ಪಟಾ ಪಟ್ ಚಿಕನ್ ಮಂಚೂರಿ ಮಾಡಿ ತಿನ್ನಿ
ಚುಮು ಚುಮು ಚಳಿ ಶುರುವಾಗಿದೆ.. ತಂಡಿ ಚಳಿಗೆ ಬಾಯಿಗೆ ರುಚಿ ನೀಡುವ ಖಾದ್ಯಗಳಲ್ಲಿ ಚಿಕನ್ ಐಟಮ್‌ಗಳು ತುಂಬಾ ಬರ್ತವೆ.. ಅದ್ರಲ್ಲಿ ಸ್ವಲ್ಪ ಸ್ಪೈಸಿ.. ಸ್ವಲ್ಪ ಸ್ವೀಟ್ ಆಗಿರೋ ಚಿಕನ್ ಮಂಚೂರಿ ಸವಿಯೋದೆ ಒಂದು ಮಜಾ.. ಮತ್ತಿನ್ಯಾಕೆ ತಡ ಚಿಕನ್ ಮಂಚೂರಿ ಮಾಡೋದ್ಹೇಗೆ ಅಂತಾ ಹೇಳ್ತೀವಿ ಬನ್ನಿ.
ಚಿಕನ್(ಮಿಡಿಯಮ್ ಸೈಜ್ ಇರಲಿ), ಎರಡು ಮೊಟ್ಟೆ, ಕಬಾಬ್ ಪೌಡರ್, ಕಿಸಾನ್ ಜಾಮ್, ಸ್ವಲ್ಪ ಖಾರದ ಪುಡಿ, ಪೆಪ್ಪರ್ ಪೌಡರ್, ಹಸಿ ಮೆಣಸಿನ ಪೇಸ್ಟ್ ಒಂದು ಟೀ ಸ್ಫೂನ್, ಸ್ವಲ್ಪ ಎಣ್ಣೆ. ಈರುಳ್ಳಿ, ಕತ್ತರಿಸಿದ ಹಸಿ ಮೆಣಸಿನಕಾಯಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಬೇಕಾಗುವ ಸಾಮಗ್ರಿಗಳು
ಚಿಕನ್(ಮಿಡಿಯಮ್ ಸೈಜ್ ಇರಲಿ), ಎರಡು ಮೊಟ್ಟೆ, ಕಬಾಬ್ ಪೌಡರ್, ಕಿಸಾನ್ ಜಾಮ್, ಸ್ವಲ್ಪ ಖಾರದ ಪುಡಿ, ಪೆಪ್ಪರ್ ಪೌಡರ್, ಹಸಿ ಮೆಣಸಿನ ಪೇಸ್ಟ್ ಒಂದು ಟೀ ಸ್ಫೂನ್, ಸ್ವಲ್ಪ ಎಣ್ಣೆ. ಈರುಳ್ಳಿ, ಕತ್ತರಿಸಿದ ಹಸಿ ಮೆಣಸಿನಕಾಯಿ.
ಮಾಡುವ ವಿಧಾನ
ಮೊದಲು ಚಿಕನ್ನನ್ನು ಮಿಡಿಯಮ್ ಸೈಜ್ನಲ್ಲಿ ಕಟ್ ಮಾಡಿಟ್ಟುಕೊಳ್ಳಿ. ಅದಕ್ಕೆ ಕಬಾಬ್ ಪೌಡರ್, ಎರಡು ಮೊಟ್ಟೆ ಹಾಕಿ ಮಿಶ್ರಣ ಮಾಡಿ. ನಂತರ ಸ್ವಲ್ಪ ಖಾರದ ಪುಡಿ, ಹಸಿ ಮೆಣಸಿನ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 15 ನಿಮಿಷ ನೆನೆಯಲು ಬಿಡಿ. ನಂತರ ಕಾದ ಎಣ್ಣೆಯಲ್ಲಿ ಚಿಕನ್ ತುಣುಕುಗಳನ್ನು ಬಿಡಿ. ಚಿಕನ್ ಕಬಾಬ್ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ಬಾಣಲೆಯಿಂದ ಕಬಾಬ್ ತೆಗೆಯಿರಿ. ನಂತರ ಬೇರೆ ಪಾತ್ರೆಗೆ 1 ಟೇಬಲ್ ಸ್ಪೂನ್ ಎಣ್ಣೆ ಹಾಕಿ.. ಅದಕ್ಕೆ ಕತ್ತರಿಸಿದ ಈರುಳ್ಳಿ ಹಾಗೂ ಮೆಣಸಿನಕಾಯಿ ಹಾಕಿ ಪ್ರೈ ಮಾಡಿ. ನಂತರ ಕಬಾಬ್ ಪೀಸ್ ಹಾಕಿ ಮಿಶ್ರಣ ಮಾಡಿ.. ಇದಾದ ಬಳಿಕ ಸಾಸ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ. ಚಿಕನ್ ಮಂಚೂರಿ ಸವಿಯಲು ಸಿದ್ಧ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
Comments
Post a Comment