ಮಿಶ್ರ ತರಕಾರಿಗಳ ಬಾತ್/ ವೆಜಿಟೇಬಲ್ ಬಾತ್
ಅಕ್ಕಿಯೊಂದಿಗೆ ವಿವಿಧ ತರಕಾರಿಗಳನ್ನು ಸೇರಿಸಿ ತಯಾರಿಸುವ ಬಾತ್‍ಗಳು ದೇಹಕ್ಕೆ ಹೆಚ್ಚು ಪೋಷಕಾಂಶವನ್ನು ಒದಗಿಸುತ್ತವೆ. ಬೇಯಿಸಿದ ಅನ್ನಕ್ಕೆ ಮಸಾಲೆ ಹಾಗೂ ತರಕಾರಿಗಳ ಮಿಶ್ರಣದಿಂದ ಸೇವಿಸಿದರೆ ರುಚಿಯು ಹೆಚ್ಚುವುದು. ಕರ್ನಾಟಕ ಶೈಲಿಯ ತರಕಾರಿ ಬಾತ್‍ಗಳಲ್ಲಿ ಈರುಳ್ಳಿ ಸೇರಿಸುವುದರಿಂದ ಹಬ್ಬ ಹರಿದಿನಗಳಲ್ಲಿ, ಪೂಜೆ, ವ್ರತ ಮತ್ತು ಉತ್ಸವಗಳ ಸಮಯದಲ್ಲಿ ಪ್ರಸಾದ ರೂಪದಲ್ಲಿ ತಯಾರಿಸುವುದಿಲ್ಲ. ಬದಲಿಗೆ ನಿತ್ಯದ ಅಡುಗೆ ಪದಾರ್ಥಗಳ ಪಟ್ಟಿಯಲ್ಲಿ ಸೆರಿಕೊಂಡಿರುತ್ತದೆ.
ನಿತ್ಯದ ಒಂದು ಹೊತ್ತಿನ ತಿಂಡಿ ಮತ್ತು ಎರಡು ಹೊತ್ತಿನ ಊಟಕ್ಕೆ ತರಕಾರಿ ಬಾತ್‍ಅನ್ನು ಸವಿಯಬಹುದು. ಇದು ಹೆಚ್ಚು ಆರಾಮದಾಯಕ ಅನುಭವವನ್ನು ನೀಡುತ್ತದೆ. ನಿತ್ಯದ ಪಾಕವಿಧಾನದಿಂದ ಬೇಸತ್ತು, ಹೊಸ ಪಾಕವಿಧಾನ ಕಲಿಯಬೇಕೆನ್ನುವ ಹವಣಿಕೆಯಲ್ಲಿದ್ದರೆ ಇಲ್ಲಿದೆ ನೋಡಿ ಮಿಶ್ರ ತರಕಾರಿಗಳ ಬಾತ್. ನಿಮ್ಮ ಅನುಕೂಲಕ್ಕೆ ತಕ್ಕಂತೆ ವೀಡಿಯೋ ಹಾಗೂ ಚಿತ್ರ ವಿವರಣೆಯ ಮೂಲಕ ಹಂತ ಹಂತವಾಗಿ ವಿವರಿಸಲಾಗಿದೆ.
Ingredients
ಅಕ್ಕಿ- 3/4 ಕಪ್
ನೀರು - 3 ಮತ್ತು 1/4 ಕಪ್
ಎಣ್ಣೆ - 3 ಚಮಚ
ಇಂಗು - ಒಂದು ಚಿಟಕಿ
ಸಾಸಿವೆ - 1/2 ಚಮಚ
ಉದ್ದಿನ ಬೇಳೆ - 1 ಚಮಚ
ಕಡ್ಲೆ ಬೇಳೆ - 1/2 ಚಮಚ
ಅರಿಶಿನ - 1/2 ಚಮಚ
ಮಿಶ್ರ ತರಕಾರಿ ( ಹೆಚ್ಚಿದ ಕ್ಯಾರೆಟ್, ಕ್ಯಾಪ್ಸಿಕಮ್, ಎಲೆಕೋಸು, ಆಲುಗಡ್ಡೆ ಇತ್ಯಾದಿ)- ಸಾಮಾನ್ಯ ಗಾತ್ರದ ಒಂದು ಬೌಲ್
ಉಪ್ಪು - ರುಚಿಗೆ
ಬಾತ್ ಪೌಡರ್ - 2 ಚಮಚ
ಹುಣಸೆ ಹಣ್ಣಿನ ರಸ/ಪೇಸ್ಟ್ - 1 ಚಮಚ
ಬೆಲ್ಲ - 1/2 ಚಮಚ
ಹೆಚ್ಚಿದ ಕೊತ್ತಂಬರಿ ಸೊಪ್ಪು - 1/4 ಕಪ್
1. ಕುಕ್ಕರ್‌ನಲ್ಲಿ ಅಕ್ಕಿಯನ್ನು ಹಾಕಿ, 3 ಕಪ್ ನೀರನ್ನು ಸೇರಿಸಿ ಬೇಯಿಸಲು ಇಡಿ.
2. ಮೂರು ಸೀಟಿಯನ್ನು ಕೂಗಿಸಿ, ಉರಿಯಿಂದ ಕೆಳಗಿಳಿಸಿ.
3. ಒಂದು ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಲು ಇಡಿ.
4. ಅದಕ್ಕೆ ಸಾಸಿವೆ ಹಾಗೂ ಇಂಗನ್ನು ಸೇರಿಸಿ.
5. ಸಾಸಿವೆ ಸಿಡಿಯಲು ಆರಂಭಿಸಿದ ಮೇಲೆ ಉದ್ದಿನ ಬೇಳೆ, ಕಡ್ಲೆ ಬೇಳೆ ಸೇರಿಸಿ.
6. ಇವೆಲ್ಲವೂ ತಿಳಿ ಹೊಂಬಣ್ಣಕ್ಕೆ ತಿರುಗುವ ತನಕ ಕೈಯಾಡಿಸಿ.
7. ನಂತರ ಹೆಚ್ಚಿಕೊಂಡ ತರಕಾರಿಗಳನ್ನು ಸೇರಿಸಿ.
8. ಒಂದು ಕಾಲು ಕಪ್ ನೀರನ್ನು ಸೇರಿಸಿ.
9. ಉಪ್ಪನ್ನು ಸೇರಿಸಿ, ಚೆನ್ನಾಗಿ ಕಲುಕಿ.
10. ಇವು ಚೆನ್ನಾಗಿ ಬೇಯಲು 5 ನಿಮಿಷ ಬಿಡಿ.
11. ಈಗ ಬಾತ್ ಪೌಡರ್, ಅರಿಶಿನ, ಹುಣಸೆ ರಸ ಮತ್ತು ಬೆಲ್ಲವನ್ನು ಸೇರಿಸಿ.
12. ಚೆನ್ನಾಗಿ ಬೆರೆಸಿ.
13. ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಚೆನ್ನಾಗಿ ಕಲುಕಿ.
14. ಬೇಯಿಸಿಕೊಂಡ ಅನ್ನವನ್ನು ತರಕಾರಿಯ ಮಿಶ್ರಣಕ್ಕೆ ಸೇರಿಸಿ, ಸವಿಯಲು ನೀಡಿ.

How to Prepare

Comments
Post a Comment