ಪನ್ನೀರ್ ಬಟಾಣಿ ಮಸಾಲಾ ಮಾಡಿ ಸವಿಯಿರಿ...!!
ಪನ್ನೀರ್ ಅನ್ನು ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದಲ್ಲಿ ಅಧಿಕವಾಗಿ ಬಳಸುತ್ತಾರೆ. ಹೆಚ್ಚಿನ ಜನರು ಪನ್ನೀರ್ ಮಸಾಲಾವನ್ನು ಇಷ್ಟಪಡುತ್ತಾರೆ ಆದರೆ ಮಾಡುವ ವಿಧಾನ ತಿಳಿದಿರುವುದಿಲ್ಲ. ಪನ್ನೀರ್ ಬಟಾಣಿ ಮಸಾಲಾವನ್ನು ಹೋಟೆಲಿನಲ್ಲಿ ಮಾಡುವಂತೆ ನೀವು ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ನೋಡಿ.
ಪನ್ನೀರ್ ಕ್ಯೂಬ್ಸ್ - 1 ಕಪ್
ಹಸಿರು ಬಟಾಣಿ - 1/2 ಕಪ್
ಟೊಮೆಟೋ - 2-3
ಈರುಳ್ಳಿ - 2
ಶುಂಠಿ - 1 ಇಂಚು
ಬೆಳ್ಳುಳ್ಳಿ - 10-12 ಎಸಳು
ಒಣ ಮೆಣಸು - 4-5
ಗೋಡಂಬಿ - 7-8
ಜೀರಿಗೆ - 1 ಚಮಚ
ಗರಂ ಮಸಾಲಾ - 1/2 ಚಮಚ
ದನಿಯಾ ಪುಡಿ - 2 ಚಮಚ
ಅಚ್ಚಖಾರದ ಪುಡಿ - 1 ಚಮಚ
ಅರಿಶಿಣ ಪುಡಿ - 1/2 ಚಮಚ
ಉಪ್ಪು - ರುಚಿಗೆ
ಎಣ್ಣೆ - 1 ಕಪ್
ಒಂದು ಪ್ಯಾನ್‌ನಲ್ಲಿ ಎಣ್ಣೆಯನ್ನು ಹಾಕಿ ಸ್ಟೌ ಮೇಲಿಟ್ಟು ಅದು ಬಿಸಿಯಾದ ನಂತರ ಪನ್ನೀರ್ ಅನ್ನು ಹಾಕಿ ಹೊಂಬಣ್ಣ ಬರುವವರೆಗೆ ಕರಿದುಕೊಳ್ಳಿ. ಉಳಿದ ಎಣ್ಣೆಯನ್ನು ಬೌಲ್‌ಗೆ ಹಾಕಿಡಿ. ಅದೇ ಪ್ಯಾನ್‌ನಲ್ಲಿ 4-5 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿಯಾದಾಗ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಗೋಡಂಬಿ ಮತ್ತು ಟೊಮೆಟೋವನ್ನು ಹಾಕಿ 5-10 ನಿಮಿಷ ಚೆನ್ನಾಗಿ ಹುರಿಯಿರಿ. ಇದು ತಣ್ಣಗಾದ ನಂತರ ಬಿಸಿ ನೀರಿನಲ್ಲಿ ನೆನೆಸಿಟ್ಟ ಒಣ ಮೆಣಸನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ನಂತರ ಪ್ಯಾನ್‌ಗೆ 3-4 ಚಮಚ ಎಣ್ಣೆಯನ್ನು ಹಾಕಿ ಅದು ಕಾದ ನಂತರ ಜೀರಿಗೆ, ದನಿಯಾ ಪುಡಿ, ಅಚ್ಚಖಾರದ ಪುಡಿ, ಅರಿಶಿಣ ಪುಡಿ ಮತ್ತು ಗರಂ ಮಸಾಲಾವನ್ನು ಹಾಕಿ ಹುರಿದು ಈ ಮೊದಲೇ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ. ನಂತರ ಅದಕ್ಕೆ 1/2 ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಹಸಿರು ಬಟಾಣಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 8-10 ನಿಮಿಷ ಬೇಯಿಸಿ. ಬಟಾಣಿ ಬೆಂದ ನಂತರ ಅದಕ್ಕೆ ಮೊದಲೇ ಕರಿದಿಟ್ಟಿರುವ ಪನ್ನೀರ್ ಅನ್ನು ಸೇರಿಸಿ 2 ನಿಮಿಷ ಬೇಯಿಸಿದರೆ ಪನ್ನೀರ್ ಮಸಾಲಾ ರೆಡಿಯಾಗುತ್ತದೆ. ಇದು ಚಪಾತಿ ಮತ್ತು ರೊಟ್ಟಿಯ ಜೊತೆ ತಿನ್ನಲು ರುಚಿಯಾಗಿರುತ್ತದೆ ಮತ್ತು ಇದನ್ನು ಹಾಗೆಯೂ ಕೂಡ ತಿನ್ನಬಹುದು. ನೀವೂ ಒಮ್ಮೆ ಇದನ್ನು ಮಾಡಿ ಸವಿಯಿರಿ..
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
ಬೇಕಾಗುವ ಸಾಮಗ್ರಿಗಳು:
ಪನ್ನೀರ್ ಕ್ಯೂಬ್ಸ್ - 1 ಕಪ್
ಹಸಿರು ಬಟಾಣಿ - 1/2 ಕಪ್
ಟೊಮೆಟೋ - 2-3
ಈರುಳ್ಳಿ - 2
ಶುಂಠಿ - 1 ಇಂಚು
ಬೆಳ್ಳುಳ್ಳಿ - 10-12 ಎಸಳು
ಒಣ ಮೆಣಸು - 4-5
ಗೋಡಂಬಿ - 7-8
ಜೀರಿಗೆ - 1 ಚಮಚ
ಗರಂ ಮಸಾಲಾ - 1/2 ಚಮಚ
ದನಿಯಾ ಪುಡಿ - 2 ಚಮಚ
ಅಚ್ಚಖಾರದ ಪುಡಿ - 1 ಚಮಚ
ಅರಿಶಿಣ ಪುಡಿ - 1/2 ಚಮಚ
ಉಪ್ಪು - ರುಚಿಗೆ
ಎಣ್ಣೆ - 1 ಕಪ್
ಮಾಡುವ ವಿಧಾನ:
ಒಂದು ಪ್ಯಾನ್‌ನಲ್ಲಿ ಎಣ್ಣೆಯನ್ನು ಹಾಕಿ ಸ್ಟೌ ಮೇಲಿಟ್ಟು ಅದು ಬಿಸಿಯಾದ ನಂತರ ಪನ್ನೀರ್ ಅನ್ನು ಹಾಕಿ ಹೊಂಬಣ್ಣ ಬರುವವರೆಗೆ ಕರಿದುಕೊಳ್ಳಿ. ಉಳಿದ ಎಣ್ಣೆಯನ್ನು ಬೌಲ್‌ಗೆ ಹಾಕಿಡಿ. ಅದೇ ಪ್ಯಾನ್‌ನಲ್ಲಿ 4-5 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿಯಾದಾಗ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಗೋಡಂಬಿ ಮತ್ತು ಟೊಮೆಟೋವನ್ನು ಹಾಕಿ 5-10 ನಿಮಿಷ ಚೆನ್ನಾಗಿ ಹುರಿಯಿರಿ. ಇದು ತಣ್ಣಗಾದ ನಂತರ ಬಿಸಿ ನೀರಿನಲ್ಲಿ ನೆನೆಸಿಟ್ಟ ಒಣ ಮೆಣಸನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ನಂತರ ಪ್ಯಾನ್‌ಗೆ 3-4 ಚಮಚ ಎಣ್ಣೆಯನ್ನು ಹಾಕಿ ಅದು ಕಾದ ನಂತರ ಜೀರಿಗೆ, ದನಿಯಾ ಪುಡಿ, ಅಚ್ಚಖಾರದ ಪುಡಿ, ಅರಿಶಿಣ ಪುಡಿ ಮತ್ತು ಗರಂ ಮಸಾಲಾವನ್ನು ಹಾಕಿ ಹುರಿದು ಈ ಮೊದಲೇ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ. ನಂತರ ಅದಕ್ಕೆ 1/2 ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಹಸಿರು ಬಟಾಣಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 8-10 ನಿಮಿಷ ಬೇಯಿಸಿ. ಬಟಾಣಿ ಬೆಂದ ನಂತರ ಅದಕ್ಕೆ ಮೊದಲೇ ಕರಿದಿಟ್ಟಿರುವ ಪನ್ನೀರ್ ಅನ್ನು ಸೇರಿಸಿ 2 ನಿಮಿಷ ಬೇಯಿಸಿದರೆ ಪನ್ನೀರ್ ಮಸಾಲಾ ರೆಡಿಯಾಗುತ್ತದೆ. ಇದು ಚಪಾತಿ ಮತ್ತು ರೊಟ್ಟಿಯ ಜೊತೆ ತಿನ್ನಲು ರುಚಿಯಾಗಿರುತ್ತದೆ ಮತ್ತು ಇದನ್ನು ಹಾಗೆಯೂ ಕೂಡ ತಿನ್ನಬಹುದು. ನೀವೂ ಒಮ್ಮೆ ಇದನ್ನು ಮಾಡಿ ಸವಿಯಿರಿ..
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
Comments
Post a Comment