ಮಶ್ರೂಮ್ ರೈಸ್

 ಬೇಕಾಗುವ ಸಾಮಗ್ರಿಗಳು 


ಅನ್ನ - 1 ½ ಕಪ್ 


ಅಣಬೆ - 500 ಗ್ರಾಂ


ಈರುಳ್ಳಿ - 1 (ಹೆಚ್ಚಿದ್ದು) 


ಕರಿಮೆಣಸು- 2 ಟೀ.ಚಮಚ 


ಖಾರದಪುಡಿ - 1 ಟೀ.ಚಮಚ 


ಸಾಸಿವೆ ಪುಡಿ - 1 ಟೀ.ಚಮಚ 


ಕೊತ್ತಂಬರಿ ಪುಡಿ - 1 ಟೀ.ಚಮಚ 


ಹಸಿ ಮೆಣಸಿನಕಾಯಿಗಳು - 1 


ಬೆಣ್ಣೆ - 1 ಟೀ.ಚಮಚ 


ಎಣ್ಣೆ - 2 ಟೀ.ಚಮಚ 


ಉಪ್ಪು 



 ಮಾಡುವ ವಿಧಾನ 


- ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಡಿ, ಇದಕ್ಕೆ ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನ ಕಾಯಿಗಳನ್ನು ಹಾಕಿ ಚೆನ್ನಾಗಿ ಹುರಿಯಿರಿ. 


- ಅದಕ್ಕೆ ಖಾರದ ಪುಡಿ, ಸಾಸಿವೆ ಪುಡಿ ಮತ್ತು ಕೊತ್ತಂಬರಿ ಪುಡಿಯನ್ನು ಹಾಕಿ ಹುರಿಯಿರಿ.


- ಇದಕ್ಕೆ ಮಶ್ರೂಮ್, ಕರಿಮೆಣಸು ಪುಡಿ, ಅನ್ನವನ್ನು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ


- 10 ನಿಮಿಷ ಬೇಯಿಸಿ ಉಪ್ಪನ್ನು ಹಾಕಿದರೆ ರುಚಿಕರ ಮಶ್ರೂಮ್ ರೈಸ್ ಸವಿಯಲು ಸಿದ್ದ.


Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್