ದಹಿ ಬೆಂಡೆಯ ಪಾಕ ವಿಧಾನ

ಬೆಂಡೆ, ಓಕ್ರಾ, ಲೇಡೀ ಫಿಂಗರ್ ಎಂದೆಲ್ಲಾ ಕರೆಯುವ ಈ ತರಕಾರಿ ಸಮೃದ್ಧವಾದ ಕಬ್ಬಿಣಾಂಶವನ್ನು ಹೊಂದಿದೆ. ಇದರಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಭಾರತೀಯರು ಹೆಚ್ಚು ಪ್ರೀತಿಸುತ್ತಾರೆ. ಹೃದಯದ ಆರೋಗ್ಯಕ್ಕೆ ಬಹು ಉತ್ತಮವಾದ ತರಕಾರಿ. ಇದರಲ್ಲಿ ಕ್ಯಾಲೋರಿ ಗುಣವು ಬಹಳ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ತೂಕ ಇಳಿಸಲು ಸಹ ಇದು ಸಹಾಯ ಮಾಡುತ್ತದೆ. ಮೊಸರಿನೊಂದಿಗೆ ಬೆಂಡೆಕಾಯಿ ಸೇರಿಸಿ ಮಾಡುವ ಆಹಾರ ಪದಾರ್ಥವು ಅತ್ಯುತ್ತಮವಾದ ಆಹಾರ ಪದಾರ್ಥ ಎನ್ನಬಹುದು.

 ಮೊಸರಿನೊಂದಿಗೆ ಬೆಂಡೆಯನ್ನು ಬೆರೆಸಿ ತಯಾರಿಸುವ ವಿಶೇಷ ಪದಾರ್ಥವನ್ನು ಅನ್ನ ಮತ್ತು ಚಪಾತಿಯೊಂದಿಗೆ ಸಹ ಸವಿಯಬಹುದು. ಮೊಸರು, ವಿಶೇಷ ಬಗೆಯ ಮಸಾಲ ಪದಾರ್ಥಗಳು ಹಾಗೂ ಬೆಂಡೆಯ ಮಿಶ್ರಣದಿಂದ ತಯಾರಾಗುವ ದಹಿ ಬೆಂಡೆ ವಿಭಿನ್ನವಾದ ರುಚಿಯೊಂದಿಗೆ ನಾಲಿಗೆ ಚಪ್ಪರಿಸುವಂತೆ ಮಾಡುವುದು. 

ಕಡಿಮೆ ಪ್ರಮಾಣದ ಕ್ಯಾಲೋರಿ ಹಾಗೂ ಮಸಾಲೆ ಭರಿತ ಪಾಕವಿಧಾನವನ್ನು ಬಯಸುವವರಿಗೆ ಇದು ಅತ್ಯುತ್ತಮವಾದ ಪಾಕವಿಧಾನ ಆಗುವುದು. ಸಾಮಾನ್ಯವಾಗಿ ಭಾರತದೆಲ್ಲೆಡೆ ತಯಾರಿಸುವ ಈ ಪಾಕವಿಧಾನವನ್ನು ಬಹಳ ಕಡಿಮೆ ಸಮಯದಲ್ಲಿ, ಸರಳ ವಿಧಾನದ ಮೂಲಕ ಸುಲಭವಾಗಿ ತಯಾರಿಸಬಹುದು. ನಿಮಗೂ ಈ ಪಾಕವಿಧಾನವನ್ನು ತಯಾರಿಸಬೇಕು ಹಂಬಲವಾಗುತ್ತಿದ್ದರೆ ಈ ಮುಂದೆ ನೀಡಲಾಗಿರುವ ವೀಡಿಯೋ ಮತ್ತು ಹಂತ ಹಂತವಾದ ಚಿತ್ರ ವಿವರಣೆಯನ್ನು ವಿವರಿಸಿ.

Ingredients


 ಹೆಚ್ಚಿಕೊಂಡ ಬೆಂಡೆಕಾಯಿ -2 ಕಪ್

 ಉಪ್ಪು - 1 ಟೀ ಚಮಚ 

ಖಾರದ ಪುಡಿ/ಮೆಣಸಿನ ಪುಡಿ -1 ಟೀಚಮಚ

 ಮೊಸರು -1 ಕಪ್ 

ದನಿಯಾ ಪುಡಿ- 2 ಟೇಬಲ್ ಚಮಚ 

ಕಡ್ಲೇ ಹಿಟ್ಟು -1 ಟೀಚಮಚ 

ಸೋಂಪು - 1 ಟೀಚಮಚ

 ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು -ಅಲಂಕಾರಕ್ಕೆ 

ಜೀರಿಗೆ - 1 ಟೀಚಮಚ


How to Prepare


 1. ಒಂದು ಪಾತ್ರೆಯಲ್ಲಿ ಮೂರು ಗ್ಲಾಸ್ ನೀರನ್ನು ಸೇರಿಸಿ, ಕುದಿಯಲು ಬಿಡಿ.

 2. ಕುದಿ ಬರುವವರೆಗೆ ಮುಚ್ಚಳವನ್ನು ಮುಚ್ಚಿ. 

3. ಕುದಿ ಬಂದ ನಂತರ ಮುಚ್ಚಳವನ್ನು ತೆರೆಯಿರಿ.

 4. ಸ್ಟಟೀಮರ್ ಅನ್ನು ಜೋಡಿಸಿ. 

5. ಸ್ಟೀಮರ್ ಮೇಲೆ ಹೆಚ್ಚಿಕೊಂಡ ಬೆಂಡೆಕಾಯನ್ನು ಹಾಕಿ, ಮುಚ್ಚಳವನ್ನು ಮುಚ್ಚಿ.

 6. 5 ನಿಮಿಷ ಹಬೆಯಲ್ಲಿ ಬೇಯಲು ಬಿಡಿ. 

7. ಇನ್ನೊಂದು ಬೌಲ್ ತೆಗೆದುಕೊಂಡು, ಮೊಸರನ್ನು ಸೇರಿಸಿ. 

8. ಅದಕ್ಕೆ ಉಪ್ಪು, ಕಡ್ಲೇ ಹಿಟ್ಟು ಮತ್ತು ಅರಿಶಿನ ಪುಡಿಯನ್ನು ಸೇರಿಸಿ. 

9. ಖಾರದ ಪುಡಿ ಮತ್ತು ದನಿಯಾ ಪುಡಿಯನ್ನು ಸೇರಿಸಿ. 

10. ಚೆನ್ನಾಗಿ ಮಿಶ್ರಗೊಳಿಸಿ, ಪಕ್ಕಕ್ಕೆ ಇಡಿ. 

11. ಬೆಂಡೆಕಾಯಿ ಬೆಂದಿದೆಯೇ ಎಂದು ಪರೀಕ್ಷಿಸಿ, ಹಬೆಯಿಂದ ತೆಗೆಯಿರಿ. 

12. ಇನ್ನೊಂದು ಪಾತ್ರೆಯನ್ನು ತೆಗೆದುಕೊಳ್ಳಿ.

 13. ಒಂದು ಟೀ ಚಮಚ ಎಣ್ಣೆಯನ್ನು ಸೇರಿಸಿ. 

14. ಸೋಂಪು ಮತ್ತು ಜೀರಿಗೆಯನ್ನು ಸೇರಿಸಿ. 

15. ಚೆನ್ನಾಗಿ ಹುರಿಯಿರಿ.

 16. ತಯಾರಿಸಿಟ್ಟುಕೊಂಡ ಮೊಸರಿನ ಮಿಶ್ರಣವನ್ನು ಇದಕ್ಕೆ ಸೇರಿಸಿ. 

17. ಒಂದು ಕಪ್ ನೀರನ್ನು ಸೇರಿಸಿ. 

18. ಇದನ್ನು ಕುದಿಯಲು ಬಿಡಿ.

 19. ಹಬೆಯಲ್ಲಿ ಬೆಂದ ಬೆಂಡೆಕಾಯನ್ನು ಸೇರಿಸಿ, ಮುಚ್ಚಳವನ್ನು ಮುಚ್ಚಿ. 3-4 ನಿಮಿಷಗಳ ಕಾಲ ಕುದಿಯಲು ಬಿಡಿ. 

20. ಮುಚ್ಚಳವನ್ನು ತೆರೆದು ಒಮ್ಮೆ ಚೆನ್ನಾಗಿ ತಿರುವಿ. 

21. ಬಿಸಿ ಇರುವಾಗಲೇ ಅನ್ನ ಅಥವಾ ಚಪಾತಿಯೊಂದಿಗೆ ಸವಿಯಲು ನೀಡಿ





Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್