ಸ್ವಾದಿಷ್ಠ ಈರುಳ್ಳಿ ಚಿಕನ್
ಬೇಕಾಗುವ ಸಾಮಗ್ರಿಗಳು -
ಸ್ವಚ್ಛಗೊಳಿಸಿದ ಚಿಕನ್ - ಅರ್ಧ ಕೆಜಿ
ಚಿಕ್ಕದಾಗಿ ಹೆಚ್ಚಿದ ಟೊಮಾಟೊ - 3-4
ಚಿಕ್ಕದಾಗಿ ಹೆಚ್ಚಿದ ಈರುಳ್ಳಿ- 3-4
ಶುಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ
ಮೊಸರು - ಒಂದು ಕಪ್
ಹಸಿಮೆಣಸಿನ ಕಾಯಿ - 5-6
ಖಾರ ಪುಡಿ - 1/2 ಚಮಚ
ಎಣ್ಣೆ
ಉಪ್ಪು
ಮಾಡುವ ವಿಧಾನ
- ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಅದಕ್ಕೆ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ.
- ಅದಕ್ಕೆ ಟೊಮಾಟೊ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಕಾಯಿ, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ 5-10 ನಿಮಿಷಗಳ ಕಾಲ ಬೇಯಿಸಿ
- ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಅದಕ್ಕೆ ಚಿಕನ್ ಹಾಕಿ 10-15 ನಿಮಿಷಗಳ ಕಾಲ ಬೇಯಿಸಿ
- ಹುರಿದ ತುಂಡುಗಳನ್ನು ಈರುಳ್ಳಿ ಮಿಶ್ರಣಕ್ಕೆ ಸೇರಿಸಿ.
- ಚಿಕನ್ ಬೆಂದ ನಂತರ, ಮೊಸರನ್ನು ಸೇರಿಸಿ 5 ನಿಮಿಷ ಬೇಯಿಸಿ. ಕೊತ್ತಂಬರಿ ಸೊಪ್ಪುಗಳನ್ನು ಸೇರಿಸಿದರೆ ಈರುಳ್ಳಿ ಚಿಕನ್ ರೆಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
Comments
Post a Comment