ಜನಪ್ರಿಯ ಭಕ್ಷ್ಯಗಳಲ್ಲಿ ಬೀಸಿಬೇಳೆ ಬಾತ್‌ಗೂ ಆದ್ಯತೆ

ಕರ್ನಾಟಕದ ಜನಪ್ರಿಯ ಭಕ್ಷ್ಯಗಳಲ್ಲಿ ಈ ಬೀಸಿಬೇಳೆ ಬಾತ್ ಕೂಡಾ ಒಂದು. ಇದನ್ನು ಹೆಚ್ಚಾಗಿ ಬೆಳಗಿನ ಉಪಹಾರವಾಗಿ ಸಾಮಾನ್ಯವಾಗಿ ಎಲ್ಲೆಡೆ ಬಳಸುತ್ತಾರೆ ಅಲ್ಲದೇ ಇದು ನೋಡಲು ಸಾಂಬಾರ್ ರೈಸ್‌ನಂತೆ ಕಂಡರು ರುಚಿಯಲ್ಲಿ ಇದು ಬೇರೆಯದೇ ರೀತಿಯಾಗಿರುತ್ತದೆ. ಅಷ್ಟೇ ಅಲ್ಲ ಇದನ್ನು ಮಾಡುವ ವಿಧಾನವು ತುಂಬಾ ಸರಳವಾಗಿದ್ದು ಸುಲಭವಾಗಿ ತಯಾರಿಸಬಹುದು.

 ಬಿಸಿಬೇಳೆ ಬಾತ್


ಬೇಕಾಗುವ ಸಾಮಾಗ್ರಿಗಳು -


ಅಕ್ಕಿ - 1 ಕಪ್


ತೊಗರಿ ಬೇಳೆ - 1/2 ಕಪ್ 


1 ಈರುಳ್ಳಿ


2 ಟೊಮೆಟೊ 


1/2 ಕಪ್ ಬಟಾಣಿ 


1/2 ಕಪ್ ಕ್ಯಾರೆಟ್


1/2 ಕಪ್ ಬೀನ್ಸ್ 


ಸ್ವಲ್ಪ ಹುಣಸೆ ಹಣ್ಣಿನ ರಸ 


ಸ್ವಲ್ಪ ಕರಿಬೇವು


ಇಂಗು 


ಎಣ್ಣೆ


ಉಪ್ಪು


8-10 ಗೋಡಂಬಿ ತುಂಡು


2-3 ಚಮಚ MTR ಬಿಸಿ ಬೇಳೆ ಬಾತ್ ಪುಡಿ                 
 

ಮಾಡುವ ವಿಧಾನ -


ಮೊದಲು ಒಂದು ಪಾತ್ರೆಯಲ್ಲಿ ತರಕಾರಿಗಳನ್ನು ಹಾಕಿ ಅದಕ್ಕೆ ನೀರು ಮತ್ತು ಸ್ವಲ್ಪ ಉಪ್ಪು ಹಾಕಿ ಬೇಯಿಸಬೇಕು. ನಂತರ ಒಂದು ಪಾತ್ರೆಯಲ್ಲಿ ಅಕ್ಕಿ ಮತ್ತು ಬೇಳೆಯನ್ನು ತೊಳೆದು ಕುಕ್ಕರಿನಲ್ಲಿ ಹಾಕಿ ಅದಕ್ಕೆ ಸ್ವಲ್ಪ ನೀರು ಜಾಸ್ತಿ ಹಾಕಿ ಬೇಯಿಸಬೇಕು. ಅನ್ನ ಚೆನ್ನಾಗಿ ಬೆಂದಿರಲಿ. ನಂತರ ಸ್ವಲ್ಪ ದೊಡ್ಡ ಬಾಣಲೆಯನ್ನು ತೆಗೆದುಕೊಂಡು ಅದನ್ನು ಸಣ್ಣ ಉರಿಯಲ್ಲಿಟ್ಟು ಎಣ್ಣೆಯನ್ನು ಬಿಸಿಮಾಡಿ. ಅದಕ್ಕೆ ಸಾಸಿವೆ, ಕರಿಬೇವಿನ ಎಲೆ, ಚಿಟಿಕೆಯಷ್ಟು ಇಂಗು, ಗೋಡಂಬಿ ಚೂರುಗಳನ್ನು ಹಾಕಿ 2 ರಿಂದ 3 ನಿಮಿಷ ಹುರಿಯಿರಿ. ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ ಹಾಕಿ ಅದು ಕಂದು ಬಣ್ಣ ಬರುವಾಗ ಅದಕ್ಕೆ ಟೊಮೆಟೋ ಹಾಕಿ ಚೆನ್ನಾಗಿ ಬೇಯಿಸಿ ತದನಂತರ ಮೊದಲೇ ಬೇಯಿಸಿದ ತರಕಾರಿಗಳನ್ನು ಅದಕ್ಕೆ ಸೇರಿಸಿ ತಿರುವಿದ ಮೇಲೆ ಅದಕ್ಕೆ 3 ಚಮಚ ಬಿಸಿ ಬೇಳೆ ಬಾತ್ ಪುಡಿ ಹುಣಸೆ ಹಣ್ಣಿನ ರಸ ಮತ್ತು ಉಪ್ಪು ಹಾಕಿ ಸ್ವಲ್ಪ ಹೊತ್ತು ಬೇಯಿಸಿ ಅದಕ್ಕೆ ಬೇಯಿಸಿದ ಅನ್ನ ಮತ್ತು ಹಿಸುಕಿದ ಬೇಳೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸ್ವಲ್ಪ ತುಪ್ಪ ಸೇರಿಸಿ 5 ನಿಮಿಷ ಬೇಯಿಸಿದರೆ ರುಚಿಕರವಾದ ಬಿಸಿಬೇಳೆ ಬಾತ್ ಸವಿಯಲು ಸಿದ್ಧ.


Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್