ಬೇಬಿ ಕಾರ್ನ್ ಮಂಚೂರಿ

ಚಿಕ್ಕ ಚಿಕ್ಕದಾಗಿ ಕತ್ತರಿಸಿದ ಕಾರ್ನ್ -1 ಕಪ್

ಮೈದಾ ಹಿಟ್ಟು - 1 ಕಪ್


ಬೇಯಿಸಿದ ಟೊಮ್ಯಾಟೊ -4


ಈರುಳ್ಳಿ- 2


ಹಸಿ ಮೆಣಸು -2


ಕತ್ತರಿಸಿಟ್ಟುಕೊಂಡ ದೊಡ್ಡ ಮೆಣಸು-ಸ್ವಲ್ಪ


ಕೊತ್ತಂಬರಿ ಸೊಪ್ಪು - ಸ್ವಲ್ಪ


ಶುಂಠಿ-ಬೆಳ್ಳುಳ್ಳಿ ಪೇಸ್ಟ್ -2 ಚಮಚ


ಅಚ್ಚ ಖಾರದ ಪುಡಿ - ಸ್ವಲ್ಪ


ಅರಿಷಿಣ- ಸ್ವಲ್ಪ


ಉಪ್ಪು- ರುಚಿಗೆ ತಕ್ಕಷ್ಟು


ಎಣ್ಣೆ

 ಮಾಡುವ ವಿಧಾನ


* ಮೈದಾಹಿಟ್ಟು, ಅಚ್ಚ ಖಾರದ ಪುಡಿ ಎರಡು ಚಮಚ, ಚಿಟಿಕೆ ಅರಿಷಿಣ, ಉಪ್ಪು ಹಾಕಿ ಕಲಸಿ. ಈಗ ಕತ್ತರಿಸಿದ ಕಾರ್ನ್ ಗಳನ್ನು ಈ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಕರಿದು ಇರಿಸಿಕೊಳ್ಳಿ.

ಈಗ ಮಿಕ್ಸಿಗೆ ಬೇಯಿಸಿದ ಟೊಮ್ಯಾಟೊ, ಹಸಿಮೆಣಸು, ಸ್ವಲ್ಪ ಉಪ್ಪು ಸೇರಿಸಿ ರುಬ್ಬಿ.

* ಒಂದು ಪ್ಯಾನ್ ಗೆ ಎರಡು ಚಮಚ ಎಣ್ಣೆ,ಉದ್ದುದ್ದ ಹೆಚ್ಚಿದ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ರುಬ್ಬಿದ ಮಿಶ್ರಣ ಹಾಕಿ ಕುದಿಸಿ. ಈಗ ಇದಕ್ಕೆ ಕರಿದಿಟ್ಟ ಕಾರ್ನ್ ಸೇರಿಸಿ ಚೆನ್ನಾಗಿ ಕಲಸಿ.

*ಇದನ್ನು ಒಂದು ಪ್ಲೇಟ್ ಗೆ ಹಾಕಿ ಅದರ ಮೇಲೆ ಕೊತ್ತಂಬರಿ ಸೊಪ್ಪು ಹಾಗೂ ಹೆಚ್ಚಿದ ಈರುಳ್ಳಿಯನ್ನು ಹಾಕಿ ಅಲಂಕರಿಸಿದರೆ  ಬೇಬಿ ಕಾರ್ನ್ ಮಂಚೂರಿ ಸಾಯಂಕಾಲದ ಟೀ-ಕಾಫಿ ಜತೆ ಸವಿಯಲು ಸಿದ್ಧ.


Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್