ಹೊಸ ರುಚಿ: ಮೊಟ್ಟೆಯ ಪಲ್ಯ ರೆಸಿಪಿ

ಮೊಟ್ಟೆಯ ಪಲ್ಯ....ಹೆಸರೇ ತುಂಬಾ ವಿಚಿತ್ರವಾಗಿದೆ. ಯಾಕೆಂದರೆ ನಾವು ದಕ್ಷಿಣ ಭಾರತೀಯರು ಹಲವಾರು ರೀತಿಯ ತರಕಾರಿ ಪಲ್ಯಗಳನ್ನು ಮಾಡಿಕೊಂಡು ತಿನ್ನುತ್ತೇವೆ. ಆದರೆ ಮೊಟ್ಟೆ ಪಲ್ಯ ಮಾತ್ರ ಇದುವರೆಗೆ ಮಾಡಿಲ್ಲ ಎಂದು ಹೇಳಬಹುದು. ಮೊಟ್ಟೆ ಪಲ್ಯವು ದಕ್ಷಿಣ ಹಾಗೂ ಉತ್ತರ ಭಾರತದ ಅಡುಗೆಯ ಮಿಶ್ರಣವಾಗಿದೆ. ಇದನ್ನು ಪಲ್ಯದಂತೆ ಬಳಸಬಹುದು. ಚಪಾತಿ, ರೊಟ್ಟಿ ಅಥವಾ ಪರೋಟ ಜತೆಗೂ ಇದನ್ನು ನೀಡಬಹುದು. ಅನ್ನ ಸಾರಿಗೂ ಇದು ಚೆನ್ನಾಗಿ ಹೊಂದಿಕೊಳ್ಳುತ್ತದೆ.

 ಬೇಯಿಸಿದ ಮೊಟ್ಟೆ, ಕ್ಯಾಪ್ಸಿಕಂ(ದೊಣ್ಣೆ ಮೆಣಸು) ಟೊಮೆಟೋದಿಂದ ಮಾಡುವಂತಹ ವಿಶೇಷ ಪಲ್ಯ ಇದಾಗಿದೆ. ಇದಕ್ಕೆ ಆದ್ಯತೆಯ ಅನುಸಾರವಾಗಿ ನೀವು ತರಕಾರಿಗಳನ್ನು ಸೇರಿಸಿಕೊಳ್ಳಬಹುದು. ಟೊಮೆಟೊ ಮೂಲದ ಮೊಟ್ಟೆ ಪಲ್ಯವು ಚೆನ್ನಾಗಿರುವುದು. ಸರಿಯಾದ ಮಸಾಲೆ ಹಾಗೂ ಅದನ್ನು ತಯಾರಿಸುವ ರೀತಿಯ ಮೇಲೆ ಮೊಟ್ಟೆ ಪಲ್ಯದ ರುಚಿಯು ಅವಲಂಬಿತವಾಗಿರುವುದು. ಕಸೂರಿ ಮೇಥಿ ಹಾಕಿಕೊಂಡರೆ ಆಗ ಮೊಟ್ಟೆ ಪಲ್ಯದ ರುಚಿಯೇ ತುಂಬಾ ಭಿನ್ನವಾಗಿರುವುದು. ಇದನ್ನು ಮನೆಯಲ್ಲಿ ತುಂಬಾ ಬೇಗನೆ ತಯಾರಿಸಿಕೊಳ್ಳಬಹುದು. ಇದು ಹೆಚ್ಚು ಶ್ರಮ ಕೂಡ ವಹಿಸಬೇಕಾಗಿಲ್ಲ.

 ನೀವು ಮೊಟ್ಟೆ ಪಲ್ಯ ಪ್ರಯತ್ನಿಸಲು ಬಯಸುವಿರಾದರೆ ಕೆಳಗಿನ ವೀಡಿಯೋ ನೋಡಿ ಮತ್ತು ವಿವರವಾಗಿ ಕೊಟ್ಟಿರುವ ಮಾಹಿತಿ ಓದಿಕೊಂಡು ಇದನ್ನು ತಯಾರಿಸಬಹುದು.

Ingredients 


ಮೊಟ್ಟೆಗಳು-3 

ಕ್ಯಾಪ್ಸಿಕಂ-1/2 

ಟೊಮೆಟೋ-1 

ಎಣ್ಣೆ-4 ಚಮಚ 

ಅರಶಿನ ಹುಡಿ ½ ಚಮಚ

 ಜೀರಿಗೆ ಹುಡಿ 1 ಚಮಚ

 ಉಪ್ಪು 1 ಮತ್ತು ¾ ಚಮಚ

 ಕೆಂಪು ಮೆಣಸಿನ ಹುಡಿ 1 ಚಮಚ 

ಕಸೂರಿ ಮೇಥಿ 1 ಚಮಚ 

ಕಿಚನ್ ಕಿಂಗ್ ಮಸಾಲ-1 ಚಮಚ

 ಕೊತ್ತಂಬರಿ-1 ಚಮಚ ಕತ್ತರಿಸಿಕೊಂಡಿರುವುದು ಮತ್ತು ಅಲಂಕಾರಕ್ಕೆ


How to Prepare


 1. ಒಂದು ಆಳತಳದ ತವಾಗೆ ಮೊಟ್ಟೆಗಳನ್ನು ಹಾಕಿ. 

2. ಮೊಟ್ಟೆಗಳು ಮುಳುವಷ್ಟು ಪ್ರಮಾಣದಲ್ಲಿ ಇದಕ್ಕೆ ನೀರು ಹಾಕಿ. 

3. ಒಂದು ಚಮಚ ಉಪ್ಪು ಹಾಕಿ ಮತ್ತು 15 ನಿಮಿಷ ಕಾಲ ಬೇಯಲಿ.

 4. ಇದೇ ವೇಳೆ ಕ್ಯಾಪ್ಸಿಕಂ ತೆಗೆದು ಎರಡು ತುಂಡುಗಳನ್ನಾಗಿ ಮಾಡಿ. 

5. ಮೇಲಿನ ಭಾಗವನ್ನು ಕತ್ತರಿಸಿ. 

6. ಒಳಗಿನ ಬಿಳಿ ಬೀಜಗಳನ್ನು ತೆಗೆಯಿರಿ. 

7. ಅರ್ಧ ಕ್ಯಾಪ್ಸಿಕಂ ತೆಗೆದು ಅದನ್ನು ಸಣ್ಣ ತುಂಡುಗಳನ್ನಾಗಿ ಮಾಡಿ.

 8. ಕ್ಯಾಪ್ಸಿಕಂನ ಮೇಲಿನ ಭಾಗವನ್ನು ಅದರ ತೊಟ್ಟು ತೆಗೆದು ಬಳಸಬಹುದು. 

9. ಟೊಮೆಟೋ ತೆಗೆದುಕೊಂಡು ಅದರ ಗಟ್ಟಿಯಾದ ಮೇಲಿನ ಭಾಗ ತೆಗೆಯಿರಿ.

 10. ಇದನ್ನು ಉದ್ದವಾಗಿ ಕತ್ತರಿಸಿಕೊಳ್ಳಿ ಮತ್ತು ಅದನ್ನು ಅರ್ಧ ಮಾಡಿಕೊಳ್ಳಿ. 

11. ಟೊಮೆಟೋದ ಬೀಜಗಳನ್ನು ಚಾಕುವಿನಿಂದ ತೆಗೆಯಿರಿ. 

12. ಇದನ್ನುಮಧ್ಯಮ ಗಾತ್ರದಲ್ಲಿ ಕತ್ತರಿಸಿ.

 13. ತವಾ ಬಿಸಿ ಮಾಡಿ ನಾಲ್ಕು ಚಮಚ ಎಣ್ಣೆ ಹಾಕಿ. 

14. ಕತ್ತರಿಸಿಕೊಂಡ ಟೊಮೆಟೋ ಮತ್ತು ಕ್ಯಾಪ್ಸಿಕಂ ಹಾಕಿ. 

15. ಒಂದು ಚಿಟಿಕೆ ಅರಶಿನ ಹುಡಿ ಮತ್ತು ಒಂದು ಚಮಚ ಜೀರಿಗೆ ಹುಡಿ ಹಾಕಿ. 

16. ಒಂದು ಚಮಚ ಉಪ್ಪು ಮತ್ತು ಕೆಂಪು ಮೆಣಸಿನ ಹುಡಿ ಹಾಕಿ.

 17. ಮಸಾಲೆಯನ್ನು ಸರಿಯಾಗಿ ಹುರಿಯಿರಿ.

 18. ಕಸೂರಿ ಮೇಥಿಯನ್ನು ಅಂಗೈಗೆ ಹಾಕಿಕೊಂಡು ಹಿಚುಕಿಕೊಂಡು ಮಸಾಲೆಗೆ ಹಾಕಿ. 

19. ಬೇಯಿಸಿದ ಮೊಟ್ಟೆಯನ್ನು ಅರ್ಧ ಭಾಗ ಮಾಡಿ.

 20. ಇದನ್ನು ಮಧ್ಯಮ ಗಾತ್ರದ ತುಂಡುಗಳನ್ನಾಗಿ ಮಾಡಿ. 

21. ಇದನ್ನು ಮಸಾಲೆಗೆ ಹಾಕಿ. 

22. ¾ ಚಮಚ ಉಪ್ಪು ಹಾಕಿ ಸರಿಯಾಗಿ ಮಿಶ್ರಣ ಮಾಡಿ.

 23. ಅಂತಿಮವಾಗಿ ಒಂದು ಚಮಚ ಕಿಚನ್ ಕಿಂಗ್ ಮಸಾಲ ಮತ್ತು ಕತ್ತರಿಸಿಕೊಂಡಿರುವ ಕೊತ್ತಂಬರಿ ಹಾಕಿ ಸರಿಯಾಗಿ ಮಿಶ್ರಣ ಮಾಡಿ. 

24. ಇದನ್ನು ಈಗ ಒಂದು ಪಾತ್ರೆಗೆ ಹಾಕಿ. 

25. ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ ಬಡಿಸಿ.







Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್