ಪನ್ನೀರ್ ಟಿಕ್ಕಾ ರೆಸಿಪಿ
ಆಹಾರ ಪದಾರ್ಥದ ರುಚಿಯನ್ನು ಹೆಚ್ಚಿಸುವುದು ಹಾಗೂ ಸವಿಯುವಾಗ ಒಂದಿಷ್ಟು ಖುಷಿಯನ್ನು ನೀಡುವ ಆಹಾರ ಪದಾರ್ಥ ಎಂದರೆ ಪನ್ನೀರು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇದನ್ನು ಸವಿಯಲು ಬಯಸುತ್ತಾರೆ. ಸಮೃದ್ಧವಾದ ಪ್ರೋಟೀನ್ ಹೊಂದಿರುವ ಪನ್ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ಮೆಟಾಬಾಲಿಕ್ ದರವನ್ನು ಹೆಚ್ಚಿಸುತ್ತದೆ. ಇದು ನಮ್ಮ ದೇಹಕ್ಕೆ ಅನಗತ್ಯವಾದ ತೂಕವನ್ನು ಇಳಿಸಲು ಸಹಾಯ ಮಾಡುವುದು ಎಂದು ತಜ್ಞರು ಹೇಳುತ್ತಾರೆ.
ಇದರ ಸೇವನೆಯಿಂದ ದೇಹದಲ್ಲಿ ಯಾವುದೇ ಅಡ್ಡ ಪರಿಣಾಮಗಳು ಉಂಟಾಗದು. ಹಾಲಿನ ಉತ್ಪನ್ನಗಳ ವಿಭಾಗದಲ್ಲಿಯೇ ಬರುವ ಈ ಪನ್ನೀರನ್ನು ವಿವಿಧ ಬಗೆಯ ಅಡುಗೆ ಪದಾರ್ಥಗಳಲ್ಲಿ ಸೇರಿಸುತ್ತಾರೆ. ಇದು ಅಡುಗೆಯ ಗುಣಮಟ್ಟ ಹಾಗೂ ರುಚಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುವುದು. ಪನ್ನೀರನ್ನು ಆಳವಾಗಿ ಹುರಿಯದೆ ಪನ್ನೀರ್ ಟಿಕ್ಕಾ ಪಾಕವಿಧಾನವನ್ನು ನಿಮಗೆ ತಿಳಿಸಿಕೊಡಲು ಬೋಲ್ಡ್ ಸ್ಕೈ ಮುಂದಾಗಿದೆ. ಈ ಪಾಕವಿಧಾನದಿಂದ ಕಡಿಮೆ ಪ್ರಮಾಣದ ಕ್ಯಾಲೋರಿಯನ್ನು ಹೊಂದಬಹುದು ಎಂದು ಹೇಳಲಾಗುತ್ತದೆ.
ಇಂದು ಅನೇಕ ಜನರು ತೂಕ ಇಳಿಸುವ ಪರಿಯಲ್ಲಿ ಇರುತ್ತಾರೆ. ಅಂತಹವರು ಈ ಪಾಕವಿಧಾನದಿಂದ ಸಂತುಷ್ಟರಾಗಬಹುದು. ಒಮ್ಮೆ 'ಪನ್ನೀರ್ ಟಿಕ್ಕಾ ರೋಲ್, ಟ್ರೈ ಮಾಡಿ ಸೂಪರ್ ಇರುತ್ತೆ! ಮನೆಯಲ್ಲಿಯೇ ಬಹಳ ಸರಳ ಹಾಗೂ ಸುಲಭವಾಗಿ ತಯಾರಿಸಬಹುದಾದ ಈ ಪಾಕವಿಧಾನವನ್ನು ನೀವು ಮಾಡಬೇಕೆನ್ನುವ ಹವಣಿಕೆಯಲ್ಲಿದ್ದರೆ ಈ ಮುಂದೆ ನೀಡಿರುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರ ವಿವರಣೆಯನ್ನು ಪರಿಶೀಲಿಸಿ.
ಪನ್ನೀರು- 1 ಪೊಟ್ಟಣ (ಚೌಕಾಕಾರದಲ್ಲಿ ಕತ್ತರಿಸಿಕೊಳ್ಳಬೇಕು.)
ಕ್ಯಾಪ್ಸಿಕಮ್ -2 (ಒಂದು ಹಸಿರು ಮತ್ತು ಒಂದು ಕೆಂಪು ಬಣ್ಣದ ಕ್ಯಾಪ್ಸಿಕಮ್ ಅನ್ನು ಚೌಕಾಕಾರದಲ್ಲಿ ಕತ್ತರಿಸಿಕೊಳ್ಳಬೇಕು)
ಮೊಸರು -1 ಕಪ್
ಶುಂಠಿ ಪೇಸ್ಟ್ -1/2 ಟೀಚಮಚ
ಬೆಳ್ಳುಳ್ಳಿ ಪೇಸ್ಟ್ -1/2 ಟೀಚಮಚ
ಅರಿಶಿನ ಪುಡಿ - 1/2 ಟೀಚಮಚ
ಮೆಣಸಿನ ಪುಡಿ - 1/2 ಟೀಚಮಚ
ಕಡ್ಲೇ ಹಿಟ್ಟು - 2 ಚಮಚ
ಜೀರಿಗೆ ಪುಡಿ - 1/2 ಟೀಚಮಚ
ಹುಳಿಪುಡಿ - 1/2 ಟೀಚಮಚ
ಗರಮ್ ಮಸಾಲ ಪುಡಿ - 1/2 ಟೀಚಮಚ
ನಿಂಬೆ ರಸ - 1/2 ನಿಂಬು
ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು - 1/2 ಕಪ್ ಚಾಟ್
ಮಸಾಲ ಪುಡಿ -1 ಟೀಚಮಚ
ಉಪ್ಪು - ರುಚಿಗೆ ತಕ್ಕಷ್ಟು ಚೌಕಾಕೃತಿಯಲ್ಲಿ ಕತ್ತರಿಸಿಕೊಂಡ ಈರುಳ್ಳಿ - 2
1. ಒಂದು ಬೌಲ್ ತೆಗೆದುಕೊಂಡು, ಅದರಲ್ಲಿ ಮೊಸರು, ಅರಿಶಿನ ಪುಡಿ ಮತ್ತು ಮೆಣಸಿನ ಪುಡಿಯನ್ನು ಸೇರಿಸಿ, ಮಿಶ್ರಗೊಳಿಸಿ.
2. ಶುಠಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಚಾಟ್ ಮಸಾಲ ಮತ್ತು ಗರಂ ಮಸಾಲ ಪುಡಿಯನ್ನು ಸೇರಿಸಿ.
3. ನಂತರ ಹುಳಿ ಪುಡಿ ಮತ್ತು ಜೀರಿಗೆ ಪುಡಿಯನ್ನು ಸೇರಿಸಿ, ಮಿಶ್ರಗೊಳಿಸಿ.
4. ಹೆಚ್ಚಿಕ್ಕೊಂಡ ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಮಿಶ್ರಗೊಳಿಸಿ.
5. 2 ಚಮಚ ಕಡ್ಲೇ ಹಿಟ್ಟನ್ನು ಸೇರಿಸಿ, ಮಿಶ್ರಗೊಳಿಸಿ.
6. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಅರ್ಥ ನಿಂಬೆ ಹಣ್ಣಿನ ರಸವನ್ನು ಸೇರಿಸಿ.
7. ಈಗ ಎಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿ.
8. ಹೆಚ್ಚಿಕೊಂಡ ಈರುಳ್ಳಿ ಮತ್ತು ಕ್ಯಾಪ್ಸಿಕಮ್‍ಅನ್ನು ಸೇರಿಸಿ.
9. ಮಿಶ್ರಣಕ್ಕೆ ಪನ್ನೀರನ್ನು ಸೇರಿಸಿ.
10. ಪನ್ನೀರು, ಈರುಳ್ಳಿ, ಕ್ಯಾಪ್ಸಿಕಮ್ ಎಲ್ಲವೂ ಚೆನ್ನಾಗಿ ಮಿಶ್ರಣದ ಲೇಪನವನ್ನು ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಿ.
11. 30 ನಿಮಿಷಗಳ ಕಾಲ ಹಾಗೆ ಮಿಶ್ರಣದಲ್ಲಿ ನೆನೆಯಲು ಬಿಡಿ.
12. ಬಾಡುಕೋಲುಗಳಲ್ಲಿ ಮಿಶ್ರಣದಲ್ಲಿದ್ದ ಪನ್ನೀರು ಮತ್ತು ತರಕಾರಿಗಳ ಮಿಶ್ರಣವನ್ನು ಸುರಿಯಿರಿ/ಚುಚ್ಚಿರಿ. ಲೇಪನವು ಸೂಕ್ತವಾಗಿ ಮಾಡಿ.
13. ಒಂದು ಬಾಣಲಿಯನ್ನು ಉರಿಯ ಮೇಲೆ ಇಡಿ.
14. ಒಂದು ಚಮಚ ಎಣ್ಣೆಯನ್ನು ಸೇರಿಸಿ, ಬಾಣಲೆಯ ಎಲ್ಲಾ ಭಾಗದಲ್ಲೂ ಹರಡುವಂತೆ ಮಾಡಿ.
15. ಇದರ ಮೇಲೆ ಬಾಡುಕೋಲನ್ನು ಇಟ್ಟು ಬೇಯಿಸಿ.
16. ತರಕಾರಿ ಹಾಗೂ ಪನ್ನೀರು ಸೂಕ್ತ ರೀತಿಯಲ್ಲಿ ಬೇಯುವಂತೆ ಆಗಾಗ ತಿರುಗಿಸಿ ಇಡಿ.
17. ಎಲ್ಲಾ ಭಾಗದಲ್ಲೂ ಸರಿಯಾಗಿ ಬೆಂದು, ಹೊಂಬಣ್ಣಕ್ಕೆ ಬರುವಂತೆ ನೋಡಿಕೊಳ್ಳಿ.
18. ಪನ್ನೀರು, ಈರುಳ್ಳಿ ಹಾಗೂ ಕ್ಯಾಪ್ಸಿಕಮ್‍ಅನ್ನು ಬಾಡುಕೋಲಿನಿಂದ ತೆಗೆಯಿರಿ.
19. ಬಿಸಿಯಾಗಿ ಇರುವಾಗಲೇ ಸವಿಯಲು ನೀಡಿ.

Ingredients

How to Prepare

Comments
Post a Comment