣ್ಣೆ- 2 ಟೀಚಮಚ


ಮಾಡುವ ವಿಧಾನ


 1. ಮೊಟ್ಟೆಯನ್ನು ಒಡೆದು ಒಳಗಿನದನ್ನು ಪಾತ್ರೆಗೆ ಹಾಕಿಕೊಳ್ಳಿ. ಇದರೊಂದಿಗೆ ಬೇಯಿಸಿ ಹಿಸುಕಿಟ್ಟುಕೊಂಡ ಆಲೂಗಡ್ಡೆ, ಈರುಳ್ಳಿ, ಕಡಲೆಹಿಟ್ಟು ಮತ್ತು ಉಪ್ಪನ್ನು ಸೇರಿಸಿ ಕಲಸಿಕೊಳ್ಳಿ.

2. ಬಾಣಲೆಯಲ್ಲಿ ಎಣ್ಣೆ ಕಾಯಿಸಿಕೊಂಡು ಕಲಸಿಟ್ಟುಕೊಂಡ ಹಿಟ್ಟನ್ನು ಚಮಚದ ಮೂಲಕ ಸ್ವಲ್ಪ ಎಣ್ಣೆಗೆ ಹಾಕಿ ಹೊಂಬಣ್ಣಕ್ಕೆ ತಿರುಗುವವರೆಗೆ ಕರಿಯಿರಿ. 

3. ಪಕೋಡಗಳನ್ನು ಮಾಡಿಕೊಂಡ ನಂತರ ಮತ್ತೊಂದು ಬಾಣಲಿಯಲ್ಲಿ ಎಣ್ಣೆ ಕಾಯಿಸಿಕೊಂಡು ಅದಕ್ಕೆ ಜೀರಿಗೆಯನ್ನು ಹಾಕಿ. 

4. ನಂತರ ಈರುಳ್ಳಿ ಪೇಸ್ಟ್ ಹಾಕಿ 3-4 ನಿಮಿಷಗಳವರೆಗೆ ಮಂದ ಉರಿಯಲ್ಲಿ ಹುರಿಯಿರಿ.

5. ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 2-3 ನಿಮಿಷಗಳವರೆಗೆ ಹುರಿಯಿರಿ. 

6. ಇದಕ್ಕೆ ಟೊಮೊಟೊ ರಸ, ಅರಿಶಿಣ ಪುಡಿ, ಅಚ್ಚ ಖಾರದ ಪುಡಿ, ಜೀರಿಗೆ ಪುಡಿ, ಧನಿಯ ಪುಡಿಯನ್ನು ಸೇರಿಸಿ 3-4 ನಿಮಿಷಗಳವರೆಗೆ ಕಲಸಿ. 

7. ನಂತರ ಉಪ್ಪು ಮತ್ತು ಗರಂಮಸಾಲ ಪುಡಿ ಸೇರಿಸಿ ಚೆನ್ನಾಗಿ ಕಲಸಿ. 

8. ಇದಕ್ಕೆ ಅರ್ಧ ಕಪ್ ನೀರು ಹಾಕಿ 2-3 ನಿಮಿಷಗಳವರೆಗೆ ಬೇಯಲು ಬಿಡಿ. 

9. ನಂತರ ನಿಧಾನವಾಗಿ ಇದರೊಳಗೆ ಮಾಡಿಟ್ಟುಕೊಂಡ ಪಕೋಡಗಳನ್ನು ಒಂದೊಂದಾಗಿ ಹಾಕಿ. 

10. ಒಲೆಯನ್ನು ಆರಿಸಿ ಕೊತ್ತಂಬರಿಸೊಪ್ಪನ್ನು ಈ ಕರಿಗೆ ಸೇರಿಸಿ. 

ಮೊಟ್ಟೆ ಪಕೋಡ ಕರಿಯನ್ನು ಅನ್ನದ ಜೊತೆ ತಿನ್ನಲು ರುಚಿಯಾಗಿರುತ್ತದೆ.






Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್