ಸ್ಪೈಸಿ.. ಟೇಸ್ಟಿ ಟೇಸ್ಟಿ ಚೀಸ್ ಚಿಕನ್ ಕಬಾಬ್ ರೆಸಿಪಿ…

ಭಾನುವಾರ ಬಂದರೆ ಸಾಕು ನಾನ್ ವೆಜ್ ಪ್ರಿಯರಿಗೆ ಒಂದು ರೀತಿ ಹಬ್ಬ. ಮಟನ್ ಗಿಂತಲೂ ಹೆಚ್ಚು ಮಂದಿ ಚಿಕನ್ ಲೈಕ್ ಮಾಡ್ತಾರೆ. ಕಬಾಬ್, ಚಿಕನ್ ಗ್ರಿಲ್, ಚಿಕನ್ ಸಾರು ಹೀಗೆ ನಾನಾ ರೀತಿ ವೆರೈಟಿ ಟ್ರೈ ಮಾಡ್ತಾನೆ ಇರ್ತಾರೆ. ಅಂತಹವರಿಗಾಗಿಯೇ ಇಲ್ಲೊಂದು ಸಿಂಪಲ್ ರೆಸಿಪಿ ಇದೆ. ಅದೇ ಚೀಸ್ ಚಿಕನ್ ಕಬಾಬ್. ಒಮ್ಮೆ ಟ್ರೈ ಮಾಡಿ ನೀವು ಸಹ ಇಷ್ಟ ಆಗಬಹುದು…
ಚೀಸ್ ಚಿಕನ್ ಕಬಾಬ್

ಬೇಕಾಗುವ ಪದಾರ್ಥಗಳು:


ಚಿಕ್ಕನ್ - ½ ಕೆಜಿ


ಚೀಸ್ – ¼ ಕಪ್


ಮೊಟ್ಟೆ – 2


ಅಕ್ಕಿ ಹಿಟ್ಟು - 1 ಚಮಚ


ಜೋಳದ ಹಿಟ್ಟು - 2 ಚಮಚ


ಈರುಳ್ಳಿ – 1


ಬೆಳ್ಳುಳ್ಳಿ ಪೇಸ್ಟ್ – 1 ಚಮಚ


ನಿಂಬೆರಸ - 2 ಚಮಚ


ಹಸಿಮೆಣಸಿನಕಾಯಿ  – 5


ಕರಿಮೆಣಸು - 1 ಚಮಚ


ಕೆಂಪು ಮೆಣಸಿನ ಪುಡಿ - 1 ಚಮಚ


ಗರಂ ಮಸಾಲ - 1 ಚಮಚ


ಚಕ್ಕೆ ಪುಡಿ - 1 ಚಮಚ


ಕೊತ್ತಂಬರಿ ಸೊಪ್ಪು - ಸ್ವಲ್ಪ


ಎಣ್ಣೆ - ಕರಿಯಲು 


ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ:


  ಒಂದು ಪಾತ್ರೆಗೆ ಹೆಚ್ಚಿಟ್ಟ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಕರಿಮೆಣಸು, ಕೆಂಪು ಮೆಣಸಿನ ಪುಡಿ, ಗರಂ ಮಸಾಲ, ಚಕ್ಕೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ನಿಂಬೆರಸ ಹಾಕಿ  ಮಿಕ್ಸ್ ಮಾಡಿಕೊಳ್ಳಿ. ನಂತರ ಸಣ್ಣ ಸಣ್ಣದಾಗಿ ತುಂಡು ಮಾಡಿದ ಚಿಕ್ಕನ್ ಆ ಮಿಶ್ರಣದೊಂದಿಗೆ ಚೆನ್ನಾಗಿ ಬೆರೆಸಿ 1 ಗಂಟೆ ನೆನೆಯಲು ಬಿಡಿ. (*ಚಿಕನ್ ಮಿಶ್ರಣದಲ್ಲಿ ನೆನೆದಷ್ಟು ರುಚಿ ಹೆಚ್ಚು)

ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಬೇಕು. ಜೋಳದ ಹಿಟ್ಟನ್ನು ನೀರಿನಲ್ಲಿ ಮಿಶ್ರಣ ಮಾಡಿ ಚಿಕ್ಕನ್ ಗೆ ಸೇರಿಸಿ. ಹೀಗೆ ಮಾಡುವುದರಿಂದ ಸ್ವಲ್ಪ ಗಟ್ಟಿಯಾಗಿರುತ್ತೆ. ನಂತರ ಅದನ್ನುಕಟ್ ಲೆಟ್ ರೀತಿ ಮಾಡಿ ಕೈ ಬೆರಳಿನಿಂದ ತೂತು ಮಾಡಿ ಅದಕ್ಕೆ ತುರಿದಿಟ್ಟುಕೊಂಡ ಚೀಸ್ ಫಿಲ್ ಮಾಡಬೇಕು.

ಎಣ್ಣೆ ಕಾದ ಬಳಿಕ ಕಬಾಬನ್ನು ಮೊಟ್ಟೆಯಲ್ಲಿ ಅದ್ದಿ ಅದನ್ನು ಅಕ್ಕಿಹಿಟ್ಟಲ್ಲಿ ರೋಲ್ ಮಾಡಿ ಎಣ್ಣೆಯಲ್ಲಿ ಚೆನ್ನಾಗಿ ಕರಿಯಬೇಕು. ಈಗ ಬಿಸಿ ಬಿಸಿ ರುಚಿಯಾದ ಚೀಸ್ ಚಿಕನ್ ಕಬಾಬ್ ಸವಿಯಲು ಸಿದ್ಧ.

ಭಾನುವಾರ ನಿಮ್ಮ ಅಡುಗೆ ಮನೆಯಲ್ಲಿ ಚಿಕ್ಕನ್ ಸ್ಪೆಷಲ್ ಬೇಕೆಂದು ಬಯಸುವವರು, ಈ ಚೀಸ್ ಚಿಕನ್ ಕಬಾಬ್ ರುಚಿ ಟ್ರೈ ಮಾಡಿ. ಮಕ್ಕಳಿಗೂ ವೆರೈಟಿ ಟೇಸ್ಟ್ ಖುಷಿ ನೀಡುತ್ತೆ.


Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್