ಸರಳವಾದ ರುಚಿಭರಿತ ಪಾಲಾಕ್ ಚಿಕನ್ ಕರಿ ರೆಸಿಪಿ

ಪಾಲಾಕ್ ಚಿಕನ್ ಕರಿ ಎಂಬುದು ಒಂದು ಸರಳವಾದ ಖಾದ್ಯವಾಗಿದ್ದು, ಅಧಿಕ ಪೋಷಕಾಂಶಗಳನ್ನು ತನ್ನೊಳಗೆ ಅಡಗಿಸಿಕೊಂಡಿರುತ್ತದೆ. ವಾರದ ದಿನಗಳಲ್ಲಿ ಮಾಡಲು ಇದು ಹೇಳಿ ಮಾಡಿದ ಖಾದ್ಯವಾಗಿರುತ್ತದೆ. ಪಾಲಾಕ್ ಚಿಕನ್ ಭಾರತದಲ್ಲಿ ತುಂಬಾ ಜನಪ್ರಿಯವಾಗಿದೆ, ಏಕೆಂದರೆ ಭಾರತದಲ್ಲಿ ಪಾಲಾಕ್ ಹೇರಳವಾಗಿ ದೊರೆಯುತ್ತದೆ. ಆದರೆ ಬಹುತೇಕ ಜನರು ಇದರ ಕಹಿ ರುಚಿಯಿಂದಾಗಿ ಇದನ್ನು ತಮ್ಮ ಆಹಾರದಲ್ಲಿ ಸೇರಿಸಲು ಹಿಂದೇಟು ಹಾಕುತ್ತಾರೆ. ಹಾಗಾದರೆ ಯಾವ ಕಾರಣಕ್ಕಾಗಿ ಪಾಲಾಕ್ ಅನ್ನು ಚಿಕನ್ ಜೊತೆಗೆ ಸೇರಿಸಬಹುದು? ಏಕೆಂದರೆ ಇವೆರಡು ಬೆರೆತರೆ ರುಚಿ ಮತ್ತು ಆರೋಗ್ಯ ಎರಡು ದೊರೆಯುತ್ತವೆ.

 ಒಂದು ವೇಳೆ ನಿಮ್ಮ ಮನೆಯಲ್ಲಿ ಮಕ್ಕಳಿದ್ದಲ್ಲಿ, ಈ ಖಾದ್ಯವು ನಿಮ್ಮ ಸಹಾಯಕ್ಕೆ ಬರುತ್ತದೆ. ಏಕೆಂದರೆ ಮಕ್ಕಳು ಪಾಲಾಕ್ ಸೇವಿಸಲು ಇಷ್ಟಪಡುತ್ತಾರೆ. ಜೊತೆಗೆ ಇದು ಪೋಷಕಾಂಶಗಳ ಆಗರ. ಅದರಲ್ಲೂ ಚಿಕನ್ ಜೊತೆಗೆ ಸೇರಿದಾಗ ಇದರ ರುಚಿ ಇಮ್ಮಡಿಗೊಳ್ಳುತ್ತದೆ. ಇದನ್ನು ನೀವು ರೋಟಿ ಅಥವಾ ಅನ್ನದ ಜೊತೆಗೆ ಸಹ ಬಡಿಸಬಹುದು. ಗರಿಗರಿಯಾದ ಕೇರಳ ಚಿಕನ್ ಫ್ರೈ ರೆಸಿಪಿ

ಬೋಲ್ಡ್‌ಸ್ಕೈ ನಿಮಗಾಗಿ ಸರಳವಾಗಿ ಮತ್ತು ಶೀಘ್ರವಾಗಿ ರುಚಿ ರುಚಿಯಾದ ಪಾಲಾಕ್ ಚಿಕನ್ ಕರಿ ಮಾಡುವ ಬಗೆಯನ್ನು ತಿಳಿಸಿಕೊಡುತ್ತಿದೆ. ಈ ಖಾದ್ಯ ತಯಾರಿಸಲು ಬಳಸುವ ಹಲವಾರು ಪದಾರ್ಥಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ! ಈ ಪಾಲಾಕ್ ಚಿಕನ್ ಕರಿಯನ್ನು ತಯಾರಿಸುವುದು ತುಂಬಾ ಸರಳ. ಬನ್ನಿ ಭಾರತೀಯ ಶೈಲಿಯಲ್ಲಿ ಪಾಲಾಕ್ ಚಿಕನ್ ಕರಿಯನ್ನು ಮಾಡುವುದು ಹೇಗೆಂಬುದನ್ನು ಮುಂದೆ ತಿಳಿದುಕೊಳ್ಳೋಣ.

 *ಪ್ರಮಾಣ: 2-3 ಜನರಿಗೆ ಬಡಿಸಬಹುದು

 *ಅಡುಗೆ ಮಾಡಲು ತಗುಲುವ ಸಮಯ: 10 ನಿಮಿಷಗಳು 

*ತಯಾರಿಕೆಗೆ ತಗುಲುವ ಸಮಯ: 20-25 ನಿಮಿಷಗಳು 

ಅಗತ್ಯವಾದ ಪದಾರ್ಥಗಳು 


*ಕೋಳಿ ಮಾಂಸ- 1 ಕೆ.ಜಿ (ಕತ್ತರಿಸಿದ ಮತ್ತು ಬೇಯಿಸಿದ) 

*ಪಾಲಕ್ - 500 ಗ್ರಾಂ (ಕತ್ತರಿಸಿದ) 

*ಈರುಳ್ಳಿ - 1 (ಕತ್ತರಿಸಿದ) 

*ಟೊಮೇಟೊ - 2 (ಕತ್ತರಿಸಿದ)

 *ಹಸಿ ಮೆಣಸಿನಕಾಯಿಗಳು- 3-4 (ಕತ್ತರಿಸಿದ) 

*ಶುಂಠಿ ಬೆಳ್ಳುಳ್ಳಿ ಪೇಸ್ಟ್- 3-4 ಟೀ.ಚಮಚ 

*ಖಾರದಪುಡಿ - 1 ಟೀ.ಚಮಚ

 *ಗರಂ ಮಸಾಲ - 1 ಟೀ.ಚಮಚ

 *ಕೊತ್ತಂಬರಿ ಪುಡಿ - 1 ಟೀ.ಚಮಚ

 *ಜೀರಿಗೆ ಪುಡಿ - 1 ಟೇ.ಚಮಚ 

*ಲವಂಗ - 3-4 

*ಚಕ್ಕೆ- 3-4 

*ಎಣ್ಣೆ - ಸ್ವಲ್

ಪ *ಉಪ್ಪು - ರುಚಿಗೆ ತಕ್ಕಷ್ಟು ಸುಲಭವಾಗಿ      ತಯಾರಿಸಿ ಗರಿಗರಿಯಾದ ಮೀನಿನ ಫ್ರೈ


ತಯಾರಿಸುವ ವಿಧಾನ 


1. ಒಂದು ದೊಡ್ಡ ಬಾಣಲೆಯನ್ನು ತೆಗೆದುಕೊಳ್ಳಿ, ಅದಕ್ಕೆ ಎಣ್ಣೆಯನ್ನು ಹಾಕಿ,ಚೆನ್ನಾಗಿ ಕಾಯಿಸಿ. ನಂತರ ಅದಕ್ಕೆ ಈರುಳ್ಳಿ, ಹಸಿ ಮೆಣಸಿನ ಕಾಯಿ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಬೆರೆಸಿ. ಈರುಳ್ಳಿಗಳು ಹೊಂಬಣ್ಣಕ್ಕೆ ತಿರುಗುವವರೆಗು ಅದನ್ನು ಚೆನ್ನಾಗಿ ತಿರುವಿ ಕೊಡಿ. 

2. ಈಗ ಇದಕ್ಕೆ ಲವಂಗ ಮತ್ತು ಚಕ್ಕೆಯನ್ನು ಹಾಕಿ. ಸುವಾಸನೆ ಬರುವವರೆಗು ಇದನ್ನು ಚೆನ್ನಾಗಿ ಕಲೆಸಿಕೊಡಿ. 

3. ಈಗ ಟೊಮೇಟೊವನ್ನು ಹಾಕಿ, 5 ನಿಮಿಷ ಕಲೆಸಿಕೊಡಿ. ಟೊಮೇಟೊ ಪಾತ್ರೆಯಲ್ಲಿರುವ ಮಸಾಲೆ ಮತ್ತು ಈರುಳ್ಳಿಗಳ ಜೊತೆಗೆ ಚೆನ್ನಾಗಿ ಬೆರೆಯುವವರೆಗು ಇದನ್ನು ಮುಂದುವರೆಸಿ. 

4. ಈಗ, ಇದಕ್ಕೆ ಕೋಳಿ ಮಾಂಸದ ತುಂಡುಗಳನ್ನು, ಖಾರದ ಪುಡಿ, ಗರಂ ಮಸಾಲ, ಕೊತ್ತಂಬರಿ, ಜೀರಿಗೆ ಪುಡಿ, ಉಪ್ಪು ಮತ್ತು ಪಾಲಕ್ ಅನ್ನು ಹಾಕಿ. ಇದರ ಮೇಲೆ 2 ಕಪ್ ನೀರು ಹಾಕಿ.

 5. ನಂತರ, ಈ ಮಿಶ್ರಣವನ್ನು 5-7 ನಿಮಿಷಗಳ ಕಾಲ ಮಧ್ಯಮ ಗಾತ್ರದ ಉರಿಯಲ್ಲಿ ಚೆನ್ನಾಗಿ ಕಲೆಸಿಕೊಡಿ. ನಂತರ ಪಾತ್ರೆಯ ಮುಚ್ಚಳವನ್ನು ಮುಚ್ಚಿ 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಆಗ ಇದು ಸ್ವಲ್ಪ ಗ್ರೇವಿಯ ರೀತಿಯಲ್ಲಿ ಗಟ್ಟಿಯಾಗಿ ಕಾಣುತ್ತದೆ. ಹೀಗೆ ಪಾಲಕ್ ಚಿಕನ್ ರೆಸಿಪಿಯು ತುಂಬಾ ಸರಳವಾಗಿ ತಯಾರಿಸಬಹುದು ಮತ್ತು ಇದು ನಿಮ್ಮ ಆರೋಗ್ಯಕ್ಕೂ ಸಹ ಇದು ತುಂಬಾ ಒಳ್ಳೆಯದು.





Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್