ಕಿಡ್ನಿಯಲ್ಲಿ ಕಲ್ಲು ಕರಗಿಸಬೇಕಾ… ಹಾಗಿದ್ರೆ ಹೀಗೆ ಮಾಡಿ…

ಕಿಡ್ನಿ ಸ್ಟೋನ್…  ಪ್ರಸ್ತುತ ಯಾಂತ್ರಿಕ ಜೀವನದಲ್ಲಿ ಕಿಡ್ನಿ ಸ್ಟೋನ್ ಸಾಮಾನ್ಯ ಸಮಸ್ಯೆಯಾಗಿದೆ. ಶೇ. 10-15ರಷ್ಟು ಜನ ಪ್ರಪಂಚದಲ್ಲಿ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾದಲ್ಲಿ ಕಿಡ್ನಿ ಸ್ಟೋನ್ ಗೆ ಮೊದಲ ಹಂತದಲ್ಲೇ ಚಿಕಿತ್ಸೆ ಪಡೆದು ಮನೆಯಲ್ಲೇ ತಯಾರಿಸಿದ ಬಾಳೆ ದಿಂಡಿನ ಅಡುಗೆಯಿಂದ ಇದನ್ನ ಕರಗಿಸಬಹುದು. ಬಾಳೆದಿಂಡಿನಲ್ಲಿ ಅನೇಕ ಖಾದ್ಯಗಳನ್ನ ಮಾಡಬಹುದು. ಬಾಳೆದಿಂಡಿನ ಪಲ್ಯ ಹೆಚ್ಚು ರುಚಿ ನೀಡುತ್ತೆ.
 ಬಾಳೆದಿಂಡಿನ ಪಲ್ಯ
 

ಬೇಕಾಗುವ ಪದಾರ್ಥಗಳು:


ಬಾಳೆದಿಂಡು – 1(1 ಮೊಳ ಉದ್ದ),


ಕಡಲೇಬೇಳೆ- 2 ಚಮಚ


ತುರಿದ ತೆಂಗಿನಕಾಯಿ - 1 ಬಟ್ಟಲು


ಹಸಿಮೆಣಸಿನ ಕಾಯಿ – 2


ಒಣಮೆಣಸಿನ ಕಾಯಿ – 2


ಬೆಲ್ಲ – ಸ್ವಲ್ಪ


ಹುಣಸೆಹಣ್ಣಿನ ರಸ


ಉಪ್ಪು - ರುಚಿಗೆ


ಒಗ್ಗರಣೆಗೆ: ಎಣ್ಣೆ, ಸಾಸಿವೆ, ಅರಿಶಿನ, ಕೊತ್ತಂಬರಿ ಸೊಪ್ಪು


 

ಮಾಡುವ ವಿಧಾನ: 


ಕುಕ್ಕರ್ ಗೆ ಎಣ್ಣೆ, ಒಣಮೆಣಸಿನ ಕಾಯಿ, ಕಡಲೇಬೇಳೆ ಹಾಕಿ ನಂತರ ಹೆಚ್ಚಿಟ್ಟ ಬಾಳೆದಿಂಡು ಹಾಕಿ 2 ಕೂಗು ಕೂಗಿಸಿಕೊಳ್ಳಬೇಕು. ಇದನ್ನು ಇಳಿಸಿಕೊಂಡು ಆರಿಸಿಟ್ಟುಕೊಳ್ಳಬೇಕು. ಸಾಸಿವೆ, ತೆಂಗಿನಕಾಯಿ ತುರಿ, ಹಸಿಮೆಣಸಿನಕಾಯಿ, ಹಾಕಿ ರುಬ್ಬಿಕೊಳ್ಳಬೇಕು.

ಒಂದು ಪ್ಯಾನ್ ಗೆ ಎಣ್ಣೆ, ಸಾಸಿವೆ, ಕರಿಬೇವು, ಅರಿಶಿನ ಹಾಕಿ ಒಗ್ಗರಣೆ ಹಾಕಿಕೊಳ್ಳಬೇಕು. ಇದಕ್ಕೆ ಬೇಯಿಸಿಟ್ಟುಕೊಂಡ ಬಾಳೆದಿಂಡನ್ನು ಹಾಕಿ, ಉಪ್ಪು, ಸ್ವಲ್ಪ ಬೆಲ್ಲ, ಹುಣಸೆಹಣ್ಣಿನ ರಸ ಹಾಕಿ. ಬಳಿಕ ರುಬ್ಬಿಟ್ಟುಕೊಂಡ ಮಸಾಲಾ ಹಾಕಿ ಪ್ಯಾನ್ ನಲ್ಲಿ ಹುರಿಯಬೇಕು. ಕೊತ್ತಂಬರಿ ಸೊಪ್ಪು ಹಾಕಿ ಗಾರ್ನಿಶ್ ಮಾಡಿದರೆ ರುಚಿಯಾದ ಹೆಲ್ದಿಯಾದ ಬಾಳೆದಿಂಡಿನ ಪಲ್ಯ ರೆಡಿ.


Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್