ಸುಲಭವಾಗಿ ರೆಡಿಯಾಗುವ ಆಲೂ ಬ್ರೆಡ್ ರೋಲ್ ಮಾಡುವುದು ಹೇಗೆ ಗೊತ್ತಾ...?

ಬೆಂಗಳೂರು : ಏನಾದ್ರೂ ಬಿಸಿ ಬಿಸಿಯಾದ ಸ್ನ್ಯಾಕ್ಸ್ ತಿನ್ನಬೇಕೆಂದು ಅನಿಸುವವರು ಹೊರಗೆ ಹೋಗಿ ತಿನ್ನುವ ಬದಲು ಮನೆಯಲ್ಲೇ ಸುಲಭವಾಗಿ ರೆಡಿಯಾಗುವ ಆಲೂ ಬ್ರೆಡ್ ರೋಲ್ ಮಾಡಿ  ತಿನ್ನಿ. ಅದನ್ನು ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿ:


ಆಲೂಗಡ್ಡೆ- 3,  ಬಟಾಣಿ- 1 ಕಪ್, ಈರುಳ್ಳಿ- ಅರ್ಧ ಕಪ್, ಬ್ರೆಡ್ ಸ್ಲೈಸ್- 8 ರಿಂದ 10,  ಹಸಿಮೆಣಸಿನಕಾಯಿ- 3 ರಿಂದ 4, ಧನಿಯಾ ಪುಡಿ- ಅರ್ಧ ಚಮಚ, ಉಪ್ಪು- ರುಚಿಗೆ ತಕ್ಕಷ್ಟು , ಎಣ್ಣೆ- ಸ್ವಲ್ಪ.

                                                                                                                

ಮಾಡುವ ವಿಧಾನ:


* ಕುಕ್ಕರ್‍ಗೆ ಆಲೂಗಡ್ಡೆ, ಬಟಾಣಿ ಹಾಕಿ ಬೇಯಲು ಬೇಕಾಗುವಷ್ಟು ನೀರು ಹಾಕಿ ಎರಡು ಅಥವಾ ಮೂರು ವಿಷಲ್ ಬರುವವರೆಗೆ ಬೇಯಿಸಿ.


* ಕುಕ್ಕರ್ ತಣ್ಣಗಾದ ಬಳಿಕ ಆಲೂಗಡ್ಡೆಯನ್ನು ತೆಗೆದು ಸಿಪ್ಪೆ ಸುಲಿದು, ಚೆನ್ನಾಗಿ ಹಿಸುಕಿ. ಇನ್ನೊಂದು ಪಾತ್ರೆಯಲ್ಲಿ ಬಟಾಣಿಯನ್ನು ಹರಡಿ.


* ಸ್ಟೌವ್ ಮೇಲೆ ಬಾಣಲೆಯಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಕಟ್ ಮಾಡಿದ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ.


* ಈರುಳ್ಳಿ ಕೊಂಚ ಕಂದು ಬಣ್ಣಕ್ಕೆ ಬರುತ್ತಿದ್ದಂತೆಯೇ, ಕೊತ್ತಂಬರಿ ಪುಡಿ ಹಾಕಿ ಮತ್ತೆ ಹುರಿಯಿರಿ.


* ನಂತರ ಇದಕ್ಕೆ ಬೇಯಿಸಿದ ಬಟಾಣಿ ಹಾಕಿ ಫ್ರೈ ಮಾಡಿ. ಬಳಿಕ ಆಲೂಗಡ್ಡೆಯನ್ನು ಬೆರೆಸಿ ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಒಲೆಯಿಂದ ಕೆಳಗಿಳಿಸಿ.


* ಬ್ರೆಡ್ ಪೀಸ್‍ಗಳನ್ನು ತಣ್ಣೀರಿನಲ್ಲಿ ಮುಳುಗಿಸಿ ನೀರು ಹೀರಿಕೊಳ್ಳುವಂತೆ ಮಾಡಿ. ಈ ಪೀಸ್ ಗಳನ್ನು ಕೈಯಲ್ಲಿ ಮೆಲ್ಲಗೆ ಒತ್ತಿ ನೀರನ್ನು ತೆಗೆಯಿರಿ.


* ಆಲೂಗಡ್ಡೆ ಮಿಶ್ರಣವನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ.


* ಈ ಉಂಡೆಗಳನ್ನು ಬ್ರೆಡ್‍ಪೀಸ್ ನ ಮಧ್ಯೆ ಇಟ್ಟು ಎರಡೂ ಕಡೆ ಬ್ರೆಡ್ ನಿಂದ ಉಂಡೆ ಆವರಿಸುವಂತೆ ಮಡಚಿಕೊಳ್ಳಿ.


* ಇನ್ನೊಂದು ಬಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ರೆಡಿ ಮಾಡಿಟ್ಟಿದ್ದ ಬ್ರೆಡ್‍ಗಳನ್ನು ಸಣ್ಣ ಉರಿಯಲ್ಲಿ ಕರಿಯಿರಿ.


* ಕಂದು ಬಣ್ಣಕ್ಕೆ ಬರುವವರೆಗೆ ಕರಿದು ತೆಗೆಯಿರಿ


* ಟೊಮೆಟೋ ಸಾಸ್ ಅಥವಾ ಚಟ್ನಿಯೊಂದಿಗೆ ಸವಿಯಿರಿ.


Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್