ರುಚಿಯಾದ ಹೆಸರುಬೇಳೆ ವಡೆ
ಬೆಂಗಳೂರು: ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ಹೆಸರುಬೇಳೆ ವಡೆ ಸಂಜೆಯ ವೇಳೆಗೆ ಒಂದೊಳ್ಳೆ ತಿನಿಸು. ಅದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ.
ಹೆಸರುಬೇಳೆ 2 ಕಪ್, ಅಕ್ಕಿ ಹಿಟ್ಟು 1/2 ಕಪ್, ಬೇಯಿಸಿದ ಆಲೂಗಡ್ಡೆ 1/2 ಕಪ್, ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ 5-6, ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ, ತುರಿದ ಶುಂಠಿ ಸ್ವಲ್ಪ, ಜೀರಿಗೆ ಪುಡಿ 2 ಚಮಚ, ಅಡುಗೆ ಸೋಡಾ 1/4 ಚಮಚ, ಉಪ್ಪು: ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು.
ಹೆಸರುಬೇಳೆಯನ್ನು 2 ಗಂಟೆ ನೀರಿನಲ್ಲಿ ನೆನೆಸಿ, ಬಸಿದು ನೀರು ಹಾಕದೆ ತರಿತರಿಯಾಗಿ ಅರೆದಿಡಿ. ಅದಕ್ಕೆ ಅಕ್ಕಿ ಹಿಟ್ಟು, ಬೇಯಿಸಿ ಮಸೆದ ಆಲೂಗಡ್ಡೆ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ ತುರಿ, ಜೀರಿಗೆ ಪುಡಿ, ಸೋಡಾ, ಉಪ್ಪು ಸೇರಿಸಿ ನೀರಿನೊಂದಿಗೆ ವಡೆಯ ಹದಕ್ಕೆ ಕಲಸಿ ಇರಿಸಿ. ನಂತರ ಹಿಟ್ಟಿನಿಂದ, ಚಿಕ್ಕ ವಡೆಗಳನ್ನು ತಟ್ಟಿ, ಎಣ್ಣೆಯಲ್ಲಿ ಕರಿಯಿರಿ.
ಬೇಕಾಗುವ ಸಾಮಗ್ರಿಗಳು:

ಮಾಡುವ ವಿಧಾನ
ಹೆಸರುಬೇಳೆಯನ್ನು 2 ಗಂಟೆ ನೀರಿನಲ್ಲಿ ನೆನೆಸಿ, ಬಸಿದು ನೀರು ಹಾಕದೆ ತರಿತರಿಯಾಗಿ ಅರೆದಿಡಿ. ಅದಕ್ಕೆ ಅಕ್ಕಿ ಹಿಟ್ಟು, ಬೇಯಿಸಿ ಮಸೆದ ಆಲೂಗಡ್ಡೆ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ ತುರಿ, ಜೀರಿಗೆ ಪುಡಿ, ಸೋಡಾ, ಉಪ್ಪು ಸೇರಿಸಿ ನೀರಿನೊಂದಿಗೆ ವಡೆಯ ಹದಕ್ಕೆ ಕಲಸಿ ಇರಿಸಿ. ನಂತರ ಹಿಟ್ಟಿನಿಂದ, ಚಿಕ್ಕ ವಡೆಗಳನ್ನು ತಟ್ಟಿ, ಎಣ್ಣೆಯಲ್ಲಿ ಕರಿಯಿರಿ.
Comments
Post a Comment