ಸರಳ ಮತ್ತು ರುಚಿಕರ ಬ್ರೆಡ್ ಪಿಜ್ಜಾ

 ಬೇಕಾಗುವ ಸಾಮಾಗ್ರಿಗಳು - 


ಬ್ರೆಡ್- 4 ಸ್ಲೈಸ್


ಚಿಕ್ಕದಾಗಿ ಹೆಚ್ಚಿದ ಈರುಳ್ಳಿ- 1/4 ಕಪ್


ಚಿಕ್ಕದಾಗಿ ಹೆಚ್ಚಿದ ಕ್ಯಾಪ್ಸಿಕಮ್- 1/4 ಕಪ್


ಚೀಸ್ -  1/4 ಕಪ್


ಟೊಮೆಟೋ ಸಾಸ್ ಅಥವಾ ಪಿಜ್ಜಾ ಸಾಸ್- 4 ಚಮಚ


ಕಾಳುಮೆಣಸಿನಪುಡಿ ಅಥವಾ ಇಟಾಲಿಯನ್ ಮಸಾಲೆ- 1 ಚಿಟಿಕೆ


ಚಿಲ್ಲಿ ಫ್ಲೇಕ್ಸ್- ಸ್ವಲ್ಪ


ಕ್ಯಾಬೇಜ್ ಎಲೆಗಳು- 4 ಚಮಚ


ಮಾಯೊನೀಸ್ - 4 ಚಮಚ



 ಮಾಡುವ ವಿಧಾನ - 


- ಮೊದಲು ಬ್ರೆಡ್‍ನ ಒಂದು ಬದಿಗೆ 1 ಚಮಚದಷ್ಟು ಟೊಮೆಟೋ ಸಾಸ್ ಅಥವಾ ಪಿಜ್ಜಾ ಸಾಸ್ ಸವರಿಕೊಳ್ಳಿ. ಅದರ ಮೇಲೆ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ಚಿಕ್ಕದಾಗಿ ಹೆಚ್ಚಿದ ಕ್ಯಾಪ್ಸಿಕಮ್ ತುಂಡುಗಳು, ಕ್ಯಾಬೇಜ್ ಎಲೆಗಳನ್ನು ಹಾಕಿ. 


- ಅದರ ಮೇಲೆ ಕಾಳುಮೆಣಸಿನಪುಡಿ ಮತ್ತು ಚಿಲ್ಲಿ ಫ್ಲೇಕ್ಸ್ ಹರಡಿ.


- ನಂತರ ಅದರ ಮೇಲೆ 1 ಚಮಚದಷ್ಟು ಮಾಯೊನೀಸ್ ಮತ್ತು ಚೀಸ್ ಹಾಕಿ ಹರಡಿ.


- ನಂತರ ಒಲೆಯ ಮೇಲೆ ತವಾ ಇಟ್ಟು ಬಿಸಿಯಾದ ಬಳಿಕ ಅದಕ್ಕೆ ಸ್ವಲ್ಪ ತುಪ್ಪ ಸವರಿ ಚೀಸ್ ಕರಗುವವರೆಗೆ ಅಂದ್ರೆ 5-7 

ನಿಮಿಷಗಳ ಕಾಲ ಒಲೆಯಲ್ಲಿ ಬಿಸಿ ಮಾಡಿ. ಒಲೆಯಿಂದ ತೆಗೆದ ಬ್ರೆಡ್ ಪಿಜ್ಜಾವನ್ನು ಬಿಸಿಬಿಸಿ ಇರುವಾಗಲೇ ಸವಿಯಿರಿ.

Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್