ಸ್ವಾದಿಷ್ಟವಾದ ಬೆಂಡೆಕಾಯಿ ಮಸಾಲೆ ಪಲ್ಯ ಮಾಡುವ ವಿಧಾನ
ಬೆಂಗಳೂರು:
ಬೆಂಡೆಕಾಯಿ ಸ್ವಲ್ಪ ಅಂಟು ಗುಣ ಹೊಂದಿದೆ. ಹಾಗಾಗಿ ಕೆಲವರಿಗೆ ಇದನ್ನು ಅಡುಗೆ ಮಾಡುವುದು ಹೇಗೆಂಬ ಸಮಸ್ಯೆ. ಅಂಟು ಜಾಸ್ತಿಯಿರದ ಹಾಗೆ ಮಸಾಲೆ ಹಾಕಿ ಪಲ್ಯ ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು
ಬೆಂಡೆಕಾಯಿ
ತೆಂಗಿನ ತುರಿ
ಸಾಸಿವೆ
ಕೊತ್ತಂಬರಿ
ಹುಣಸೆ ಹುಳಿ
ಮೆಣಸು
ಎಣ್ಣೆ
ಉಪ್ಪು
ಕರಿಬೇವು
ಮಾಡುವ ವಿಧಾನ
ಬೆಂಡೆಕಾಯಿಯನ್ನು ಹೆಚ್ಚಿಕೊಳ್ಳಿ. ಕಾಯಿತುರಿ ಜತೆಗೆ ಹುಳಿ, ಕೊತ್ತಂಬರಿ, ಸಾಸಿವೆ, ಒಣಮೆಣಸು ಎಲ್ಲವನ್ನೂ ಹಾಕಿಕೊಂಡು ತರಿ ತರಿಯಾಗಿ ರುಬ್ಬಿಕೊಳ್ಳಿ. ಹೆಚ್ಚಿದ ಹೋಳನ್ನು ಬೇಯಿಸಿ. ಬೇಯುತ್ತಿರುವಾಗ ರುಬ್ಬಿದ ಮಸಾಲೆ ಸೇರಿಸಿ ಇನ್ನಷ್ಟು ಬೇಯಿಸಿಕೊಳ್ಳಿ. ಇದಕ್ಕೆ ಸ್ವಲ್ಪ ಉಪ್ಪು ಸೇರಿಸಿ ನೀರು ಆರಿದ ಮೇಲೆ ಒಗ್ಗರಣೆ ಹಾಕಿ ಕೆಳಗಿಳಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
Comments
Post a Comment