ವೆಜ್ ಪರೋಟ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ ನೋಡಿ….
ದಿನವೂ ಚಿತ್ರನ್ನ, ಮೊಸರನ್ನ, ಉಪ್ಪಿಟ್ಟು, ಪುಳಿಯೋಗರೆ, ಪೂರಿ ಇತ್ಯಾದಿ ಇತ್ಯಾದಿ ಬಿಟ್ಟು ಸ್ವಲ್ಪ ವೆರೈಟಿ ಫುಡ್ ಯಾಕೆ ಟ್ರೈ ಮಾಡಬಾರದು…. ಅದಕ್ಕಾಗಿಯೇ ಇಲ್ಲಿದೆ ನೋಡಿ ವೆಜ್ ಪರೋಟ ರೆಸಿಪಿ..
ಮೈದಾ - 3 ಕಪ್
ಗೋಧಿ ಹಿಟ್ಟು – 1 ಕಪ್
ಕ್ಯಾರೆಟ್ – 2
ಬೇಯಿಸಿದ ಆಲೂಗಡ್ಡೆ – 2
ಕ್ಯಾಪ್ಸಿಕಂ – 1
ಮೆಂತ್ಯಾಸೊಪ್ಪು – 1 ಕಟ್ಟು
ಈರುಳ್ಳಿ – ¼ ಕಪ್
ಮೊಸರು – ಸ್ವಲ್ಪ
ಹಸಿಮೆಣಸಿನಕಾಯಿ – 2
ಅಚ್ಚಖಾರದ ಪುಡಿ – ½ ಚಮಚ
ಗರಂ ಮಸಾಲಾ – ½ ಚಮಚ
ಆಮ್ ಚೂರ್ ಪೌಡರ್ - ½ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಚೀಸ್ – ಸ್ವಲ್ಪ
ಮೈದಾ, ಗೋಧಿಹಿಟ್ಟು, ಸ್ವಲ್ಪ ಎಣ್ಣೆ, ಸ್ವಲ್ಪ ನೀರು, ಸ್ವಲ್ಪ ಮೊಸರು ಹಾಕಿ ಚಪಾತಿ ಹದಕ್ಕೆ ಕಲಸಿ 10 ನಿಮಿಷ ನೆನೆಯಲು ಬಿಡಬೇಕು. ಪ್ಯಾನ್ ಗೆ ಎಣ್ಣೆ, ಹಸಿಮೆಣಸಿನಕಾಯಿ, ಈರುಳ್ಳಿ, ಮೆಂತ್ಯಾಸೊಪ್ಪು ಹಾಕಿ ಹಸಿ ವಾಸನೆ ಹೋಗುವವರೆಗೆ ಕಲಕಬೇಕು. ನಂತರ ಅದಕ್ಕೆ ಹೆಚ್ಚಿಟ್ಟ ಕ್ಯಾರೆಟ್, ಕ್ಯಾಪ್ಸಿಕಂ, ಹಾಕಿ ಬೇಯುವವರೆಗೆ ಬಿಡಬೇಕು. ಇದಕ್ಕೆ ಸ್ಮಾಶ್ ಮಾಡಿದ ಆಲೂಗಡ್ಡೆ, ಅಚ್ಚಖಾರದ ಪುಡಿ, ಗರಂ ಮಸಾಲಾ, ಆಮ್ ಚೂರ್ ಪೌಡರ್, ತುರಿದ ಚೀಸ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚನ್ನಾಗಿ ಮಿಕ್ಸ್ ಮಾಡಬೇಕು. ಇದನ್ನು ನಾದಿಟ್ಟ ಮೈದಾವನ್ನು ಚಿಕ್ಕ ಉಂಡೆ ಮಾಡಿ ಹೋಳಿಗೆಗೆ ಹೂರಣ ಇಟ್ಟಂತೆ ಇಟ್ಟು ಲಟ್ಟಿಸಬೇಕು. ತವಾಗೆ ಎಣ್ಣೆಹಾಕಿ ಪರೋಟವನ್ನು ಎರಡೂ ಕಡೆ ಸರಿಯಾಗಿ ಬೇಯಿಸಬೇಕು. ಪರೋಟ ಸಿದ್ಧವಾಗುತ್ತಿದ್ದಂತೆ ಮೊಸರು ಅಥವಾ ಉಪ್ಪಿನಕಾಯಿಯೊಂದಿಗೆ ಬಿಸಿ ಬಿಸಿ ಸವಿದರೆ ಚಂದ.
ಬೇಕಾಗುವ ಪದಾರ್ಥಗಳು:
ಮೈದಾ - 3 ಕಪ್
ಗೋಧಿ ಹಿಟ್ಟು – 1 ಕಪ್
ಕ್ಯಾರೆಟ್ – 2
ಬೇಯಿಸಿದ ಆಲೂಗಡ್ಡೆ – 2
ಕ್ಯಾಪ್ಸಿಕಂ – 1
ಮೆಂತ್ಯಾಸೊಪ್ಪು – 1 ಕಟ್ಟು
ಈರುಳ್ಳಿ – ¼ ಕಪ್
ಮೊಸರು – ಸ್ವಲ್ಪ
ಹಸಿಮೆಣಸಿನಕಾಯಿ – 2
ಅಚ್ಚಖಾರದ ಪುಡಿ – ½ ಚಮಚ
ಗರಂ ಮಸಾಲಾ – ½ ಚಮಚ
ಆಮ್ ಚೂರ್ ಪೌಡರ್ - ½ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಚೀಸ್ – ಸ್ವಲ್ಪ
ಮಾಡುವ ವಿಧಾನ:
ಮೈದಾ, ಗೋಧಿಹಿಟ್ಟು, ಸ್ವಲ್ಪ ಎಣ್ಣೆ, ಸ್ವಲ್ಪ ನೀರು, ಸ್ವಲ್ಪ ಮೊಸರು ಹಾಕಿ ಚಪಾತಿ ಹದಕ್ಕೆ ಕಲಸಿ 10 ನಿಮಿಷ ನೆನೆಯಲು ಬಿಡಬೇಕು. ಪ್ಯಾನ್ ಗೆ ಎಣ್ಣೆ, ಹಸಿಮೆಣಸಿನಕಾಯಿ, ಈರುಳ್ಳಿ, ಮೆಂತ್ಯಾಸೊಪ್ಪು ಹಾಕಿ ಹಸಿ ವಾಸನೆ ಹೋಗುವವರೆಗೆ ಕಲಕಬೇಕು. ನಂತರ ಅದಕ್ಕೆ ಹೆಚ್ಚಿಟ್ಟ ಕ್ಯಾರೆಟ್, ಕ್ಯಾಪ್ಸಿಕಂ, ಹಾಕಿ ಬೇಯುವವರೆಗೆ ಬಿಡಬೇಕು. ಇದಕ್ಕೆ ಸ್ಮಾಶ್ ಮಾಡಿದ ಆಲೂಗಡ್ಡೆ, ಅಚ್ಚಖಾರದ ಪುಡಿ, ಗರಂ ಮಸಾಲಾ, ಆಮ್ ಚೂರ್ ಪೌಡರ್, ತುರಿದ ಚೀಸ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚನ್ನಾಗಿ ಮಿಕ್ಸ್ ಮಾಡಬೇಕು. ಇದನ್ನು ನಾದಿಟ್ಟ ಮೈದಾವನ್ನು ಚಿಕ್ಕ ಉಂಡೆ ಮಾಡಿ ಹೋಳಿಗೆಗೆ ಹೂರಣ ಇಟ್ಟಂತೆ ಇಟ್ಟು ಲಟ್ಟಿಸಬೇಕು. ತವಾಗೆ ಎಣ್ಣೆಹಾಕಿ ಪರೋಟವನ್ನು ಎರಡೂ ಕಡೆ ಸರಿಯಾಗಿ ಬೇಯಿಸಬೇಕು. ಪರೋಟ ಸಿದ್ಧವಾಗುತ್ತಿದ್ದಂತೆ ಮೊಸರು ಅಥವಾ ಉಪ್ಪಿನಕಾಯಿಯೊಂದಿಗೆ ಬಿಸಿ ಬಿಸಿ ಸವಿದರೆ ಚಂದ.
Comments
Post a Comment