ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಬೆಂಗಳೂರು:  ಸೊಪ್ಪು ತರಕಾರಿ ಅರೋಗ್ಯಕ್ಕೆ ಒಳ್ಳೆಯದು. ಆದರೆ ಅದೇ ಸಾಂಬಾರ್, ಅದೇ ಪಲ್ಯ ತಿಂದು ಬೋರಾದರೆ ಸಾಸಿವೆ ಮಾಡಿ ತಿನ್ನಿ. ಮಾಡುವ ವಿಧಾನ ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು


ಹರಿವೆ ಸೊಪ್ಪು
ಸಾಸಿವೆ
ಖಾರದ ಪುಡಿ
ಬೆಲ್ಲ
ಒಣ ಮೆಣಸು
ಕಾಯಿ ತುರಿ
ಉಪ್ಪು
 


ಮಾಡುವ ವಿಧಾನ


ಹರಿವೆ ಸೊಪ್ಪನ್ನು ಚೆನ್ನಾಗಿ ತೊಳೆದುಕೊಂಡು ಖಾರದ ಪುಡಿ, ಉಪ್ಪು, ಬೆಲ್ಲ ಹಾಕಿ ಬೇಯಿಸಿ. ಕಾಯಿತುರಿಗೆ ಒಣಮೆಣಸು, ಸಾಸಿವೆ ಹಾಕಿ ರುಬ್ಬಿ. ಬೆಂದ ಹರಿವೆ ಸೊಪ್ಪು ಸಂಪೂರ್ಣವಾಗಿ ತಣಿದ ಮೇಲೆ ರುಬ್ಬಿದ ಮಸಾಲೆಯನ್ನು ಸೇರಿಸಿ. ಇದನ್ನು ಕುದಿಸುವುದು ಬೇಡ. ಹಾಗೇ ಒಗ್ಗರಣೆ ಹಾಕಿ ಅನ್ನದ ಜತೆ ಸವಿಯಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್