ಒಮ್ಮೆ ಮಾವಿನಕಾಯಿ ಅಪ್ಪೆಹುಳಿ ಮಾಡಿ ಸವಿದು ನೋಡಿ...!!

ಮಾವಿನಕಾಯಿ ಅಪ್ಪೆಹುಳಿ ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ತುಂಬಾ ಜನಪ್ರಿಯವಾದದ್ದು. ಮಾವಿನಕಾಯಿಯ ಸೀಸನ್‌ನಲ್ಲಿ ಬಹುಪಾಲು ಜನರು ಇದನ್ನು ಮಾಡಿ ಸವಿಯುತ್ತಾರೆ. ಉಪ್ಪು, ಹುಳಿ, ಖಾರದಿಂದ ಕೂಡಿರುವ ಇದು ಬಹಳ ರುಚಿಯಾಗಿರುತ್ತದೆ ಮತ್ತು ಮಾಡುವುದೂ ಸುಲಭ.

 ಬೇಕಾಗುವ ಸಾಮಗ್ರಿಗಳು:


ಹುಳಿ ಮಾವಿನಕಾಯಿ - 1


ಬೆಳ್ಳುಳ್ಳಿ - 1 ಗಡ್ಡೆ


ಹಸಿಮೆಣಸು - 2


ಕರಿಬೇವು - ಸ್ವಲ್ಪ


ಉಪ್ಪು - ರುಚಿಗೆ


ಬೆಲ್ಲ - ಸ್ವಲ್ಪ


ಇಂಗು - 1/4 ಚಮಚ


ಉದ್ದಿನ ಬೇಳೆ - 1 ಚಮಚ


ಸಾಸಿವೆ - 1 ಚಮಚ


ಬಿಳಿ ಎಳ್ಳು - 1 ಚಮಚ


ಒಣ ಮೆಣಸು - 1-2


ಎಣ್ಣೆ - 3-4 ಚಮಚ
 

ಮಾಡುವ ವಿಧಾನ:


* ಮಾವಿನಕಾಯಿಯ ಸಿಪ್ಪೆ ತೆಗೆದು ಚೆನ್ನಾಗಿ ಬೇಯಿಸಿ. ಬೇಯಿಸಿದ ಮಾವಿನಕಾಯಿಯು ಸ್ವಲ್ಪ ಆರಿದ ಮೇಲೆ ಅದನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿ.

* ಒಂದು ಬಾಣಲೆಯನ್ನು ಸ್ಟ್ವೌ ಮೇಲಿಟ್ಟು 3-4 ಚಮಚ ಎಣ್ಣೆಯನ್ನು ಹಾಕಿ. ಎಣ್ಣೆ ಸ್ವಲ್ಪ ಬಿಸಿಯಾದ ನಂತರ ಅದಕ್ಕೆ ಉದ್ದಿನ ಬೇಳೆ, ಸಾಸಿವೆ, ಎಳ್ಳು, ಮೆಣಸು, ಹೆಚ್ಚಿದ ಹಸಿಮೆಣಸು, ಹೆಚ್ಚಿದ ಬೆಳ್ಳುಳ್ಳಿ, ಕರಿಬೇವು ಮತ್ತು ಇಂಗನ್ನು ಹಾಕಿ ಒಗ್ಗರಣೆಯನ್ನು ರೆಡಿ ಮಾಡಿಕೊಳ್ಳಿ.

* ಈ ಮೊದಲೇ ಸ್ಮ್ಯಾಶ್ ಮಾಡಿಟ್ಟುಕೊಂಡಿರುವ ಮಾವಿನಕಾಯಿಯನ್ನು ಒಗ್ಗರಣೆಗೆ ಸೇರಿಸಿ. ಅದಕ್ಕೆ 2-3 ಕಪ್ ನೀರನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲವನ್ನು ಸೇರಿಸಿ ಕುದಿಸಿಕೊಂಡರೆ ಮಾವಿನಕಾಯಿ ಅಪ್ಪೆಹುಳಿ ರೆಡಿ.

ಇದನ್ನು ನಿಮ್ಮ ರುಚಿಗೆ ಸರಿಹೊಂದುವ ಹಾಗೆ ನೀವು ಮಾಡಿಕೊಳ್ಳಬಹುದು. ಸಿಹಿ ಮತ್ತು ಖಾರವನ್ನು ನಿಮ್ಮ ಅಗತ್ಯಕ್ಕೆ ತಕ್ಕಹಾಗೆ ಬಳಸಿಕೊಳ್ಳಬಹುದು. ಇದನ್ನು ನೀವು ಅನ್ನದ ಜೊತೆಯಲ್ಲಿ ಸೇವಿಸಬಹುದು ಅಥವಾ ಸೂಪ್ ಮಾದರಿಯಲ್ಲೂ ಸೇವಿಸಬಹುದು. ನೀವೂ ಒಮ್ಮೆ ಮಾವಿನಕಾಯಿ ಅಪ್ಪೆಹುಳಿಯನ್ನು ಮಾಡಿ ಸವಿದು ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್