ಹಬೆಯಲ್ಲಿ ಬೇಯಿಸಿದ ಕಬಾಬ್-ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

ಮುಸ್ಲಿಮರಿಗೆ ಪವಿತ್ರವಾದ ಎರಡು ಹಬ್ಬಗಳಲ್ಲಿ ಹೆಚ್ಚಿನ ಮಹತ್ವ ಹೊಂದಿರುವ ಹಬ್ಬ ಎಂದರೆ ಬಕ್ರೀದ್ ಅಥವಾ ಈದ್ ಅಲ್ ಅಧಾ. ಮಕ್ಕಾದಲ್ಲಿ ನಡೆಯುವ ವಾರ್ಷಕ ಸಮ್ಮೇಳನದ ಎರಡನೆಯ ದಿನ ವಿಶ್ವದ ಇತರ ಕಡೆಗಳಲ್ಲಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ. ಈ ಶುಭಸಂದರ್ಭದಲ್ಲಿ ತಮ್ಮ ಮನೆಗೆ ಅತಿಥಿಗಳನ್ನು ಆಹ್ವಾನಿಸುವುದು ಹಾಗೂ ತಾವೂ ಇತರರ ಮನೆಗೆ ಅತಿಥಿಯಾಗಿ ಹೋಗಿ ಶುಭ ಹಾರೈಸುವುದು ಹಬ್ಬದ ಸಂತೋಷವನ್ನು ಹಂಚಿಕೊಳ್ಳುವಲ್ಲಿ ನೆರವಾಗುತ್ತದೆ. 

ಹೆಚ್ಚಾಗಿ ಮುಸ್ಲಿಂ ಕುಟುಂಬಗಳಲ್ಲಿ ಬಿರಿಯಾನಿ, ಕಬಾಬ್ ಹಾಗೂ ಹಲವಾರು ವಿಶೇಷ ಖಾದ್ಯಗಳನ್ನು ಈ ದಿನ ತಯಾರಿಸಲಾಗುತ್ತದೆ. ಆದರೆ ಈ ವರ್ಷದ ಹಬ್ಬವನ್ನು ಇನ್ನೂ ಹೆಚ್ಚು ಉಲ್ಲಾಸದಾಯಕ, ರುಚಿಕರ ಮತ್ತು ಎಲ್ಲರ ಮನಗೆಲ್ಲುವ ರೆಸಿಪಿಯೊಂದರ ಮೂಲಕ ಏಕೆ ಮಾಡಿಕೊಳ್ಳಬಾರದು? ಈ ವರ್ಷ ಸುಲಭವಾಗಿ ತಯಾರಿಸಬಹುದಾದ, ಆದರೆ ಇದುವರೆಗೆ ಯಾರೂ ತಯಾರಿಸಿಯೇ ಇಲ್ಲದ ಹಬೆಯಲ್ಲಿ ಬೇಯಿಸಿದ ಕಬಾಬ್ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಬಹುದಲ್ಲವೇ? ಬನ್ನಿ, ಇದನ್ನು ತಯಾರಿಸುವ ವಿಧಾನವನ್ನು ನೋಡೋಣ: ಸ್ಪೆಷಲ್ ರುಚಿಯ ಕಬಾಬ್ ರೆಸಿಪಿ

ಪ್ರಮಾಣ: ಆರು ಕಬಾಬ್‌ಗಳು

 *ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು.

 *ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು.

 ಅಗತ್ಯವಿರುವ ಸಾಮಾಗ್ರಿಗಳು: 


1. ಕೋಳಿ ಮಾಂಸ ಅಥವಾ ಕುರಿಮಾಂಸದ ಖೀಮಾ - ನಾನೂರು ಗ್ರಾಂ

 2. ಶುಂಠಿ ಪೇಸ್ಟ್ - 1 ದೊಡ್ಡಚಮಚ 

3. ಬೆಳ್ಳುಳ್ಳಿ ಪೇಸ್ಟ್ - 1 ದೊಡ್ಡಚಮಚ 

4. ಈರುಳ್ಳಿ ಪೇಸ್ಟ್ - 3 ದೊಡ್ಡಚಮಚ

 5. ಹಸಿಮೆಣಸಿನ ಪೇಸ್ಟ್ - ½ ದೊಡ್ಡಚಮಚ

 6. ಮೊಸರು- 1 ದೊಡ್ಡಚಮಚ 

7. ಕೊತ್ತಂಬರಿ ಸೊಪ್ಪು - ½ ದೊಡ್ಡಚಮಚ (ದಂಟಿಲ್ಲದ್ದು, ಕೇವಲ ಎಲೆಗಳನ್ನು ಚಿಕ್ಕದಾಗಿ ಹೆಚ್ಚಿದ್ದು)

8. ಜೀರಿಗೆ ಪುಡಿ - ½ ಚಿಕ್ಕಚಮಚ 

9. ಕೆಂಪು ಮೆಣಸಿನ ಪುಡಿ - 1 ಚಿಕ್ಕಚಮಚ

 10. ಪುಡಿ ಮಾಡಿದ ಕಾಳುಮೆಣಸು - 1 ದೊಡ್ಡಚಮಚ 

11. ಈರುಳ್ಳಿ ದಂಟು - ½ ಕಪ್ (ಚಿಕ್ಕದಾಗಿ ಹೆಚ್ಚಿದ್ದು) 

12. ಉಪ್ಪು ರುಚಿಗನುಸಾರ

 13. ಬ್ರೆಡ್ - 1 ಫಲಕ (ಹಾಲಿನಲ್ಲಿ ಮುಳುಗಿಸಿಟ್ಟಿದ್ದು)

 14. ಪಾಲಕ್ ಸೊಪ್ಪು - ¼ಕಪ್ (ಚಿಕ್ಕದಾಗಿ ಹೆಚ್ಚಿದ್ದು)

 15. ಅಡುಗೆ ಎಣ್ಣೆ- 3 ದೊಡ್ಡಚಮಚ


ವಿಧಾನ: 


1. ಖೀಮಾ, ಶುಂಠಿ ಪೇಸ್ಟ್, ಈರುಳ್ಳಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ದಂಟು, ಬ್ರೆಡ್ ಮತ್ತು ಜೀರಿಗೆ ಪುಡಿ ಎಲ್ಲವನ್ನೂ ಮಿಕ್ಸಿಯ ಜಾರ್‌ನಲ್ಲಿ ಹಾಕಿ ಕಡೆಯಿರಿ. 

2. ಇದು ತುಂಬಾ ನುಣ್ಣಗಾಗಬಾರದು, ತರಿತರಿಯಾರಿಗಬೇಕು. 

3. ಈ ಮಿಶ್ರಣವನ್ನು ಬೋಗುಣಿಯೊಂದರಲ್ಲಿ ಹಾಕಿ ಉಪ್ಪು ಸೇರಿಸಿ ಮಿಶ್ರಣ ಮಾಡಿ. 

4. ಈ ಮಿಶ್ರಣವನ್ನು ಗಂಟುಗಳಿಲ್ಲದಂತೆ ಕಲಸಿ

 5. ಈಗ ನಿಮ್ಮ ಕೈಗಳಿಗೆ ಕೊಂಚ ತುಪ್ಪ ಅಥವಾ ಎಣ್ಣೆ ಹಚ್ಚಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿಸಿ. 

6. ಈ ಉಂಡೆಗಳನ್ನು ಒತ್ತಿ ಬಿಸ್ಕತ್ತುಗಳ ಆಕಾರ ನೀಡಿ 

7. ಈ ಎಲ್ಲಾ ಉಂಡೆಗಳಿಗೆ ಕೊಂಚ ಎಣ್ಣೆಯನ್ನು ಎಲ್ಲಾ ಕಡೆ ಸವರಿ

 8. ಒಂದು ಬಾಣಲಿಯಲ್ಲಿ ಕೊಂಚ ಎಣ್ಣೆ ಹಾಕಿ ಬಿಸಿಮಾಡಿ. 

9. ಈ ಕಬಾಬ್‌ಗಳನ್ನು ಚಿಕ್ಕ ಉರಿಯಲ್ಲಿ ಹುರಿಯಿರಿ. 

10. ಎಲ್ಲವೂ ಚೆನ್ನಾಗಿ ಹುರಿದಿದೆ ಎಂದೆನಿಸಿದ ಬಳಿಕ ಇವನ್ನು ಸ್ಟೀಮರ್ ನಲ್ಲಿ ಹಾಕಿ 

11. ಮುಚ್ಚಳ ಮುಚ್ಚಿ ಹಬೆಯಲ್ಲಿ ಸುಮಾರು ಹದಿನೈದು ನಿಮಿಷ ಇರಿಸಿ 

12. ಬಳಿಕ ಹೊರತೆಗೆದು ಅತಿಥಿಗಳಿಗೆ ಬಡಿಸಿ. 

13. ಇದು ಯಾವುದೇ ಸಾಸ್ ಅಥವಾ ಕೆಚಪ್‌ನೊಂದಿಗೆ ಚೆನ್ನಾಗಿ ಹೊಂದುತ್ತದೆ. ಕಡೆಯದಾಗಿ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿ. ಚಟ್ನಿ ಸಹಾ ಕಬಾಬ್‌ನ ರುಚಿ ಹೆಚ್ಚಿಸುತ್ತದೆ.





Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್