ಸ್ವಾದಿಷ್ಠವಾದ ಮೊಟ್ಟೆ ಬೋಂಡಾ
ಬೇಕಾಗುವ ಸಾಮಗ್ರಿ
ಬೇಯಿಸಿದ ಮೊಟ್ಟೆಗಳು: ಐದು (ಮಧ್ಯಮ ಗಾತ್ರ)
ಕಡ್ಲೆಹಿಟ್ಟು: - ½ ಕಪ್
ಕೆಂಪು ಮೆಣಸಿನ ಪುಡಿ - 1 ಚಿಕ್ಕ ಚಮಚ
ಉಪ್ಪು
ಎಣ್ಣೆ
ಮಾಡುವ ವಿಧಾನ
- ಬೇಯಿಸಿದ ಮೊಟ್ಟೆಗಳನ್ನು ಎರಡು ಭಾಗವಾಗಿ ಕತ್ತರಿಸಿ ಅಥವಾ ಇಡಿಯಾಗಿ ನಿಮ್ಮಿಷ್ಟದಂತೆ ಬೋಂಡಾ ಮಾಡಬಹುದು.
- ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು, ನೀರು, ಮೆಣಸಿನ ಪುಡಿ ಉಪ್ಪು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
- ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿಮಾಡಿ.
- ಎಣ್ಣೆ ಕುದಿಯಲು ಪ್ರಾರಂಭವಾಗುತ್ತಲೇ ಬೇಯಿಸಿದ ಮೊಟ್ಟೆಗಳನ್ನು ಕಡ್ಲೆಹಿಟ್ಟಿನಲ್ಲಿ ಮುಳುಗಿಸಿ ಪೂರ್ಣ ಆವರಿಸುವಂತೆ ಮಾಡಿ ಎಣ್ಣೆಯಲ್ಲಿ ನಿಧಾನವಾಗಿ ಇಳಿಬಿಡಿ.
- ಅಂಚುಗಳು ಕೊಂಚ ಕಪ್ಪಾಗತೊಡಗಿದಾಕ್ಷಣ ಎಣ್ಣೆಯಿಂದ ಹೊರತೆಗೆಯಿರಿ.
Comments
Post a Comment