ಸ್ವಾದಿಷ್ಠಕರವಾದ ಚಿಕನ್ ಪೆಪ್ಪರ್ ಡ್ರೈ

ಬೇಕಾಗುವ ಸಾಮಗ್ರಿಗಳು-


ಚಿಕನ್ - 1 ಕೆಜಿ

ಶುಂಠಿ, ಬೆಳ್ಳುಳ್ಳಿ ಪೇಸ್ಟ್ - ಸ್ವಲ್ಪ

ಗರಂ ಮಸಾಲ - 1/2 ಚಮಚ

ಟೊಮೆಟೊ- 2 ಹೆಚ್ಚಿದ್ದು

ಈರುಳ್ಳಿ - 2 ಹೆಚ್ಚಿದ್ದು

ಅರಿಶಿಣ ಪುಡಿ - ಸ್ವಲ್ಪ

ಕೊತ್ತಂಬರಿ ಸೊಪ್ಪು - ಸ್ವಲ್ಪ

ಕಾಳು ಮೆಣಸಿನ ಪುಡಿ - 3-4 ಚಮಚ

ಹಸಿಮೆಣಸಿನ ಕಾಯಿ - 2 

ಕರಿಬೇವಿನ ಎಲೆ - ಸ್ವಲ್ಪ

ಎಣ್ಣೆ

ಉಪ್ಪು


ಮಾಡುವ ವಿಧಾನ-


- ಕೋಳಿ ಮಾಂಸವನ್ನು ತೊಳೆದು ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ ಪುಡಿ, ಕಾಳು ಮೆಣಸಿನ ಪುಡಿ, ಅರಿಶಿಣದ ಪುಡಿ ಹಾಗೂ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 1 ಗಂಟೆಗಳ ಕಾಲ ನೆನೆಯಲು ಬಿಡಿ. 

- ನಂತರ ಬಾಣಲೆಗೆ ಅರ್ಥದಷ್ಟು ಎಣ್ಣೆ ಹಾಕಿ ಕಾಯಿಸಿ. ಕಾದ ಎಣ್ಣೆಗೆ ಮಸಾಲೆ ಮಿಶ್ರಿತ ಚಿಕನ್ ಹಾಕಿ ಸ್ವಲ್ಪ ಕಂದು ಬಣ್ಣ ಬರುವಾಗ ತೆಗೆಯಯಿರಿ. 

- ನಂತರ ಪಾತ್ರೆಯೊಂದಕ್ಕೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಜಜ್ಜಿದ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗ ಹುರಿದು ಟೊಮೆಟೊ ಹಾಕಿ ನಂತರ ಎಣ್ಣೆಯಲ್ಲಿ ಕರಿದ ಮಾಂಸವನ್ನು ಹಾಕಿ ಮಿಶ್ರಣ ಮಾಡಿದರೆ ಚಿಕನ್ ಪೆಪ್ಪರ್ ಡ್ರೈ ಸವಿಯಲು ಸಿದ್ಧ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್