ಬೇಸಿಗೆಗೆ ಹೊಟ್ಟೆ ತಂಪು ಮಾಡಿಕೊಳ್ಳಲು ತಂಬುಳಿ ರೆಸಿಪಿ

ಬೆಂಗಳೂರು: ಬೇಸಿಗೆಯಲ್ಲಿ ಹೊಟ್ಟೆಗೆ ತಂಪು ನೀಡುವ ಆಹಾರ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಟೊಮೆಟೊ ತಂಬುಳಿ ಮಾಡುವ ವಿಧಾನ ಹೇಳುತ್ತೇವೆ ನೋಡಿಕೊಳ್ಳಿ.

ಬೇಕಾಗಿರುವ ಸಾಮಗ್ರಿಗಳು



ಹಣ್ಣಾಗಿರುವ ಟೊಮೆಟೊ


ಹಸಿಮೆಣಸು


ಮೊಸರು


ಕೊತ್ತಂಬರಿ ಸೊಪ್ಪು


ಎಣ್ಣೆ


ಜೀರಿಗೆ


ಸಾಸಿವೆ


ಉಪ್ಪು

 

ಮಾಡುವ ವಿಧಾನ


ಟೊಮೆಟೊ ಹಣ್ಣುಗಳನ್ನು ಇಡಿಯಾಗಿ ಬೇಯಿಸಿಕೊಳ್ಳಿ. ಚೆನ್ನಾಗಿ ಬೆಂದ ನಂತರ ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ಸ್ವಲ್ಪ ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ನಂತರ ಇದಕ್ಕೆ ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ, ಜೀರಿಗೆ, ಸಾಸಿವೆ ಒಗ್ಗರಣೆ ಮಾಡಿ ಟೊಮೆಟೊ ಮಿಶ್ರಣಕ್ಕೆ ಸೇರಿಸಿದರೆ ಟೊಮೆಟೊ ತಂಬುಳಿ ಸವಿಯಲು ಸಿದ್ಧ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 


Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್